Kittur : ವಿದ್ಯಾರ್ಥಿಗಳು ಪಾಠ ಕೇಳುವದರ ಜೊತೆಗೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. : ಶ್ರೀ ಎಲ್.ಎಂ.ಕುರುಬೆಟ್ಟ

ವಿದ್ಯಾರ್ಥಿಗಳು ಪಾಠ ಕೇಳುವದರ ಜೊತೆಗೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. : ಶ್ರೀ ಎಲ್.ಎಂ.ಕುರುಬೆಟ್ಟ
ಚನ್ನಮ್ಮನ ಕಿತ್ತೂರು:- ಇಂದಿನ ತಂತ್ರಜ್ಞಾನದ ಯುಗದಲ್ಲಿ ವಿದ್ಯಾರ್ಥಿಗಳು ಪಾಠ ಕೇಳುವದನ್ನಷ್ಟೇ ಮಾಡುತ್ತ ಮನೆಯಲ್ಲಿ ಓದುವ ಹವ್ಯಾಸ ಬೆಳೆಸಿಕೊಳ್ಳದೇ ಇರುವದು ವಿಷಾದನೀಯವಾಗಿದ್ದು ಇದರಿಂದ ಅವರು ಸಾಮಾನ್ಯ ಜ್ಞಾನ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಕಿತ್ತೂರಿನ ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳಾದ ಶ್ರೀ ಎಲ್.ಎಂ.ಕುರುಬೆಟ್ಟ ಕಳವಳ ವ್ಯಕ್ತಪಡಿಸಿದರು. ಕಲಿಕೆ ಮುಗಿದ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ
ಉತ್ತೀರ್ಣರಾಗಬೇಕಾದರೆ ಪ್ರತಿ ದಿವಸ ಶಾಲಾ ಪಠ್ಯದ ಜೊತೆಗೆ ದಿನಪತ್ರಿಕೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ
ಸಹಾಯಕವಾಗುವ ಪುಸ್ತಕಗಳನ್ನು ಓದಲು ಕರೆ ನೀಡಿದರು.ಪುಸ್ತಕಗಳನ್ನು ಸ್ನೇಹಿತರಂತೆ ಕಾಣಬೇಕೆಂದು
ತಿಳಿಸಿದರು.ಅವರು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ ಕಿತ್ತೂರು ಮತ್ತು ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿಚ್ಚಣಕಿ ಇವರ ಸಹಯೋಗದಲ್ಲಿ ಮೆಚ್ಚಿನ ಪುಸ್ತಕದ ಬಗೆಗೆ ಅಭಿಪ್ರಾಯ ಮಂಡಣೆ ಅಂಗವಾಗಿ ನಿಚ್ಚಣಕಿ ಗ್ರಾಮ ಪಂಚಾಯತ ವ್ಯಾಪ್ತಿಯ ನಿಚ್ಚಣಕಿ.ಶಿವನೂರು,ಮೇಟ್ಯಾಲ,ಮರಿಗೇರಿ ಮತ್ತು ಡೊಂಬರಕೊಪ್ಪ ಸರಕಾರಿ
ಪ್ರಾಥಮಿಕ ಶಾಲಾ ಮಕ್ಕಳಿಗೆ “ ನನ್ನ ಪುಸ್ತಕ ನನ್ನ ಓದು”ಎಂಬ ವಿಷಯ ಕುರಿತು ನಡೆದ ಭಾಷಣ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡುತ್ತಾ ಈ ಸುಂದರವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಸಂಘಟಕರನ್ನು ಅಭಿನಂದಿಸುತ್ತ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ ಕಿತ್ತೂರಿನ ಅಧ್ಯಕ್ಷರಾದ ಡಾ.ಎಸ್.ಬಿ.ದಳವಾಯಿ ಇಂದು
ವಿದ್ಯಾರ್ಥಿಗಳಿಗೆ ಸ್ಪಷ್ಟ ಓದನ್ನು ರೂಢಿ ಮಾಡಿಸುವದು ಈ ಕಾರ್ಯಕ್ರಮದ ಉದ್ದೇಶವಾಗಿದ್ದು ವಿದ್ಯಾರ್ಥಿಗಳು ಪ್ರತಿವಾರ ಒಂದು ಪುಸ್ತಕವನ್ನಾದರೂ ಓದುವ ಹವ್ಯಾಸ ಬೆಳೆಸಿಕೊಳ್ಳಲು ಮನವಿ ಮಾಡಿದರು. ಶಾಲೆಯ ಮತ್ತು
ಸಾರ್ವಜನಿಕ ಗ್ರಂಥಾಲಯದ ಉಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳುವಂತಾಗಲಿ ಎಂದು ಹಾರೈಸಿದರು.
ಈ ಸಮಾರಂಭದ ಅಧ್ಯಕತೆಯನ್ನು ಶ್ರೀಮತಿ ಕಾವ್ಯಾ.ಚಂ.ಮುರಗೋಡಮಠ ಅಧ್ಯಕ್ಷರು, ಗ್ರಾಮ
ಪಂಚಾಯತ ನಿಚ್ಚಣಕಿ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಉಮೇಶಸಿಂಗ ರಾಹುತನವರ
ಉಪಾಧ್ಯಕ್ಷರು,ಗ್ರಾಮ ಪಂಚಾಯತ ನಿಚ್ಚಣಕಿ, ಶ್ರೀ ಆರ್.ಐ.ಪೊಲೀಸನವರ ಪಿಡಿಓ ನಿಚ್ಚಣಕಿ, ಶ್ರೀ
ಮಂಜುನಾಥ ತಳವಾರ ಅಧ್ಯಕ್ಷರು,ಎಸ್.ಡಿ.ಎಂ.ಸಿ. ಸರಕಾರಿ ಪ್ರಾಥಮಿಕ ಶಾಲೆಶಿವನೂರು, ಶ್ರೀ
ಐ.ಜಿ.ಚನ್ನಣ್ಣವರ ನಾಮ ನಿರ್ದೇಶಕ ಉಪಾಧ್ಯಕ್ಷರು,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ,ಬೆಂಗಳೂರು, ಕನ್ನಡ ಸಾಹಿತ್ಯ
ಪರಿಷತ್ತು ತಾಲೂಕಾ ಘಟಕ, ಕಿತ್ತೂರಿನ ಪದಾಧಿಕಾರಿಗಳು ಮತ್ತು ವಿವಿಧ ಶಾಲೆಗಳ ಶಿಕ್ಷಕರು ಭಾಗವಹಿಸಿದ್ದರು.
ಶ್ರೀ ಎಲ್.ಎಂ.ಕುರುಬೆಟ್ಟ, ಶ್ರೀ ಆರ್.ಆರ್.ಸಿಂಗಾಡಿ ನಿವೃತ್ತ ಮುಖ್ಯಾಧ್ಯಾಪಕರು,ಸರಕಾರಿ ಪ್ರಾಥಮಿಕ ಶಾಲೆ.
ನಿಚ್ಚಣಕಿ ಮತ್ತು ಶ್ರೀ ಮತಿ ಎಲ್.ಬಿ.ಪೂಜೇರ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು,ಶಿವನೂರು ಇವರನ್ನು ಎಲ್ಲ ಅತಿಥಿಗಳು ಸನ್ಮಾನಿಸಿದರು. ಸನ್ಮಾನಿತರ ಪರವಾಗಿ ನಿವೃತ್ತ ಮುಖ್ಯಾಧ್ಯಾಪಕರಾದ ಶ್ರೀ ಆರ್‌.ಆರ್‌.ಸಿಂಗಾಡಿ ಮಾತನಾಡಿ ತಾವು ಶಿಕ್ಷಕ ವೃತ್ತಿ ಆಯ್ಕೆ ಮಾಡಿಕೊಂಡಿರುವದಕ್ಕೆ ಹರ್ಷ ವ್ಯಕ್ತ ಪಡಿಸುತ್ತ ಸಹಕಾರ ನೀಡಿದ ಮತ್ತು ಸನ್ಮಾನಿಸಿದ ಎಲ್ಲರಿಗೆ ಧನ್ಯವಾದಗಳನ್ನು ತಿಳಿಸಿದರು.

“ ನನ್ನ ಪುಸ್ತಕ ನನ್ನ ಓದು” ಎಂಬ ವಿಷಯ ಕುರಿತು ಉತ್ತಮವಾಗಿ ಮಾತನಾಡಿದ
ನಿಚ್ಚಣಕಿ.ಶಿವನೂರು,ಮರಿಗೇರಿ ಮತ್ತು ಡೊಂಬರಕೊಪ್ಪ ಶಾಲೆಯ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ ಕಿತ್ತೂರು ಇವರು ಕೊಡಮಾಡಿದ ಪುಸ್ತಕ,ಪೆನ್ನು, ಕನ್ನಡ ಕೊರಳು ಪಟ್ಟಿ ಮತ್ತು ಪ್ರಮಾಣ ಪತ್ರಗಳನ್ನು ಅತಿಥಿಗಳು ವಿತರಿಸಿದರು. ಜ್ಞಾನ ಪೀಠ ಪ್ರಶಸ್ತಿಗೆ ಭಾಜನರಾದವರ ಕರ್ನಾಟಕದ ಹೆಮ್ಮೆಯ ಸಾಹಿತಿಗಳ ಕುರಿತು ವಿದ್ಯಾರ್ಥಿಗಳು ಮಾತನಾಡಿರುವದು ವಿಶೇಷವಾಗಿತ್ತು.
ಶಾಲಾ ಮಕ್ಕಳಿಂದ ಪ್ರಾರ್ಥನೆ ನಡೆಯಿತು. ಶಿವನೂರು ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕರಾದ
ಶ್ರೀಮತಿ ವಿದ್ಯಾ ಚಂಗೋಲಿ ಸ್ವಾಗತಿಸಿದರು. ಶ್ರೀ ಐ.ಜಿ.ಚನ್ನಣ್ಣವರ ವಂದಿಸಿದರು. ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿಚ್ಚಣಕಿಯ ಮೇಲ್ವಿಚಾರಕರಾದ ಬಸವರಾಜ ದಳವಾಯಿ ನಿರೂಪಿಸಿದರು.

Post a Comment

0 Comments