ಕಿತ್ತೂರಿನ ಅಂಬಡಗಟ್ಟಿಯಲ್ಲಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ-MK Vani

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.  ಟ್ರಸ್ಟ್ (ರಿ) ಕಿತ್ತೂರು ತಾಲೂಕು ಇದರ ವತಿಯಿಂದ ಪರಮಪೂಜ್ಯ ರಾಜರ್ಷಿ  ಡಾ/ ಡಿ .ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಡಾ॥ಹೇಮಾವತಿ ವಿ.ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಅಂಬಡಗಟ್ಟಿ ವಲಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಮತ್ತು ಒಕ್ಕೂಟ ಪದಾಧಿಕಾರಿಗಳ ಪದಗ್ರಹಣ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ  ಹಮ್ಮಿಕೊಂಡಿದ್ದು ಕಿತ್ತೂರು ಜನಪ್ರಿಯ ಶಾಸಕರಾದ ಶ್ರೀ ಬಾಬಾಸಾಹೇಬ ಪಾಟೀಲ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಅನೇಕ ಬಡ ಕುಟುಂಬಗಳಿಗೆ ದಾರಿ ದೀಪವಾಗುವ ಮೂಲಕ ಅವರನ್ನು ಪ್ರೋತ್ಸಾಹಿಸಿ ಸಮಾಜದಲ್ಲಿ ಗುರುತಿಸುವ ಕೆಲಸ ಮಾಡುತ್ತಿದೆ ಎಂದು ಮಾತನಾಡಿ ಜನಮಂಗಳ ಕಾರ್ಯಕ್ರಮದಡಿಯಲ್ಲಿ ಮಂಜೂರಾದ ವಿವಿಧ ಸಲಕರಣೆಗಳನ್ನು ವಿತರಣೆ ಮಾಡಿದರು.
ಜಿಲ್ಲಾ ನಿರ್ದೇಶಕರಾರ ಸತೀಶ್ ನಾಯ್ಕ್ ಅವರು ಸಾಮೂಹಿಕ ಸತ್ಯನಾರಾಯಣ ಪೂಜೆ ಮಹತ್ವದ ಕುರಿತು, ಕ್ಷೇತ್ರದ ಪರಿಚಯ ಯೋಜನೆಯ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿ ನೂತನ ಒಕ್ಕೂಟದ ಪದಗ್ರಹಣ ನಿರ್ವಹಿಸಿದರು,ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶ್ರೀಮತಿ ರೋಹಿಣಿ ಬಾಬಾಸಾಹೇಬ ಪಾಟೀಲ ಅವರು ಆಡು ಮುಟ್ಟದ ಸೊಪ್ಪಿಲ್ಲ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಾಡದ ಕಾರ್ಯಕ್ರಮ ಇಲ್ಲ ಎಂದು ಮಾತನಾಡಿದರು,ಇನ್ನೂರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ರಾಧಾ ಶ್ಯಾಮ ಕಾದ್ರೋಳ್ಳಿ ಇವರು ಹೆಣ್ಣು ಮಕ್ಕಳು ಸ್ವಾವಲಂಬನೆ ಜೀವನ ನಡೆಸುವಲ್ಲಿ ಗ್ರಾಮಾಭಿವೃದ್ಧಿ ಯೋಜನೆಯು ಬಹಳಷ್ಟು ಕಾರ್ಯ ನಿರ್ವಹಿಸುತ್ತಿದೆ ಎಂದು ಮಾತನಾಡಿದರು,, ಶ್ರೀ ಹಬಿಬಸಾಬ ಹ. ಶಿಲೇದಾರ ಸಮಾಜ ಸೇವಕರು ಹಾಗೂ ಉದ್ಯಮಿಗಳು ಅಂಬಡಗಟ್ಟಿ ಇವರು ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯರು ಪಾತ್ರ ಬಹಳ ದೊಡ್ಡದು ಅದಕ್ಕೆ ಕಾರಣ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆಲಸ ಶ್ಲಾಘನೀಯ ಎಂದು ಮಾತನಾಡಿದರು, .ದಿವ್ಯ ಸಾನಿಧ್ಯ  ಶ್ರೀ. ಮ. ನಿ.ಪ್ರ.ಸ್ವ ವೀರೇಶ್ವರ ಮಹಾ ಸ್ವಾಮಿಗಳು ಶ್ರೀ ಗುರು ಮಡಿವಾಳೇಶ್ವರ ಮಠ ಅಂಬಡಗಟ್ಟಿ, ಇವರು *ಸತ್ಯ ಎಂದರೆ ನಿಜ ಮತ್ತು ನಾರಾಯಣ ಎಂದರೆ ಎಲ್ಲವನ್ನೂ ಮತ್ತು ಎಲ್ಲರನ್ನೂ  ಒಳಗೊಂಡಿರುವನು ಎಂಬ ಅರ್ಥವಿದೆ, ಭಗವಾನ್ ವಿಷ್ಣುವಿನ ಒಂದು ರೂಪವಾದ ನಾರಾಯಣನನ್ನು ಪೂಜಿಸುವ ಮೂಲಕ ಭಕ್ತರು ಎದುರಾದ ಸಮಸ್ಯೆಗಳಿಗೆ  ಪರಿಹಾರ ಕಂಡುಕೂಳ್ಳುವರು ಎಂದು ಸತ್ಯನಾರಾಯಣ ಪೂಜೆಯಿಂದ ಎಲ್ಲರಿಗೂ ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ, ಜಯ, ವಿಜಯ ಸಿಗಲಿ  ಎಂದು *ಆಶೀರ್ವದಿಸಿದರು** .   *ಕಾರ್ಯಕ್ರಮದಲ್ಲಿ  ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ದೀಪಾ ಸಿದ್ದಪ್ಪ ಕೊಟಬಾಗಿ,ಸಂದೀಪ್ ಡಿ ತಾಲೂಕು ಯೋಜನಾಧಿಕಾರಿಗಳು,ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಮಹಾದೇವಪ್ಪ ಮಲ್ಲಪ್ಪ ಹಿತ್ತಲಮನಿ ಅಂಬಡಗಟ್ಟಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಮಡಿವಾಳಪ್ಪ ರೇವಪ್ಪ ಖೋದಾನಪುರ ಅಂಬಡಗಟ್ಟಿ, ಅದೃಶ್ಯಪ್ಪ ದೊಡ್ಡಸಿದ್ದಪ್ಪ ಕೊಟಬಾಗಿ ಸೋಮೇಶ್ವರ ಸಕ್ಕರೆ ಕಾರ್ಖಾನೆ ಬೈಲಹೊಂಗಲ, ಶ್ರೀ ಎಸ್. ಎರ್ ಅಂಗಡಿ ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಬಸಯ್ಯಾ ಈರಯ್ಯ ತಿಪ್ಪಯ್ಯ ನವರ ಅಖಂಡ  ಕರ್ನಾಟಕ ರಾಜ್ಯ ರೈತ ಸಂಘ ಅಂಬಡಗಟ್ಟಿ, ಮಂಜುನಾಥ ಕುಂಡಾಲ ಅದ್ಯಕ್ಷರು ಶಾಲಾ ಸುಧಾರಣಾ ಸಮಿತಿ ಸ.ಹಿ.ಪ್ರಾ.ಶಾಲೆ ಅಂಬಡಗಟ್ಟಿ, ತಾಲೂಕಿನ  ಮೇಲ್ವಿಚಾರಕರ ಶ್ರೇಣಿ ಸಿಬ್ಬಂದಿಗಳು,ವಲಯದ ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು, ಊರಿನ ಮುಖಂಡರು ಗ್ರಾಮಸ್ಥರು ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Post a Comment

0 Comments