Kittur : ಅ.4ಕ್ಕೆ ಪೂರ್ವಭಾವಿ ಸಭೆ

ಅ.4ಕ್ಕೆ ಪೂರ್ವಭಾವಿ ಸಭೆ
ಚನ್ನಮ್ಮನ ಕಿತ್ತೂರು: ಐತಿಹಾಸಿಕ ಕಿತ್ತೂರು ರಾಣಿ
ಚೆನ್ನಮ್ಮಾಜಿಯ ಉತ್ಸವವನ್ನು ಆಚರಿಸುವ  ವಿಷಯ ಚರ್ಚಿಸಲು, 4ರಂದು ಸಂಜೆ 4ಕ್ಕೆ ಇಲ್ಲಿನ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಪೂರ್ವಭಾವಿ ಸಭೆ ತಹಶಿಲ್ದಾರರ ಆದೇಶದ ಮೇರೆಗೆ ಕರೆಯಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿಗದಿ ಪಡಿಸಿದಂತೆ ಸಭೆ ಕರೆಯಲಾಗಿದ್ದು, ಉತ್ಸವವನ್ನು ಪ್ರತಿ ವರ್ಷ ಅಕ್ಟೋಬರ್ 23 ರಿಂದ 25ರವರೆಗೆ
ಕೋಟೆ ಆರವರಣದಲ್ಲಿ ಬೆಳಗಾವಿ ಜಿಲ್ಲಾಡಳಿತದಿಂದ
ಆಚರಿಸಲಾಗುತ್ತಿತ್ತು. ಈ ವರ್ಷ ಉತ್ಸವ ಆಚರಿಸುವ
ಕುರಿತು ಚರ್ಚಿಸಲು ಜಿಲ್ಲಾ ಉಸ್ತುವಾರಿ ಸಚಿವ ಸತೀಶ
ಚಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಅಯೋಜಿಸಲಾಗಿದ್ದು, ಸಾರ್ವಜನಿಕರು ಆಗಮಿಸಿ ಸಲಹೆ ಸೂಚನೆ ನೀಡಬಹುದು ಎಂದು ಪ್ರಕಟನೆಯಲ್ಲಿ ತಿಳಿಸಿದೆ.

Post a Comment

0 Comments