ಕಿತ್ತೂರು ವಿಜಯ ಸುದ್ದಿ.ಚನ್ನಮ್ಮನ ಕಿತ್ತೂರು ಭಜನಾ ಸ್ಪರ್ಧೆಯ ವೇಳೆ ಕಲಾವಿದ ಹೃದಯಾಘಾತದಿಂದ ನಿಧನ

ಚನ್ನಮ್ಮನ ಕಿತ್ತೂರು:

ಕಿತ್ತೂರು ವಿಜಯ ಸುದ್ದಿ 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಡೆದ ಚನ್ನಮ್ಮನ ಕಿತ್ತೂರಿನ ಉತ್ಸವದ ಅಂಗವಾಗಿ ಆಯೋಜಿಸಿದ್ದ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕಲಾವಿದನೊಬ್ಬ ಹಠಾತ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಈ ಘಟನೆ ಚನ್ನಮ್ಮನ ಕೋಟೆ ಆವರಣದಲ್ಲಿರುವ ಚನ್ನಮ್ಮನ ವೇದಿಕೆಯಲ್ಲಿ ಭಾನುವಾರ ನಡೆದಿದೆ.

ತಾಲೂಕಿನ ಬಸಾಪುರ ಗ್ರಾಮದ ಈರಪ್ಪ ಫಕ್ಕೀರಪ್ಪ ಬಬಲಿ (48) ಎಂಬುವರು ಭಜನಾ ತಂಡದ ಸದಸ್ಯರೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿ, ಪ್ರದರ್ಶನ ಮುಗಿಸಿ ವೇದಿಕೆಯಿಂದ ಕೆಳಗೆ ಇಳಿಯುವ ಸಮಯದಲ್ಲಿ ಹೃದಯಾಘಾತಕ್ಕೆ ತುತ್ತಾಗಿ ಅಸುನೀಗಿದ್ದಾರೆ. ಮೃತ ಕಲಾವಿದ ಈರಪ್ಪ ಫಕ್ಕೀರಪ್ಪ ಬಬಲಿ 'ಈ ದುಃಖದ ಸುದ್ದಿಯನ್ನು ತಿಳಿದು, ಸ್ಥಳೀಯ ಶಾಸಕ ಬಾಬಾಸಾಹೇಬ ಪಾಟೀಲ ಅವರು ಬಬಲಿ ಅವರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಈ ಘಟನೆ ಕಿತ್ತೂರು ಉತ್ಸವದಲ್ಲಿ ತೀವ್ರ ಸಂತಾಪವನ್ನು ಉಂಟುಮಾಡಿದೆ, ಮತ್ತು ಈ ದುಃಖದ ವೇಳೆ ಕುಟುಂಬಕ್ಕೆ ಸರ್ಕಾರದಿಂದ ಸಹಾಯ ಸಿಗುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.
 

Post a Comment

0 Comments