ಬೆಳಗಾವಿ: ಭಯದ ವಾತಾವರಣ ಸೃಷ್ಟಿಸುವ ಪುಂಡರಿಗೆ ಜಾಗವಿಲ್ಲ, ಡಿಸಿಪಿ ರೋಹನ್
ಸಾರ್ವಜನಿಕರ ಹಾಗೂ ಪೊಲೀಸರ ನಡುವೆ ಸೌಹಾರ್ಧತೆ ಮುಖ್ಯವಾಗಿರುತ್ತದೆ. ಕೆಳ ಹಂತದ ಅಧಿಕಾರಿ, ಸಿಬ್ಬಂದಿಗಳಿಂದ ಲೋಪವಾಗಬಹುದು. ಇದರಿಂದಾಗಿ ಪೊಲೀಸರಿಂದ ನಮಗೆ ನ್ಯಾಯ ಸಿಕ್ಕಿಲ್ಲ ಎಂಬ ಕೊರಗು ಜನರಲ್ಲಿ ಮೂಡಬಾರದು. ಅನ್ಯಾವಾಗಿದ್ದಲ್ಲಿ ಅಥವಾ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದಲ್ಲಿ ನೇರವಾಗಿ ಮೇಲಾಧಿಕಾರಿಗಳನ್ನು ಭೇಟಿ ಮಾಡಬಹುದು. ನನ್ನ ಕಚೇರಿಗೆ ಆಗಮಿಸುವ ಪ್ರತಿಯೊಬ್ಬರಿಗೂ ಸದಾಕಾಲವೂ ಬಾಗಿಲು ತೆರೆದಿರುತ್ತದೆ: ಡಿಸಿಪಿ ರೋಹನ್ ಜಗದೀಶ
ಬೆಳಗಾವಿ(ಸೆ.08): ಗಡಿನಾಡು, ಕುಂದಾನಗರಿ ಬೆಳಗಾವಿ ಒಂದಿಲ್ಲೊಂದು ಪ್ರಕರಣದ ಮೂಲಕ ರಾಜ್ಯದ ಗಮನ ಸೆಳೆಯುತ್ತಾ ಬಂದಿದೆ. ಆದರೆ ಪೊಲೀಸ್ ಅಧಿಕಾರಿಗಳು ದೃತಿಗೆಡದೆ ತಮ್ಮ ಶಕ್ತಿ ಮೀರಿ ಕೆಲಸ ನಿರ್ವಹಿಸುವ ಮೂಲಕ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದ ರೀತಿಯಲ್ಲಿ ಹಗಲಿರುಳು ಕೆಲಸ ಮಾಡಿ ಗಲಾಟೆ, ದೊಂಬಿಗಳನ್ನು ಸಂಪೂರ್ಣವಾಗಿ ಹತೋಟಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಇದೀಗ ಗಣೇಶೋತ್ಸವ ಹಬ್ಬ ಸಮೀಸುತ್ತಿರುವ ಸಮಯದಲ್ಲಿ ಬೆಳಗಾವಿ ನಗರಕ್ಕೆ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ಕನ್ನಡಿಗ ರೋಹನ್ ಜಗದೀಶ ಅವರು ಆಗಮಿಸಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ.
ಪುಂಡ ಪೋಕರಿಗಳಿಗೆ ಜಾಗವಿಲ್ಲ:
ನಗರ ಪೊಲೀಸ್ ವ್ಯಾಪ್ತಿಯಲ್ಲಿ ಕ್ಷಲ್ಲಕ ಕಾರಣವನ್ನು ಮುಂದಿಟ್ಟುಕೊಂಡು ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವುದರ ಜತೆಗೆ ಜನರಲ್ಲಿ ಭಯದವಾತಾವರಣ ಸೃಷ್ಟಿಸುವ ಪುಂಡ ಪೋಕರಿಗಳಿಗೆ ಇಲ್ಲಿ ಜಾಗವಿಲ್ಲ. ದುಂಡಾವರ್ತನೆ ತೋರುವವರು ಯಾರೇ ಆಗಿದ್ದರೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹಾಗೂ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮಕೈಗೊಳ್ಳಲಾಗುವುದು.
0 Comments