Kittur: ಸಂಗೀತಾ ತೊಲಗಿ ಅವರಿಗೆ ಪಿಎಚ್‌ಡಿ ಪದವಿ

ಸಂಗೀತಾ ತೊಲಗಿ ಅವರಿಗೆ ಪಿಎಚ್‌ಡಿ ಪದವಿ
ಕಿತ್ತೂರು: ಕಿ.ನಾ.ವಿ.ವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಾಣಿಜ್ಯಶಾಸ್ತ್ರ
ವಿಭಾಗ ಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕಿಯರಾದ ಶ್ರೀಮತಿ ಸಂಗೀತಾ ಬಸವರಾಜ
ತೋಲಗಿ ಇವರು ಭಾರತೀಯ ವಾಣಿಜ್ಯ ಬ್ಯಾಂಕುಗಳ ದಕ್ಷತೆಯ ಮೇಲೆ ವಿಲೀನಗಳು ಮತ್ತು
ಸ್ವಾಧೀನ ನಿರ್ಧಾರಗಳ ಪ್ರಭಾವ ಎಂಬ ವಿಷಯದ ಬಗ್ಗೆ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ
ಕಾಲೇಜಿನ ಪ್ರಧ್ಯಾಪಕರಾದ ಡಾ. ಕೆ. ಎಸ್. ಸರಳಾ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ
ಮಹಾಪ್ರಬಂಧಕ್ಕೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿದೆ.
ಇವರು ಕರ್ನಾಟಕ ವಿಶ್ವವಿದ್ಯಾಲಯ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ,
ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಆಫ್ ಬ್ಯುಸಿನೆಸ್
ಅಡ್ಮಿನಿಸ್ಟೇಟೀವ್ ಪದವಿ ಪಡೆದಿದ್ದಾರೆ. 
ಇವರ ತಂದೆ ಬಸವರಾಜ, ತಾಯಿ ಸುವರ್ಣ ಹಾಗೂ
ಪತಿ ಬ. ಚಂದ್ರಶೇಖರ, ಕಿತ್ತೂರ ನಾಡ ವಿದ್ಯಾವರ್ಧಕ ಸಂಘದ ಗೌರವ ಅಧ್ಯಕ್ಷರಾದ
ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು,
ಚೇರಮನ್ನರಾದ ಶ್ರೀ ಜಗದೀಶ ವಸ್ತ್ರದ, ಗೌರವ ಕಾರ್ಯದರ್ಶಿಗಳಾದ ಶ್ರೀ ಜಗದೀಶ
ಬಿಕ್ಕಣ್ಣವರ, ಆಡಳಿತ ಮಂಡಳಿ ನಿರ್ದೇಶಕರುಗಳು, ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ
ಡಾ. ಜಿ. ಕೆ. ಭೂಮನಗೌಡರ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

Post a Comment

0 Comments