ಕಿತ್ತೂರು ವಿಜಯ ಸುದ್ದಿ ಬೆಳಗಾವಿ:ಸೂರ್ಯ-ಚಂದ್ರರು ಇರುವುದು ಎಷ್ಟು ಸತ್ಯವೋ.. ಡಿ.10ರಂದು ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ, ನಮ್ಮ ನೋವನ್ನು ವ್ಯಕ್ತಪಡಿಸಿ, ಮೀಸಲಾತಿ ಪಡೆಯೋದು ಕೂಡ ಅಷ್ಟೇ ಸತ್ಯ ಎಂದು ಲಿಂಗಾಯತ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದೆ ಜಗದೀಶ ಶೆಟ್ಟರ್, ಯಡಿಯೂರಪ್ಪ, ಬೊಮ್ಮಾಯಿ ಅವರು ಮುಖ್ಯಮಂತ್ರಿ ಇದ್ದಾಗಲೂ ಸುವರ್ಣ ಸೌಧ ಮುಂದೆ ಉಪವಾಸ ಸತ್ಯಾಗ್ರಹ, ಹೋರಾಟ ಮಾಡಿದ್ದೇವೆ. ಹಾಗಾಗಿ, ಡಿ.10ರಂದು ವಕೀಲರ ಪರಿಷತ್ ಮುಂದಾಳತ್ವದಲ್ಲಿ ಸುಮಾರು 5 ಸಾವಿರ ಟ್ರ್ಯಾಕ್ಟರ್ ಗಳೊಂದಿಗೆ ಲಕ್ಷಾಂತರ.ಪಂಚಮಸಾಲಿ ರು.ಸುವರ್ಣ.ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ತಿಳಿಸಿದರು.ನಮ್ಮ ಪಂಚಮಸಾಲಿ ಮೀಸಲಾತಿ ಹೋರಾಟ ಗಟ್ಟಿ ನಿರ್ಧಾರವಾಗಿದೆ. ನಾವು ಚನ್ನಮ್ಮನ ವಂಶಜರು. ಬ್ರಿಟಿಷರ ಲಾಠಿ, ಬೂಟಿನ ಏಟಿಗೆ ಹೆದರದವರ ನಾವು. ಜನಪ್ರತಿನಿಧಿಗಳ ಮನಸ್ಥಿತಿ ಬದಲಾಗಬಹುದು. ಆದರೆ, ನಮ್ಮೆಲ್ಲರ ಮನಸ್ಥಿತಿ ಎಂದೂ ಬದಲಾಗಬಾರದು. ನಮ್ಮ ನ್ಯಾಯಯುತ, ಪ್ರಾಮಾಣಿಕ.ಹೋರಾಟದಲ್ಲಿ ಪಾಲ್ಗೊಳ್ಳಲು ಯಾರೂ ಭಯ ಪಡುವ ಅವಶ್ಯಕತೆ ಇಲ್ಲ. ಒಂದು ವೇಳೆ ಸರ್ಕಾರ ಹೋರಾಟದಲ್ಲಿ ಪಾಲ್ಗೊಳ್ಳಲು ಬರುವ ಸಮಾಜ ಬಾಂಧವರನ್ನು ತಡೆಯಲು ಯತ್ನಿಸಿದರೆ, ಮುಂದೆ ಆಗುವ ಅನಾಹುತಕ್ಕೆ ಸರ್ಕಾರವೇ ಹೊಣೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇರ ಎಚ್ಚರಿಕೆ ನೀಡಿದರು.
ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪೂರ್ವಭಾವಿ ಸಭೆ ಕರೆಯಲಾಗುವುದು. ಇನ್ನು ಡಿ.1ರಂದು ಬೆಳಗಾವಿ ಮಹಾಂತೇಶ ಭವನದಲ್ಲಿ ಪಂಚಮಸಾಲಿ ಸಮಾಜದ ಹಾಲಿ, ಮಾಜಿ ಜನಪ್ರತಿನಿಧಿಗಳ ಸಭೆ ಕರೆಯಲಾಗಿದೆ. ಈ ವೇಳೆ ಯಾವ ರೀತಿ ಸೌಧಕ್ಕೆ ಮುತ್ತಿಗೆ ಹಾಕಬೇಕೆಂದು ಮುಕ್ತವಾಗಿ ಚರ್ಚಿಸುತ್ತೇವೆ. ಬಸನಗೌಡ ಪಾಟೀಲ ಯತ್ನಾಳ, ಎ.ಬಿ.ಪಾಟೀಲ, ವಿಜಯಾನಂದ ಕಾಶಪ್ಪನವರ, ವಿನಯ ಕುಲಕರ್ಣಿ ಸೇರಿ ಬಹಳಷ್ಟು ಮಂದಿ ಆಗಮಿಸಲಿದ್ದಾರೆ. ಇನ್ನು ನಮ್ಮದು ಯಾರ ಪರ, ವಿರುದ್ಧದ ಹೋರಾಟ ಸಲ್ಲ. 2ಎ ಮೀಸಲಾತಿ ನೀಡುವಲ್ಲಿ ಸರ್ಕಾರದ ವಿಳಂಬ ನೀತಿ ಮತ್ತು ನಿರ್ಲಕ್ಷ್ಯ ಖಂಡಿಸಿ ಹೋರಾಟ ಮಾಡುತ್ತಿದ್ದೇವೆ. ಬೆಳಗಾವಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಪ್ರವಾಸ ಮಾಡಿ ಹೆಚ್ಚು ಜನರನ್ನು ಸೇರಿಸಲಾಗುವುದು ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ.ಸ್ಪಷ್ಟಪಡಿಸಿದರು.ಬೆಂಗಳೂರಿನಲ್ಲಿ ನಮ್ಮ ಜೊತೆಗೆ ಸಿಎಂ ಸಿದ್ದರಾಮಯ್ಯ ಸಭೆ ಮಾಡಿದ ಎರಡು ದಿನಗಳಲ್ಲಿ, ದಲಿತ ಸಮುದಾಯದ ಒಳ ಮೀಸಲಾತಿ ಸಭೆಯಲ್ಲಿ ಕ್ಯಾಬಿನೇಟ್ ಮಿಟಿಂಗ್ ಮಾಡಿ, ಮೂರು ತಿಂಗಳೊಳಗೆ ವರದಿ ತರಿಸಿಕೊಂಡು ಒಳ ಮೀಸಲಾತಿ ಅನುಷ್ಠಾನಕ್ಕೆ ತರುವ ಭರವಸೆ ನೀಡಿದ್ದಾರೆ. ಈ ವಿಷಯ ಕೇಳಿ ನಮಗೂ ಸಂತೋಷವಾಯಿತು.ಅದೇ ರೀತಿ.ಪಂಚಮಸಾಲಿಗಳಿಗೂ ಕೂಡ ಉಪ ಚುನಾವಣೆ ನೆಪ ಹೇಳದೇ, ವರದಿ ತರಿಸಿಕೊಂಡು ಮೀಸಲಾತಿ ಘೋಷಿಸುತ್ತೇವೆ ಎಂದು ಭರವಸೆ ನೀಡಬೇಕಾಗಿತ್ತು. ಆದರೆ, ಸರ್ಕಾರ ಅದನ್ನು ಮಾಡಲಿಲ್ಲ. ಹಾಗಾಗಿ, ಬೆಂಗಳೂರಿನಲ್ಲಿ ಅವತ್ತೆ ಎಲ್ಲ ಹೋರಾಟಗಾರರು ಸೇರಿಕೊಂಡು ಬೆಳಗಾವಿ ಅಧಿವೇಶನಕ್ಕೆ ಸರ್ಕಾರ ಬಂದಾಗ.ನಮ್ಮ.ಆಕ್ರೋಶವನ್ನು ತೋರಿಸಬೇಕೆಂದು ನಿರ್ಧರಿಸಿದ್ದೇವು. ಆ ರೀತಿ ಈಗ ಅಹಿಂಸಾತ್ಮಕ ಚಳುವಳಿ.ಕೈಗೆತ್ತಿಕೊಂಡಿದ್ದೇವೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.ಈ ವೇಳೆ ಮಾಜಿ ಸಚಿವ ಶಶಿಕಾಂತ ನಾಯಿಕ, ಮುಖಂಡರಾದ ನಿಂಗಪ್ಪ ಫಿರೋಜಿ, ನ್ಯಾಯವಾದಿ ಆರ್.ಸಿ.ಪಾಟೀಲ, ಗುಂಡು ಪಾಟೀಲ, ಧರೆಪ್ಪ ಠಕ್ಕನ್ನವರ, ಪೂಜಾ ಸವದತ್ತಿ ಸೇರಿ ಮತ್ತಿತರರು ಇದ್ದರು.
0 Comments