ಕಿತ್ತೂರು ವಿಜಯ ಸುದ್ದಿ.ಐಪಿಎಲ್ ಮೆಗಾ ಹರಾಜು ದಿನಾಂಕ ನಿಗದಿ 1,574 ಆಟಗಾರರ ಹೆಸರು ನೋಂದಣಿ


 
ನವದೆಹಲಿ: 18ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಆಟಗಾರರ ಹರಾಜಿನ ದಿನಾಂಕವನ್ನು ಪ್ರಕಟಿಸಲಾಗಿದೆ. ಕಳೆದ ವರ್ಷದಂತೆ ಈ ಬಾರಿಯೂ ವಿದೇಶದಲ್ಲಿ ಹರಾಜು ನಡೆಸಲು ಇಂಡಿಯನ್ ಪ್ರೀಮಿಯರ್ ಲೀಗ್ ನಿರ್ಧರಿಸಿದ್ದು, ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ಆಟಗಾರರ ಹರಾಜು ನಡೆಯಲಿದೆ. ನ. 24 ಮತ್ತು 25 ರಂದು ನಡೆಯಲಿರುವ ಹರಾಜಿಗೆ 1,574 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 1.165 ಭಾರತೀಯರು ಮತ್ತು 409 ವಿದೇಶಿ ಕ್ರಿಕೆಟಿಗರಿದ್ದಾರೆ. ಭಾರತದ ನಂತರ ದಕ್ಷಿಣ ಆಫ್ರಿಕಾದ ಅತಿ ಹೆಚ್ಚು ಕ್ರಿಕೆಟಿಗರು ಪಟ್ಟಿಯಲ್ಲಿದ್ದಾರೆ. ಇವುಗಳಲ್ಲಿ ಸುಮಾರು 200 ಆಟಗಾರರ ಮೇಲೆ ಬಿಡ್‌ಗಳನ್ನು ಇರಿಸಬಹುದು.

ಈ ಹರಾಜಿನಲ್ಲಿ ಐಪಿಎಲ್ 2024ರಲ್ಲಿ ನಾಯಕರಾಗಿದ್ದ ರಿಷಬ್ ಪಂತ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್ ಅವರ ಹೆಸರುಗಳೂ ಬಿಡ್ ಆಗಲಿವೆ. ಈ ಮೂವರು ಕ್ರಿಕೆಟಿಗರನ್ನು ಐಪಿಎಲ್ 2025ಕ್ಕೆ ಉಳಿಸಿಕೊಂಡಿಲ್ಲ. ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಅವರ ಹೆಸರುಗಳೂ ಹರಾಜಿನ ಪಟ್ಟಿಯಲ್ಲಿ ಸೇರ್ಪಡೆಯಾಗಲಿವೆ. ಈ ಕುರಿತು ಮುಂದಿನ ವಾರ ಬಿಸಿಸಿಐ ಅಂತಿಮ ಪಟ್ಟಿ ಪ್ರಕಟಿಸುವ ನಿರೀಕ್ಷೆ ಇದೆ.

Tಯಾವ ದೇಶಗಳಿಂದ ಎಷ್ಟು ಆಟಗಾರರು?

ವಿದೇಶಿ ಆಟಗಾರರ ಪೈಕಿ ದಕ್ಷಿಣ ಅಫ್ರಿಕಾದ 91 ಆಟಗಾರರಿದ್ದು, ಆಸ್ಟ್ರೇಲಿಯಾದ 76, ಇಂಗ್ಲೆಂಡ್‌ನ 52 ಆಟಗಾರರಿದ್ದಾರೆ. ಉಳಿದಂತೆ ನ್ಯೂಜಿಲೆಂಡ್‌ನ 39, ವೆಸ್ಟ್ ಇಂಡೀಸ್‌ನ 33, ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾದ ತಲಾ 29, ಬಾಂಗ್ಲಾದೇಶದ 13, ಅಮೆರಿಕದ 10, ಐರ್ಲೆಂಡ್ 9, ಜಿಂಬಾಬ್ಳೆಯ 8. ಸ್ಯಾಟ್ಲಂಡ್‌ನ 2, ಯುಎಇ ಹಾಗೂ ಇಟಲಿಯ ತಲಾ ಒಬ್ಬ ಆಟಗಾರ ನೋಂದಣಿ ಮಾಡಿಕೊಂಡಿದ್ದಾರೆ.رಎರಡು ಕೋಟಿ ರೂಪಾಯಿ ಮೂಲ ಬೆಲೆ ಹೊಂದಿರುವ ಭಾರತೀಯ ಆಟಗಾರರು

ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ರವಿಚಂದ್ರನ್

ಅಶ್ವಿನ್, ಯಜುವೇಂದ್ರ ಚಹಲ್, ಮೊಹಮ್ಮದ್ ಶಮಿ, ಖಲೀಲ್ ಅಹಮದ್, ದೀಪಕ್ ಚಹರ್, ವೆಂಕಟೇಶ್ ಅಯ್ಯರ್, ಇಶಾನ್ ಕಿಶನ್, ಆವೇಶ್ ಖಾನ್, ಭುವನೇಶ್ವರ್ ಕುಮಾರ್, ಪ್ರಸಿದ್ ಕೃಷ್ಣ, ಟಿ ನಟರಾಜನ್, ದೇವದತ್ ಪಡಿಕ್ಕಲ್, ಕೃನಾಲ್ ಪಾಂಡ್ಯ, ಹರ್ಷಲ್ ಪಟೇಲ್, ಆರ್ಷದೀಪ್ ಸಿಂಗ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್,

ಎರಡು ಕೋಟಿ ರೂಪಾಯಿ ಮೂಲ ಬೆಲೆಯ ವಿದೇಶಿ ಆಟಗಾರರು: ಜೋಸ್ ಬಟ್ಲರ್, ಮಿಚೆಲ್ ಸ್ಟಾರ್ಕ್ ಸ್ಟೀವ್ ಸ್ಮಿತ್, ಹಾನಿ ರ್ಬೇಸ್ಟೋವ್, ಜೋಫ್ರಾ ಆರ್ಚರ್, ಕಗಿಸೋ ರಬಾಡ, ಮಾರ್ಕ್ ವುಡ್. ಅಟ್ಟಿಸನ್

ಟೀಮ್ ಇಂಡಿಯಾದಲ್ಲಿ ಕೆಲ ಬದಲಾವಣೆ

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ

ನವದೆಹಲಿ: ಭಾರತೀಯ ಕ್ರಿಕೆಟ್ ತಂಡ ನ.8 ರಂದು ಡರ್ಬನ್‌ನಲ್ಲಿ ಪ್ರಾರಂಭವಾಗುವ ನಾಲ್ಕು ಪಂದ್ಯಗಳ ಟಿ20 ಸರಣಿಯಲ್ಲಿ ಆಫ್ರಿಕಾವನ್ನು ಬಿಸಿಸಿಐ ಕಳೆದ ತಿಂಗಳು 15 ಸದಸ್ಯರ ತಂಡವನ್ನು ಘೋಷಿಸಿತ್ತು ಮತ್ತು ತವರಿನಲ್ಲಿ ಬಾಂಗ್ಲಾದೇಶದ ವಿರುದ್ಧದ ಸರಣಿಗೆ ನಾಯಕನಾಗಿದ್ದ ಸೂರ್ಯಕುಮಾರ್ ಯಾದವ್ ಅವರನ್ನು ಕ್ಯಾಪ್ಟನ್ ಆಗಿ ಉಳಿಸಿಕೊಳ್ಳಲಾಗಿದೆ. ಎರಡು ವಾರಗಳ ಪ್ರವಾಸಕ್ಕಾಗಿ ಬಾಂಗ್ಲಾದೇಶದ ಸರಣಿಯಲ್ಲಿ ಭಾಗಿಯಾಗಿದ್ದ ಸುಮಾರು 10 ಆಟಗಾರರು ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸಿದ್ದಾರೆ. ಕಳೆದ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಲ್ಲಿ ಚೊಚ್ಚಲ ಪಂದ್ಯವನ್ನಾಡಿದ

ಮತ್ತು ಎಲ್ಲಾ ಮೂರು ಪಂದ್ಯಗಳನ್ನು ಆಡಿದ ಸ್ಟಾರ್ ವೇಗಿ ಮಯಾಂಕ್ ಯಾದವ್ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಭಾಗವಾಗಿಲ್ಲ. 22 ವರ್ಷ ವಯಸ್ಸಿನ ಬಲಗೈ ವೇಗಿ ಗಾಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು




ಮೆಗಾ ಹರಾಜಿನಲ್ಲಿ ಇಟಲಿ ಆಟಗಾರ

ಇದೇ ಮೊದಲ ಬಾರಿಗೆ ಇಟಲಿ ಆಟಗಾರರೊಬ್ಬರು ಐಪಿಎಲ್ ಮೆಗಾ ಹರಾಜಿಗಾಗಿ ಹೆಸರು ನೀಡಿದ್ದಾರೆ. ಹೀಗೆ ಚೊಚ್ಚಲ ಐಪಿಎಲ್ ಅವಕಾಶವನ್ನು ಎದುರು ನೋಡುತ್ತಿರುವ ಇಟಲಿಯ ಆಟಗಾರನ ಹೆಸರು ಥಾಮಸ್ ಜ್ಯಾಕ್ ಡ್ರಾಕಾ. 24 ವರ್ಷದ ಥಾಮಸ್ ಜ್ಯಾಕ್ ಈ ಹಿಂದೆ ಇಂಟ‌ರ್ ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಎಂಬ ಎಮಿರೇಟ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಹಾಗೆಯೇ ಕೆನಡಾ ಟಿ20 ಲೀಗ್‌ನಲ್ಲೂ ಕಣಕ್ಕಿಳಿದಿದ್ದಾರೆ.

ಇಟಲಿ ಪರ ಈಗಾಗಲೇ 4 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಥಾಮಸ್ ಜ್ಯಾಕ್ ಡ್ರಾಕಾ ಒಟ್ಟು 8 ವಿಕೆಟ್ ಕಬಳಿಸಿದ್ದಾರೆ. ಇದೀಗ ಥಾಮಸ್ ಜ್ಞಾಕ್ ಐಪಿಎಲ್‌ ನಲ್ಲಿ ಅದೃಷ್ಟ ಪರೀಕ್ಷಿಸಲು ಮುಂದಾಗಿದ್ದು, ಅದರಂತೆ ಅಸೋಸಿಯೇಟ್ ನೇಷನ್ ಆಟಗಾರರ ವಿಭಾಗದಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.

ಆದರೌಂಡರ್ ವಾಷಿಂಗ್ಟನ್ ಸುಂದರ್ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದ ನಂತರ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಅವರನ್ನು ಕಡೆಗಣಿಸಲಾಗಿದೆ. ಆಕ್ಷರ್ ಪಟೇಲ್ ಮತ್ತು ಆವೇಶ್ ಖಾನ್ ತಂಡಕ್ಕೆ ಮರಳಿದ್ದಾರೆ.

ಎದುರಿಸುತ್ತಿದ್ದಾರೆ, ಹಾಗಾಗಿ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ. ಆಸ್ಸಾಂನ ಆಲ್‌ರೌಂಡರ್ ರಿಯಾನ್ ಪರಾಗ್ ಕೂಡ ಆಯ್ಕೆಗೆ ಅಲಭ್ಯರಾಗಿದ್ದಾರೆ. ಗಾಯದಿಂದ ಬಳಲುತ್ತಿರುವ ಶಿವಂ ದುಬೆ ಬದಲಿಗೆ ತಿಲಕ್ ವರ್ಮಾ ರಿಪ್ಲೇಸ್ ಮಾಡಲಾಗಿದೆ. ఆంధ్రద ఆలారౌండరా ఎతితో ಕುಮಾರ್ ರೆಡ್ಡಿ, ದೆಹಲಿ ಮೂಲದ ವೇಗಿ ಹರ್ಷಿತ್ ರಾಣಾ ಮತ್ತು ತಮಿಳುನಾಡು

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾನ್ (ವಿಕೆಟ್ ಕೀಪರ್), ರಿಂಕು ಸಿಂಗ್, ತಿಲಕ್ ವರ್ಮಾ. ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರಮಣದೀಪ್ ಸಿಂಗ್, ವರುಣ್

Post a Comment

0 Comments