ಚನ್ನಮ್ಮನ ಕಿತ್ತೂರು: ಸಮೀಪದ ಎಂ.ಕೆ.ಹುಬ್ಬಳ್ಳಿ ಪಟ್ಟಣದ ಮಲಪ್ರಭಾ ನದಿಯಲ್ಲಿ ಗುರುವಾರ ಕೊಳೆತ ಸ್ಥಿತಿಯಲ್ಲಿ ಅನಾಥ ಶವ ಪತ್ತೆಯಾಗಿದೆ. ಶ್ರೀ ಅಶ್ವಥ್ ನರಸಿಂಹ ದೇವಸ್ಥಾನದ ಬಳಿ
ಇರುವ ಮಲಪ್ರಭಾ ನದಿ ನೀರಿನಲ್ಲಿ ಸುಮಾರು 50 ರಿಂದ 55 ವಯಸ್ಸಿನ ಅನಾಥ ಪುರಷ ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸುಮಾರು 5.5 ಅಡಿ ಎತ್ತರ, ಬಿಳಿ ಪೈಜಾಮ ಪ್ಯಾಂಟ್, ತಿಳಿ ಬೂದು ಬಣ್ಣದ ನೆಹರೂ ಶರ್ಟ್,ಕೆಂಪು ಉಡದಾರ, ಧರಿಸಿದ್ದಾನೆ. ಸುಮಾರು ಒಂದು ವಾರದ ಹಿಂದೆ ನೀರಿನಲ್ಲಿ ಬಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಬೆಳಗಾವಿ ಸರ್ಕಾರಿ ಶವ ಸಂಗ್ರಹಾಲಯಕ್ಕೆ ಶವವನ್ನು ಕಳಿಸಲಾಗಿದೆ ಎಂದು ಪೊಲೀಸ ಮೂಲಗಳಿಂದ ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಕಿತ್ತೂರು ಪಿಎಸ್‌ಐ
ಪ್ರವೀಣ ಗಂಗೋಳಿ, ಉಪಠಾಣೆ ಎಎಸ್‌ಐ ಜಿ.ಜಿ.ಹಂಪಣ್ಣವರ ಹಾಗೂ ಸಿಬ್ಬಂಧಿ ಬೇಟಿ ನೀಡಿ ಕಿತ್ತೂರು ಠಾಣೆಯಲ್ಲಿ
ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವದ ಗುರುತು ಪರಿಚಯ ಸಿಕ್ಕಲ್ಲಿ ಬೆಳಗಾವಿ ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿ 9480804000, ಕಿತ್ತೂರು ಸಿಪಿಐ 9480804038, ಕಿತ್ತೂರು ಪಿಎಸ್‌ಐ 9480804076, ಸಂಪರ್ಕಿಸಿ.
0 Comments