ಪೊಲೀಸರಿಗೆ ತಲೆನೋವಾದ ಯುವಕನ ನಾಪತ್ತೆ ಪ್ರಕರಣ..!!
ಖಾನಾಪೂರ:ತಾಲೂಕಿನ ಕಳೆದ ರವಿವಾರ ಕೊಡಚವಾಡ ಗ್ರಾಮದ ಸಂಪತ ಕುಮಾರ ಬಡಿಗೇರ ಎಂಬ ಯುವಕ ನಾಪತ್ತೆಯಾಗಿದ್ದು ಆತನ ಬೈಕ ಯಡೋಗಾ ಬಳಿ ಇರುವ ಮಲಪ್ರಭಾ ನದಿ ಸೇತುವೆ ಬಳಿ ಪೊದೆಯಲ್ಲಿ ದೊರತು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಅವತ್ತಿನಿಂದಲೆ ಪ್ರಕರಣ ಬೆನ್ನತ್ತಿದ ಪೊಲೀಸರು ನದಿ ಪಾತ್ರ ಸೇರಿ ಹಲವೆಡೆ ಹುಡುಕಾಟ ನಡೆಸಿದ್ದಾರೆ ಆದರೆ ಈಗ ಐದು ದಿನ ಕಳೆದರೂ ಯುವಕ ಬದುಕಿದ್ದಾನೊ ಇಲ್ಲೊ ಎನ್ನುವ ಸುಳಿವು ಸಿಗದೆ ಪೊಲೀಸರಿಗೆ ತಲೆಬಿಸಿಯಾಗಿದೆ.
ಒಂದೂವರೆ ವರ್ಷದ ಹಿಂದೆಯೆ ಮದುವೆಯಾಗಿದ್ದ ಸಂಪತಕುಮಾರ ಸಂಸಾರ ಚೆನ್ನಾಗಿಯೇ ಇತ್ತು ಆದರೆ ಈಗ ಏಕಾಏಕಿ ಕಣ್ಮರೆಯಾಗಿದ್ದು ಇದು ಕೊಲೆಯೋ..? ಆತ್ಮಹತ್ಯೆಯೋ.? ಅಥವಾ ಅಪಹರಣೋ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು ಈ ಪ್ರಕರಣ ಭೇದಿಸಲು ಅಪರ ಪೊಲೀಸ್ ವರಿಷ್ಠಾಧಿಕಾರಿ ಡಿವಾಯ್ಎಸ್ಪಿ ರವಿ ನಾಯಕ ಖಾನಾಪುರ ಸಿಪಿಆಯ ಮಂಜುನಾಥ ನಾಯ್ಕ ಸೇರಿದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಐದು ದಿನಗಳಿಂದ ಸ್ಥಳದಲ್ಲೇ ಠಿಕಾಣಿ ಹೂಡಿದ್ದಾರೆ.
ಅಲ್ಲದೇ ಸುತ್ತ ಮುತ್ತಲಿನ ಲಭ್ಯವಿರುವ ಸಿಸಿಟಿವಿ ಪೊಲೀಸರು ಪರಿಶೀಲಿಸಿದ್ದಾರದರೂ ಯಾವುದೇ ಸುಳಿವು ಪತ್ತೆಯಾಗಿಲ್ಲ ಅಲ್ಲದೆ ಮಂಗಳವಾರ ಮಧ್ಯಾಹ್ನದಷ್ಟೊತ್ತಿಗೆ ಯುವಕನ ಮೊಬೈಲ ಮತ್ತು ಬ್ಯಾಗ ಮಲಪ್ರಭ ನದಿಯಲ್ಲಿ ದೊರೆತಿದ್ದು ಪೊಲೀಸರ ಹುಡುಕಾಟ ತೀವ್ರಗೊಂಡಿದ್ದು ಬುದುವಾರ ದಾಂಡೇಲಿಯಿಂದ ಬೋಟ ತರೆಸಿ ಇನ್ನೂ ಹೆಚ್ಚಿನ ಹುಡುಕಾಟ ನಡೆಸುವುದಾಗಿ ಡಿವಾಯ್ಎಸ್ಪಿ ರವಿ ನಾಯಕ ಮಾಹಿತಿ ನೀಡಿದ್ದಾರೆ.
0 Comments