ಬೈಲೂರು ನಿಜಗುಣಾನಂದ ಶ್ರೀಗಳಿಗೆ ಭದ್ರತೆ
ನೀಡುವಂತೆ ಮನವಿ
ಬೈಲೂರು ನಿಜಗುಣಾನಂದ ಶ್ರೀಗಳಿಗೆ ಕೊಲೆ ಬೆದರಿಕೆ
ಬಂದಿದ್ದು ಭಕ್ತರಲ್ಲಿ ಭಯದ ಆಂತಕ ಮೂಡಿಸಿದೆ. ಹೀಗಾಗಿ ನಿಜಗುಣಾನಂದ ಮಹಾಸ್ವಾಮಿಜಿಗಳವರಿಗೆ ಸರಕಾರ ಸೂಕ್ತ ಭದ್ರತೆ ನೀಡಬೇಕು ಎಂದು ಕಿತ್ತೂರು ಪಟ್ಟಣ ಸೇರಿದಂತೆ ತಾಲೂಕಿನ ಬೈಲೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕಿತ್ತೂರು ತಹಶೀಲ್ದಾರ್ ರವೀಂದ್ರ ಹಾದಿಮನಿ ಮೂಲಕ ಸರ್ಕಾರಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಅನಾಮಧೇಯ ಪತ್ರ ಬರೆದ ವ್ಯಕ್ತಿಯು ದೈರ್ಯ ಇದ್ರೆ ಹೆಸರು ಹಾಕಿ ಬರೆಯಬೇಕು ಎಂದು ಸಮಾಜ ಸೇವಕ ಹಬೀಬ್ ಶಿಲೇದಾರ ಹೇಳಿದರು.
ಈ ಸಂದರ್ಭದಲ್ಲಿ ರೋಹಿಣಿ ಬಾಬಾ ಸಾಹೇಬ್ ಪಾಟೀಲ್. ಮತ್ತು ಇನ್ನೂ ಅನೇಕ ಮಹಿಳಾ ಕಾರ್ಯಕರ್ತರು ಮತ್ತು ಕಿತ್ತೂರಿನ ಸುತ್ತಮುತ್ತಲಿನ ಹಲವಾರು ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
0 Comments