ಹೊಸದಿಲ್ಲಿ: ಸುಪ್ರೀಂ ಕೋರ್ಟ್ನ ವರದಿಗಾರಿಕೆ ಮಾಡುವ ಪತ್ರಕರ್ತರಿ ಕಾನೂನು ಪದವಿ ಅಗತ್ಯವಿಲ್ಲ ಎಂದು ಸುಪ್ರೀಂ ಆಡಳಿ ಮಂಡಳಿ ನಿರ್ಧರಿಸಿರುವುದಾಗಿ ಸಿಜೆಐ ಡಿ.ವೈ ಚಂದ್ರಚೂಡ್ ಅವರು ವಿವರಿಸಿದ್ದಾರೆ. ಇತ್ತೀಚಿನ ವರದಿಯ ಪ್ರಕಾರ, ಸುಪ್ರೀಂ ಕೋರ್ಟ್ ವರದಿಗಾರಿಕೆಗೆ ಅಗತ್ಯವಿರುವ ಮಾನ್ಯತಾ ಪತ್ರ ಪಡೆಯಲು ಈ ಮೊದಲು ಕಾನೂನು ಪದವಿ ಅಗತ್ಯವಾಗಿತ್ತು. ಆದರೆ, ಆಗ ಸಿಜೆಐ ಚಂದ್ರಚೂಡ್ ಅವರ ನೇತೃತ್ವದಲ್ಲಿ ನ್ಯಾಯಾಲಯದ ಆಡಳಿತ ಮಂಡಳಿ ಸುಪ್ರೀಂ ಕೋರ್ಟಿನ ವರದಿಗಾರಿಕೆಗೆ ಕಾನೂನು ಪದವಿ ಅಗತ್ಯವಿಲ್ಲ ನ್ನುವ ನಿರ್ಣಯ ತೆಗೆದುಕೊಂಡಿದೆ. ಸಿಜೆಐ ಡಿ.ವೈ. ಚಂದ್ರಚೂಡ್ಪ ಈ ಕುರಿತು ಪ್ರತಿಕ್ರಿಯಿಸಿರುವ ಸಿಜೆಐ, 'ಸುಪ್ರೀಂ ಕೋರ್ಟ್ನ ವರದಿಗಾರಿಕೆ ಮಾಡುವವರಿಗೆ ಕಾನೂನು ಪದವಿ ಅವಶ್ಯವಿಲ್ಲ ಎಂಬ ಫೈಲ್ ಗೆ ಸಹಿ ಹಾಕಿದ್ದೇನೆ. ಕಾನೂನು ಪದವಿ ಪೂರೈಸಿರುವವರೇ ನ್ಯಾಯಾಲಯಗಳ ವರದಿಗಾರಿಕೆ ಮಾಡಬೇಕು ಎಂದು ಏಕೆ ಷರತ್ತು ವಿಧಿ ಸಲಾಗಿತ್ತೋ ನನಗೆ ತಿಳಿದಿಲ್ಲ. ಕಾನೂನು ಹಿನ್ನೆಲೆ ಇರದ, ಆದರೆ ಕಾನೂನಿನ ಬಗ್ಗೆ ಸಾಮಾನ್ಯ ತಿಳಿವಳಿಕೆಯಿರುವ ಪತ್ರಕರ್ತರು ವರದಿ ಮಾಡಲು ಅವಕಾಶವಿದೆ,'' ಎಂದು ವಿವರಿಸಿದ್ದಾರೆ. ವರದಿಗಾರಿಕೆಗೆ ಮಾನ್ಯತೆ ಪಡೆದ ಪತ್ರಕರ್ತರಿಗೆ ಸುಪ್ರೀಂ ಕೋರ್ಟ್ ಆವರಣದಲ್ಲಿ ಪಾರ್ಕಿಂಗ್ ಸೌಲಭ್ಯವೂ ಇರಲಿದೆ ಎಂದು ಸಿಜೆಐ ಹೇಳಿದ್ದಾರೆ.
ಕಿತ್ತೂರು ವಿಜಯ ಸುದ್ದಿ. ಪತ್ರಕರ್ತರಿಗೊಂದು ಸಿಹಿ ಸುದ್ದಿ
0 Comments