ಕಿತ್ತೂರು ಉತ್ಸವಕ್ಕೆ ಸ್ವಾಭಿಮಾನಿ ಕುಲವಳ್ಳಿ ರೈತರಿಂದ ಸಂಪೂರ್ಣ ಬೆಂಬಲ ಘೋಷಣೆ
ಐತಿಹಾಸಿಕ ಇತಿಹಾಸ ಪ್ರಸಿದ್ಧ ಕಿತ್ತೂರು ಉತ್ಸವಕ್ಕೆ ಸ್ವಾಭಿಮಾನಿ ಕುಲವಳ್ಳಿ ರೈತರಿಂದ ಯಾವುದೇ ಅಡ್ಡಿ ಇಲ್ಲಾ... ಬದಲಾಗಿ ಸಂಪೂರ್ಣ ಬೆಂಬಲ ಇದೆ ಎಂದು ರೈತ ಮುಖಂಡ ಸಾಮಾಜಿಕ ಹೋರಾಟಗಾರ ಹಬೀಬ್ ಶಿಲೇದಾರ ಸ್ಪಷ್ಟನೆ ನೀಡಿದರು.
ಗಣ ನ್ಯಾಯಾಲಯ ನೀಡಿದ ಮಹತ್ವದ ತೀರ್ಪನ್ನು ತಿರಸ್ಕರಿಸಿದ ಅಧಿಕಾರಿಗಳ ವಿರುದ್ಧ ನಮ್ಮ ಪ್ರತಿಭಟನೆ ಇದೆಯೇ ಹೊರತು ತಾಯಿ ಕಿತ್ತೂರು ಚೆನ್ನಮ್ಮನ ವಿಜಯೋತ್ಸವಕ್ಕೆ ನಮ್ಮದು ಯಾವುದೇ ಅಡ್ಡಿ ಇಲ್ಲಾ ಎಂದು ಕುಲವಳ್ಳಿ ರೈತರಿಂದ ಮಾಹಿತಿ ತಿಳಿದುಬಂದಿದೆ.
ನಮ್ಮ ಹೋರಾಟವನ್ನ ರಾಜಕೀಯವಾಗಿ ತಿರುಚುವ ಪ್ರಯತ್ನಗಳು ನಡೆದಿವೆ ಆದರೆ ನಾವು ಕಿತ್ತೂರು ಚೆನ್ನಮ್ಮನ ಮಕ್ಕಳು ಹಾಗೂ ಸಂಗೊಳ್ಳಿ ರಾಯಣ್ಣನ ಭಕ್ತರು ಇದ್ದೇವೆ ಜೊತೆಗೆ ರಾಯಣ್ಣನ ಹಿಡಿದು ಕೊಟ್ಟವರು ಇಲ್ಲಿ ಯಾರು ಇಲ್ಲಾ ಇರುವವರು ಎಲ್ಲರೂ ಸ್ವಾಭಿಮಾನಿ ರೈತರು ಎಂದು ಸಾಮಾಜಿಕ ಹೋರಾಟಗಾರ ಹಬೀಬ್ ಶಿಲೇದಾರ ಸ್ಪಷ್ಟನೆ ನೀಡಿದರು.
ಇಂದಿನಿಂದ ನಮ್ಮ 22 ರಿಂದ 26ರ ವರೆಗೆ ಹೋರಾಟವನ್ನ ರದ್ದು ಪಡಿಸಿ ತದನಂತರ ಮತ್ತೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಕಿತ್ತೂರಿನ ಚೆನ್ನಮ್ಮ ವರ್ತುಲದಲ್ಲಿ ಬೃಹತ್ ಪ್ರಮಾಣದಲ್ಲಿ ನಿರಂತರವಾಗಿ ನಡೆಯಲಿದೆ ಎಂದು ಹೇಳಿದ್ದಾರೆ.
ಆದರೆ ಯಾರದೊ ಒತ್ತಡಕ್ಕೆ ಮಣಿದು ಕಿತ್ತೂರಿನ ತಹಶಿಲ್ದಾರ ಮತ್ತು ಎಸಿ ಕೆಲಸ ಮಾಡುತ್ತಿದ್ದಾರೆ. ಅವರ ಹಿಂದೆ ಯಾವುದೋ ಕಾಣದ ಕೈಗಳ ಕೈವಾಡ ಇದೆ ಮತ್ತು ಅವರಿಗೆ ನ್ಯಾಯಾಲಯದ ಅರಿವು ಸಹ ಇಲ್ಲಾ ನ್ಯಾಯಾಲಯದ ಹಬೀಬ್ ಶಿಲೇದಾರ ಹೇಳಿದರು.
ಕುಲವಳ್ಳಿ ಭಾಗದ 9 ಹಳ್ಳಿಗಳ ರೈತರಿಂದ ಕಿತ್ತೂರಿನಲ್ಲಿ ಇಂದಿನಿಂದ ಅಧಿಕಾರಿಗಳ ವಿರುದ್ಧ ಬೃಹತ್ ಹೋರಾಟ ನಡೆಯಲಿದ್ದು. ನ್ಯಾಯಾಲಯದ ಆದೇಶವನ್ನ ಧಿಕ್ಕರಿಸುತ್ತಿರುವ ಅಧಿಕಾರಿಗಳ ವಿರುದ್ಧ ನಮ್ಮ ಇದೆ ಹಬೀಬ್ ಶಿಲೇದಾರ ಹೇಳಿದರು.
0 Comments