ಕಿತ್ತೂರು. ವಿಜಯ ಸುದ್ದಿ.ಕರ್ನಾಟಕ ಸರ್ಕಾರ, ಜಿಲ್ಲಾ ಆಡಳಿತ ಬೆಳಗಾವಿ, ಕಿತ್ತೂರ ಅಭಿವ್ರದ್ದಿ ಪ್ರಾಧೀಕಾರ, ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ

ಚನ್ನಮ್ಮನ ಕಿತ್ತೂರ ಪ್ರಸಕ್ತ ಸಾಲಿನಲ್ಲಿ 200 ನೇ ಚನ್ನಮ್ಮನ ಕಿತ್ತೂರ ಉತ್ಸವವು ಅತ್ಯಂತ ಯಶಸ್ವಿಯಾಗಿ ವಿಜ್ರಂಬಣೆಯಿಂದ ಜರುಗಿತು ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ಜರುಗಿದವು ಸಮಾರೋಪ ಸಮಾರಂಭಕ್ಕೆ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ, ಮುಖ್ಯಮಂತ್ರಿಗಳು ಹಾಗೂ ಸನ್ಮಾನ್ಯ ಶ್ರೀ ಶಿವರಾಜ ತಂಗಡಗಿ, ಮಾನ್ಯ ಸಚಿವರು ಕನ್ನಡ ಮತ್ತು ಸಂಸ್ಕ್ರತ ಇಲಾಖೆ, ಆಗಮಿಸಿದ್ದರು, ಮೂರು ದಿನಗಳ ಕಾಲ ಕಿತ್ತೂರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹಾಗೂ ಪಕ್ಕದ ಜಿಲ್ಲೆಗಳ ಹಾಗೂ ತಾಲೂಕುಗಳ ಅಪಾರ ಜನ ಉತ್ಸಾಹದಿಂದ ಆಗಮಿಸಿದ್ದರು, ಉತ್ಸವದ ಮೂರು ದಿನಗಳ ಸಾಂಸ್ಕ್ರತೀಕ ಕಾರ್ಯಕ್ರಮಗಳ ಸವಿಯನ್ನು ಸಾರ್ವಜನಿಕರು ಹಾಗೂ ಮುಖ್ಯವಾಗಿ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮಾನ್ಯ ಜಿಲ್ಲಾ ಪೋಲಿಸ ವರಿಷ್ಟಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಕಲಾವಿಧರ ಹಾಡುಗಳಿಗೆ ಕುಣಿದು ಕುಪ್ಪಳಿಸಿ ಉತ್ಸವದ ಸವಿಯನ್ನು ಅನುಭವಿಸಿದರು. ಉತ್ಸವದ ಯಶಸ್ವಿಗಾಗಿ ಎಲ್ಲ ಇಲಾಖೆಗಳ ನೌಕರರು,ಅಧಿಕಾರಿಗಳು, ಸಿಬ್ಬಂದಿಗಳ ತಮಗೆ ವಹಿಸಿಕೊಟ್ಟ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು, ಮುಖ್ಯವಾಗಿ ಕಂದಾಯ ಇಲಾಖೆಯ ಗ್ರಾಮಸಹಾಯಕರು, ಗ್ರಾಮ ಆಡಳಿತಾಧಿಕಾರಿಗಳು, ಮೇಲಾಧಿಕಾರಿಗಳು, ಪಟ್ಟಣ ಪಂಚಾಯತ್ ಗಳ ಕೆಲಸಗಾರರಾದ ಸ್ವಚ್ಚತಾ ಕಾರ್ಮಿಕರು, ಮತ್ತು ಇನ್ನಿತರ ಸಿಬ್ಬಂದಿ, ಲೋಕೋಪಯೋಗಿ ಇಲಾಖೆ, ಹೆಸ್ಕಾಂ‌ ಸಿಬ್ಬಂದಿ, ಆರೋಗ್ಯ, ಶಿಕ್ಷಣ ,ತಾಲೂಕಾ ಪಂಚಾಯತ್, ವಿವಿಧ ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಕ್ರೀಡಾ ಇಲಾಖೆ ಇನ್ನು ಹಲವಾರು ಇಲಾಖೆಯಗಳ ಸಿಬ್ಬಂದಿಗಳು ಹೆಚ್ಚಿನ ಶ್ರಮವಹಿಸಿ ಉತ್ಸವದ ಯಶಸ್ವಿಗೆ ಕಾರಣರಾದರು, ಉತ್ಸವವು ಅತ್ಯಂತ ಯಶಸ್ವಿಗೆ ಸ್ಥಳಿಯ ಮಾನ್ಯ ಶಾಸಕರು ಹಾಗೂ ಉತ್ಸಾಹಿ ಮಾನ್ಯ ಜಿಲ್ಲಾಧಿಕಾರಿಗಳು, ಮಾನ್ಯ ಜಿಲ್ಲಾ ಪೋಲಿಸ ವರಿಷ್ಟಾಧಿಕಾರಿಗಳು, ಮಾನ್ಯ ಉಪವಿಭಾಗಾಧಿಕಾರುಗಳು, ಬೈಲಹೊಂಗಲ, ಜಿಲ್ಲಾ ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು, ವಿಶೇಷ ಕಾಳಜಿವಹಿಸಿ ಯಶಸ್ವೀಗೆ ಕಾರಣರಾದರು, ಒಟ್ಟಾರೆಯಾಗಿ ಪ್ರಸಕ್ತ ಸಾಲಿನ ಕಿತ್ತೂರ ಉತ್ಸವ ಅತ್ಯಂತ ವಿಜ್ರಂಬಣೆಯಿಂದ ಜರುಗಿತು.
 

Post a Comment

0 Comments