ಮೃತಪಟ್ಟ ರಾಮಚಂದ್ರ ಪಕ್ಕೀರನಾಥ ಮಣಿಗಾರ ಭಾವಚಿತ್ರಃ ಚನ್ನಮ್ಮನ ಕಿತ್ತೂರಿನಲ್ಲಿ ಅಂಡರ್ ಪಾಸ್ ನಿರ್ಮಿಸಲು ಆಗ್ರಹಿಸಿ ಹೆದ್ದಾರಿ ತಡೆದು ಪ್ರತಿಭಟಿಸಿದ ಜನತೆ.
ಚನ್ನಮ್ಮನ ಕಿತ್ತೂರಿನಲ್ಲಿ ಅಂಡರ್ ಪಾಸ್ ನಿರ್ಮಿಸಲು ಆಗ್ರಹಿಸಿ ಶಾಸಕ ಬಾಬಾಸಾಹೇಬ ಪಾಟೀಲ ಅವರಿಗೆ ಮನವಿ ಸಲ್ಲಿಸುತ್ತಿರುವದು.
ಚೆನ್ನಮ್ಮನ ಕಿತ್ತೂರ ಃ ತಾಲೂಕು ಆಡಳಿತಸೌದದ ಮುಂದೆ ಅಂಡರ್ ಪಾಸ್ ನಿರ್ಮಿಸುವಂತೆ ಆಗ್ರಹಿಸಿ ತಹಶೀಲ್ದಾರ ಕಛೇರಿಯ ಆವರಣದಲ್ಲಿ ಅಪಘಾತತದಲ್ಲಿ ಮೃತಪಟ್ಟ ವ್ಯಕ್ತಿಯ ಶವವಿಟ್ಟು ಪ್ರತಿಭಟಣೆ ನಡೆಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ದ ತಮ್ಮ ಆಕ್ರೋಶವನ್ನು ಹೊರ ಹಾಕಿ ಹೆದ್ದಾರಿ ತಡೆದು ಗುರುವಾರ ದಿನ ಪ್ರತಿಭಟನೆ ನಡೆಸಿದರು.
ದಿನಾಂಕ . 20 ಬುಧವಾರ ರಾತ್ರಿ ಹೆದ್ದಾರಿ ದಾಟುತ್ತಿದ್ದ ಪಾದಾಚಾರಿಗೆ ಬೈಕ್ ಡಿಕ್ಕಿಯಾಗಿ ಅಧಿಕ ರಕ್ತ ಸ್ರಾವದಿಂದ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ. ರಾಮಚಂದ್ರ ಪಕ್ಕೀರನಾಥ ಮಣಿಗಾರ(66) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.
ಈ ಸುದ್ದಿ ತಿಳಿದು ದಿನಾಂಕ 21 ರಂದು ಮುಂಜಾನೆ ಕಿತ್ತೂರು, ಚನ್ನಾಪೂರ, ಗಿರಿಯಾಲ ಗ್ರಾಮದ ನಿವಾಸಿಗಳು ಮಹಿಳೆಯರು ಮಕ್ಕಳು ಎನ್ನದೆ ನೂರಾರು ಸಂಖ್ಯೆಯಲ್ಲಿ ಎಲ್ಲರು ಸೇರಿಕೊಂಡು ಹೆದ್ದಾರಿಯಲ್ಲಿ ಕುಳಿತುಕೊಂಡು ಪ್ರತಿಭಟನೆ ಆರಂಬಿಸಿದರು. ಹೆದ್ದಾರಿ ದಾಟ್ಟುತ್ತಿರುವಾಗ ಈ ಸ್ಥಳದಲ್ಲಿ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಪರಿಣಾಮ ಸಾವು ನೋವುಗಳು ಇಲ್ಲಿ ನಡೆಯುತ್ತಿರುವ ಕಾರಣ ಅಂಡರ್ ಪಾಸ್ ನಿರ್ಮಿಸುವಂತೆ ಅನೇಕ ಸಲ ಸಂಸದರಿಗೆ, ಶಾಸಕರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದರು ಯಾವುದೆ ಕ್ರಮ ಜರುಗಿಸುತ್ತಿಲ್ಲವೆಂದು ಆರೋಪಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಿಡಿಶಾಪ ಹಾಕಿ ತಮ್ಮ ಅಸಮಾದಾನ ಹೊರಹಾಕಿದರು.
ಅಂಡರ್ ಪಾಸ್ ನಿರ್ಮಿಸಲು ಈ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ನಮ್ಮ ಪ್ರತಿಭಟನೆ ಮುಂದುವರೆಸುತ್ತೇವೆ. ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಶಾಸಕ ಬಾಬಾಸಾಹೇಬ ಪಾಟೀಲ ಪ್ರತಿಭಟನಾ ನಿರತರೊಂದಿಗೆ ಮಾತನಾಡಿದರು. ಅವರ ಅಹವಾಲುಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಗಿರಿಯಾಲ್ ಚನ್ನಾಪುರ ಕಿತ್ತೂರು ಹಾಗೂ ಸುತ್ತಮುತ್ತಲಿನ ಹಳ್ಳಿಯ ಜನರು ಇದನ್ನು ಕಂಡು ಇಲ್ಲಿ ಅಂಡರ್ ಪಾಸ್ ಆಗದಿದ್ದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಯಾವುದಕ್ಕೂ ಹಿಂದಿ ಇರುವುದಿಲ್ಲ ಇಂಥ ಅನಾಹುತಗಳು ಇಲ್ಲಿ ಬಹಳ ನಡೆದಿರುತ್ತವೆ ಇನ್ನಾದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಇಲ್ಲದಿದ್ದರೆ ಮುಂದಿನ ಹೋರಾಟಕ್ಕೆ ಸಿದ್ದರಾಗಬೇಕು ಎಂದು ತಮ್ಮ ಅಳಲು ತೋಡಿಕೊಂಡರು.
0 Comments