ಅನಿರೀಕ್ಷಿತವಾಗಿ ಸರ್ಕಾರಿ ಬಸ್ ಪ್ರಯಾಣ ಬೆಳೆಸಿ ಸಾರ್ವಜನಿಕರ ಕುಂದುಕೊರೆತೆಗಳನ್ನು ಆಲಿಸಿದ ಬೈಲಹೊಂಗಲ ಉಪವಿಭಾಗಾಧಿಕಾರಿ ಎಫ್. ಪ್ರಭಾವತಿ
ಬೈಲಹೊಂಗಲ ಉಪವಿಭಾಗಾಧಿಕಾರಿಗಳಾದ ಎಫ್. ಪ್ರಭಾವತಿ ಇವರು ಈ ದಿನ ಅನಿರೀಕ್ಷಿತವಾಗಿ ಸರ್ಕಾರಿ ಬಸ್ ಪ್ರಯಾಣ ಬೆಳೆಸಿ ಸಾರ್ವಜನಿಕರ ಕುಂದುಕೊರೆತೆಗಳನ್ನು ಆಲಿಸಿದರು.
> ಸರ್ಕಾರದ ಮಹತ್ತರ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಬಗ್ಗೆ ಮಹಿಳೆಯರಿಂದ ಒಳ್ಳೆಯ
ಪ್ರಶಂಸೆ ವ್ಯಕ್ತವಾಯಿತು, ವೇಳೆಗೆ ಸರಿಯಾಗಿ ಬಸ್‌ಗಳು ಬರದೆ ಇರುವುದರಿಂದ ಶಾಲಾ-ಮಕ್ಕಳಿಗೆ ಸ್ವಲ್ಪ
ತೊಂದರೆ ಆಗುತ್ತಿರುವುದು ಗಮನಕ್ಕೆ ಬಂದಿದ್ದು, ಸಾರಿಗೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ
ನೀಡಲಾಗುವುದು. ಸಾಣಿಕೊಪ್ಪ ಗ್ರಾಮದ ಬಸ್‌ನಲ್ಲಿರುವ ಕೆಲವು 60ಕ್ಕಿಂತಲೂ ಹೆಚ್ಚು ವಯಸ್ಸಾದ ಪುರುಷರಿಗೆ ಸಿನಿಯರ್ ಸಿಟಿಜನ್ ಆಗದೇ ಇರುವುದರಿಂದ, ಸಂಬಂದಪಟ್ಟ ಅಧಿಕಾರಿಗೆ ದೂರವಾಣಿ ಮೂಲಕ ತುರ್ತಾಗಿ ಒದಗಿಸಲು ಸೂಚಿಸಲಾಯಿತು.
> ಕೆಲವು ಜನರಿಗೆ ರೇಶನ್ ಕಾರ್ಡ ರದ್ದಾಗಿದ್ದು, ಆಹಾರ ಇಲಾಖೆಗೆ ಸಂಪರ್ಕಿಸಿ ಅವಶ್ಯಕ ದಾಖಲೆಗಳನ್ನು
ಒದಗಿಸಲು ತಿಳಿಸಲಾಯಿತು.
ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಸಮಾಲೋಚಿಸಲಾಗಿ, ತಮ್ಮ ತಮ್ಮ ವ್ಯಯಕ್ತಿಕ ಸಮಸ್ಯೆಗಳನ್ನು ಹಂಚಿಕೊಳ್ಳುವಂತೆ ತಿಳಿಸಿ, ಉಪವಿಭಾಗಾಧಿಕಾರಿಗಳ ವ್ಯಯಕ್ತಿಕ ಮೊಬೈಲ್ ನಂಬರು ನೀಡಲಾಯಿತು.
• ಸಾಕಷ್ಟು ಬಸ್‌ಗಳಲ್ಲಿ ಸ್ವಚ್ಚತೆ ಇಲ್ಲದೇ ಇರುವುದು ಸಾರ್ವಜನಿಕರಿಂದ ದೂರು ಸ್ವೀಕರಿಸಲಾಯಿತು.
ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗೆ ಕಟ್ಟುನಿಟ್ಟಿನ ನಿರ್ದೆಶನ ನೀಡಲಾಗುವುದು ಎಂದು
ತಿಳಿಸಲಾಯಿತು.
0 Comments