೧೩ ನೆಯ ಮಾಸಿಕ ಶಿವಾನುಭವ, ರಾಣಿ ಚನ್ನಮ್ಮ ಜಯಂತಿ ಮೇದರ ಕೇತಯ್ಯ ಸ್ಮರಣೆ ಮತ್ತು ೬೯ ನೆಯ ಕರ್ನಾಟಕ ರಾಜ್ಯೋತ್ಸವ ಸಂಭ್ರಮಗಳ ಪ್ರಯುಕ್ತ ಸಾಧಕರಿಗೆ ಸನ್ಮಾನ ಮತ್ತು "ಪವಾಡ ಪುರುಷ ಶ್ರೀ ಮಡಿವಾಳೇಶ್ವರ ಚರಿತ್ರೆ " ಕೃತಿ ಬಿಡುಗಡೆ.
ಚನ್ನಮ್ಮನ ಕಿತ್ತೂರು:- ಕಿತ್ತೂರಿನ ಕಲ್ಕತದ ಶ್ರೀ ಶಂಕರ ಚಂದರಗಿ ಸಭಾ ಭವನದಲ್ಲಿ ಶುಕ್ರವಾರದಿನಾಂಕ ೧೫ ರಂದು ಸಾಯಂಕಾಲ ೬ ಗಂಟೆಗೆ ರಾಜಗುರು ಸಂಸ್ಥಾನ ಕಲ್ಮಠ ಮತ್ತು ಕಿತ್ತೂರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಗಳ ಸಂಯುಕ್ತ ಆಶ್ರಯದಲ್ಲಿ ೧೩ ನೆಯ ಮಾಸಿಕ ಶಿವಾನುಭವ, ರಾಣಿ ಚನ್ನಮ್ಮಾಜಿಯವರ ೨೪೬ ನೆಯ ಜಯಂತಿ, ಮೇದರ ಕೇತಯ್ಯ ಸ್ಮರಣೆ ಮತ್ತು ೬೯ ನೆಯ ಕರ್ನಾಟಕ ರಾಜ್ಯೋತ್ಸವ ಸಂಭ್ರಮಗಳ ಪ್ರಯುಕ್ತವಾಗಿ ಮಾಜಿ ಸೈನಿಕರಿಗೆ, ಸಾಧಕರಿಗೆ ಸನ್ಮಾನ ಮತ್ತು ಶ್ರೀ ರಾಜಶೇಖರ ಕೋಟಿ ವಿರಚಿತ ಕೃತಿ, ರಾಜಗುರು ಸಂಸ್ಥಾನ ಕಲ್ಮಠ ಪ್ರಕಾಶಿತ "ಪವಾಡ ಪುರುಷ ಶ್ರೀ ಮಡಿವಾಳೇಶ್ವರ ಚರಿತ್ರೆ" ಬಿಡುಗಡೆ ನಡೆಯಲಿದೆ ಎಂದು ಕಿತ್ತೂರು ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಸ್.ಬಿ.ದಳವಾಯಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲ್ಮಠದ ಪೂಜ್ಯ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಮತ್ತು ನಿಚ್ಚಣಕಿಯ ಪೂಜ್ಯ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಲಿರುವ ಸಮಾರಂಭದ ಅಧ್ಯಕ್ಷತೆಯನ್ನು ಡಾ.ಎಸ್.ಬಿ.ದಳವಾಯಿ ವಹಿಸಲಿದ್ದಾರೆ. ಬೆಳಗಾವಿ ಜಿಲ್ಲಾ ಮಾಧ್ಯಮ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮತ್ತು ಪ್ರಜಾವಾಣಿ ವರದಿಗಾರರಾದ ಶ್ರೀ ಪ್ರದೀಪ ಮೇಲಿನಮನಿ, ಗ್ರಂಥ ದಾಸೋಹಿಗಳಾದ ಶ್ರೀ ಸತೀಶ ಶಶಿಕಾಂತ ವಳಸಂಗ, ಶ್ರೀ ರಾಜಶೇಖರ ಕೋಟಿ, ನಿವೃತ್ತ ಸೇನಾಧಿಕಾರಿಗಳೂ ಮತ್ತು ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರ ಕಿತ್ತೂರಿನ ಸಂಸ್ಥಾಪಕರಾದ ಶ್ರೀ ಪರ್ವೇಜ್ ಹವಾಲ್ದಾರ ಇವರುಗಳನ್ನು ಗೌರವಿಸಲಾಗುವದು.
ಶ್ರೀ ಈಶ್ವರ ಗಡಿಬಿಡಿ, ಶ್ರೀ ಪ್ರಲ್ದಾದ ಶಿಗ್ಗಾಂವಿ ನೇತೃತ್ವದ ಶ್ರೀ ಗ್ರಾಮ ದೇವಿ ಭಜನಾ ಮಂಡಳಿ, ರಾಣಿ ಚನ್ನಮ್ಮ ಮಹಿಳಾ ವೇದಿಕೆ, ಬೆಳ್ಳಿ ಚುಕ್ಕಿ ಮಹಿಳಾ ವೇದಿಕೆ ಇವರಿಂದ ಸಂಗೀತ ಕಾರ್ಯಕ್ರಮಗಳು ನಡೆಯಲಿದ್ದು ಕಿತ್ತೂರ ನಾಡಿನ ಶರಣ ಶರಣೆಯರು ಭಾಗವಹಿಸಬೇಕೆಂದು ಶ್ರೀ ಕಲ್ಮಠದ ಸಕಲ್ಪ ಸದ್ಭಕ್ತರ ಪರವಾಗಿ ಡಾ.ಎಸ್.ಬಿ.ದಳವಾಯಿ ಮನವಿ ಮಾಡಿದ್ದಾರೆ.
0 Comments