ಕಿತ್ತೂರು ವಿಜಯ ಸುದ್ದಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು, ನವದೆಹಲಿಯಲ್ಲಿ ಸೋಮವಾರ ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅನಿಲ್ ಮಲಿಕ್ ಅವರನ್ನು ಭೇಟಿಯಾಗಿ ಇಲಾಖೆಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.ಅನುದಾನ, ಅಕ್ಕಿ, ಗೋಧಿ ಪೂರೈಕೆ, ಹೊಸ ತಾಲೂಕುಗಳ ಸಿಡಿಪಿಓ ಕಚೇರಿ, ಕಾರ್ಯನಿರತ ಮಹಿಳಾ ವಸತಿ ನಿಲಯ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸುದೀರ್ಘ ಕಾಲ ಚರ್ಚೆ ನಡೆಸಿದರು. ಈ ಹಿಂದೆ ಇಲಾಖೆಯ ಸಚಿವರನ್ನೂ ಭೇಟಿಯಾಗಿದ್ದ ಸಚಿವರು, ಈಗ ಕಾರ್ಯದರ್ಶಿ ಜೊತೆಗೂ ಇಲಾಖೆಯ ಬೇಡಿಕೆಗಳ ಕುರಿತು ಚರ್ಚಿಸಿದರು.
ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಇಲಾಖೆಯ ಬೆಳವಣಿಗೆಗೆ ಸಹಕರಿಸುವುದಾಗಿ ತಿಳಿಸಿದರು.
ನಂತರ, ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಕಾರ್ಯದರ್ಶಿ ಅಮಿತ್ ಯಾದವ್ ಅವರನ್ನು ಸಹ ಭೇಟಿ ಮಾಡಿದ ಸಚಿವರು, ನಶಾ ಮುಕ್ತ ಭಾರತ ಕನೆಯ ಕುರಿತು ಚರ್ಚೆ ನಡೆಸಿದರು.ಸಚಿವರೊಂದಿಗೆ ಇಲಾಖೆಯ ಕಾರ್ಯದರ್ಶಿ ಶಾಮ್ಲಾ ಇಕ್ಸಾಲ್, ನಿರ್ದೇಶಕರಾದ ಸಿದ್ದೇಶ್ವರ್, ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್. ನಿಶ್ಚಲ್ ಉಪಸ್ಥಿತರಿದ್ದರು.
0 Comments