ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ “ ನನ್ನ ಪುಸ್ತಕ ನನ್ನ ಓದು” ಕುರಿತು ಭಾಷಣ ಸ್ಪರ್ಧೆ
ಚನ್ನಮ್ಮನ ಕಿತ್ತೂರು:- ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿಚ್ಚಣಕಿ ಇವರ ಸಹಯೋಗದಲ್ಲಿ
ಮೆಚ್ಚಿನ ಪುಸ್ತಕದ ಬಗೆಗೆ ಅಭಿಪ್ರಾಯ ಮಂಡಣೆ ಅಂಗವಾಗಿ ನಿಚ್ಚಣಕಿ ಗ್ರಾಮ ಪಂಚಾಯತ ವ್ಯಾಪ್ತಿಯ
ನಿಚ್ಚಣಕಿ.ಶಿವನೂರು,ಮೇಟ್ಯಾಲ,ಮರಿಗೇರಿ ಮತ್ತು ಡೊಂಬರಕೊಪ್ಪ ಸರಕಾರಿ ಪ್ರಾಥಮಿಕ ಶಾಲಾ
ಮಕ್ಕಳಿಗೆ “ ನನ್ನ ಪುಸ್ತಕ ನನ್ನ ಓದು”ಎಂಬ ವಿಷಯ ಕುರಿತು ಭಾಷಣ ಸ್ಪರ್ಧೆಯನ್ನು ಕನ್ನಡ
ಸಾಹಿತ್ಯ ಪರಿಷತ್ತು ತಾಲೂಕಾ ಘಟಕ, ಚನ್ನಮ್ಮನ ಕಿತ್ತೂರು ಏರ್ಪಡಿಸಿದೆ ಎಂದು ಅಧ್ಯಕ್ಷರಾದ
ಡಾ.ಎಸ್.ಬಿ.ದಳವಾಯಿ ತಿಳಿಸಿದ್ದಾರೆ. ಶಿವನೂರು ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕರಾದ
ಶ್ರೀಮತಿ ವಿದ್ಯಾ ಚಂಗೋಲಿ ಮತ್ತು ಗ್ರಂಥಾಲಯ ಮೇಲ್ವಿಚಾರಕರಾದ ಶ್ರೀ ಬಸವರಾಜ
ದಳವಾಯಿ ಇವರ ನೇತೃತ್ವದಲ್ಲಿ ನಡೆಯಲಿರುವ ಈ ಸಮಾರಂಭದ ಅಧ್ಯಕತೆಯನ್ನು ಶ್ರೀಮತಿ
ಕಾವ್ಯಾ.ಚಂ.ಮುರಗೋಡಮಠ ಅಧ್ಯಕ್ಷರು, ಗ್ರಾಮ ಪಂಚಾಯತ ನಿಚ್ಚಣಕಿ ಇವರು
ವಹಿಸುವರು.ಕಾರ್ಯಕ್ರಮದ ಉದ್ಘಾಟನೆಯನ್ನು ಕಿತ್ತೂರು ತಾಲೂಕಿನ ಪ್ರಭಾರಿ ಕ್ಷೇತ್ರ
ಶಿಕ್ಷಣಾಧಿಕಾರಿಗಳು ಮತ್ತು ಸಮನ್ವಯಾಧಿಕಾರಿಗಳಾದ ಶ್ರೀಮತಿ ಗಾಯತ್ರಿ ಅಜ್ಜನವರ
ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಉಮೇಶಸಿಂಗ ರಾಹುತನವರ
ಉಪಾಧ್ಯಕ್ಷರು,ಗ್ರಾಮ ಪಂಚಾಯತ ನಿಚ್ಚಣಕಿ, ಶ್ರೀ ಆರ್.ಐ.ಪೊಲೀಸನವರ ಪಿಡಿಓ ನಿಚ್ಚಣಕಿ,
ಶ್ರೀ ಮಂಜುನಾಥ ತಳವಾರ ಅಧ್ಯಕ್ಷರು,ಎಸ್.ಡಿ.ಎಂ.ಸಿ. ಸರಕಾರಿ ಪ್ರಾಥಮಿಕ ಶಾಲೆಶಿವನೂರು,ಶ್ರೀ ಐ.ಜಿ.ಚನ್ನಣ್ಣವರ ನಾಮ ನಿರ್ದೇಶಕ ಉಪಾಧ್ಯಕ್ಷರು,ಪ್ರಾಥಮಿಕ ಶಾಲಾ ಶಿಕ್ಷಕರ
ಸಂಪ್ರಬೆಂಗಳೂರು, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ, ಕಿತ್ತೂರಿನ ಸರ್ವ
ಪದಾಧಿಕಾರಿಗಳು ಆಗಮಿಸುವರು.
ಈ ಸಮಾರಂಭದಲ್ಲಿ ಶ್ರೀ ಆರ್.ಆರ್.ಸಿಂಗಾಡಿ
ನಿವೃತ್ತ ಮುಖ್ಯಾಧ್ಯಾಪಕರು,ಸರಕಾರಿ ಪ್ರಾಥಮಿಕ ಶಾಲೆ. ನಿಚ್ಚಣಕಿ ಮತ್ತು ಶ್ರೀ ಮತಿ ಎಲ್.ಬಿ.ಪೂಜೇರ
ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು,ಶಿವನೂರು ಇವರನ್ನು ಕನ್ನಡ ಸಾಹಿತ್ಯ
ಪರಿಷತ್ತು ತಾಲೂಕಾ ಘಟಕ, ಚನ್ನಮ್ಮನ ಕಿತ್ತೂರಿನ ಪರವಾಗಿ ಸನ್ಮಾನಿಸಲಾಗುವದು. ಸರಕಾರಿ
ಪ್ರಾಥಮಿಕ ಶಾಲೆ ಶಿವನೂರಿನಲ್ಲಿ ಶುಕ್ರವಾರ 22-09-2023 ಮದ್ಯಾನ್ಹ 2 ಗಂಟೆಗೆ ಈ
ಕಾರ್ಯಕ್ರಮ ಜರುಗಲಿದ್ದು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪುಸ್ತಕ,ಪೆನ್ನು ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಗುವದು ಎಂದು ಡಾ.ಎಸ್.ಬಿ.ದಳವಾಯಿ ತಿಳಿಸಿದ್ದಾರೆ.
0 Comments