ಕಿತ್ತೂರು ಕೋಟೆ ಆವರಣದಲ್ಲಿ ಸ್ವಚ್ಚತಾ ಕಾರ್ಯದ ಪ್ರಯುಕ್ತ ಶ್ರಮದಾನ
ಕಿತ್ತೂರು :
*******
ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮದ ಅನುಷ್ಟಾನದ ನಿಮಿತ್ಯ ದಿನಾಂಕ:17/09/2023 ಇಂದು ಕಿತ್ತೂರಿನ ಕೋಟೆ ಆವರಣದಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಒಂದು ದಿನದ ಸ್ವಚ್ಛತಾ ಶ್ರಮದಾನಕ್ಕಾಗಿ ಬೈಲಹೊಂಗಲ ಹಾಗೂ ಕಿತ್ತೂರ ತಾಲೂಕುಗಳ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಹಾಗೂ ತಾಲೂಕಿನ ಎಲ್ಲ ಅವರ ಕಾರ್ಯಾಲಯದ ಸಿಬ್ಬಂದಿ ವರ್ಗ, ತಹಶೀಲದಾರ ಕಾರ್ಯಾಲಯದ ಸಿಬ್ಬಂದಿ ವರ್ಗ,ಕಂದಾಯ ನಿರೀಕ್ಷಕರು, ತಾಲೂಕಿನ ಎಲ್ಲ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳು, ಬಿಲ್ ಕಲೆಕ್ಟರ್‌ಗಳು ಗ್ರಾಮ ಸಹಾಯಕರು ಈ ಕಾರ್ಯಕ್ರಮದಲ್ಲಿ ಒಂದು ಶ್ರಮಧಾನ ಮಾಡಿ ಸದರಿ ಯೋಜನೆಯನ್ನು ಯಶಸ್ವಿಗೊಳಿಸಲು ದಿನಾಂಕ:17/09/2023 ರಂದು ಕಿತ್ತೂರಿನ ಕೋಟೆ ಆವರಣದಲ್ಲಿ ಹಾಜರಾಗುವಂತೆ ಉಪವಿಭಾಗಧಿಕಾರಿ, ತಾಲೂಕಾ ದಂಡಧಿಕಾರಿಗಳು ಬೈಲಹೊಂಗಲ ರವರು ಸೂಚಿಸಿದ್ದಾರೆ.
0 Comments