ಕಿತ್ತೂರು ವಿಜಯ ಸುದ್ದಿ.ರಾಜ್ಯದ 37 ಕಡೆ ಲೋಕಾ ದಾಳಿ 66.70 ಲಕ್ಷ ನಗದು ಜಪ್ತಿ | ₹22.50 ಕೋ. ಮೌಲ್ಯದ ಆಸ್ತಿ ಪತ್ತೆ


ಬೆಂಗಳೂರು: ರಾಜ್ಯದ ವಿವಿಧ ಕಡೆ ಬೆಳ್ಳಂಬೆಳ್ಳಿಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಸಿರುವ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ಬರೋಬ್ಬರಿ 22.50 ಕೋಟಿ ರೂ.ಬೆಲೆ ಬಾಳುವ ಆಸ್ತಿ ಪಾಸ್ತಿ, 66.70 ಲಕ್ಷ ಸಗದು ಹಣ ಪತ್ತೆ ಮಾಡಿದ್ದಾರೆ.

ಬೆಂಗಳೂರು, ಮೈಸೂರು, ದಾವಣಗೆರೆ, ಧಾರವಾಡ, ಬೆಳಗಾವಿ ಹಾವೇರಿ, ಬೀದ‌ರ್, ರಾಮನಗರ ಸೇರಿ ದಂತೆ ಒಟ್ಟು 37 ಕಡೆ ದಾಳಿ ನಡೆಸಿ ಭ್ರಷ್ಟ ಸರ್ಕಾರಿ ಅಧಿಕಾರಿ ಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಆಯಾ ಜಿಲ್ಲಾ ವ್ಯಾಪ್ತಿಯ 8 ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿದ್ದಾರೆ.

8 ಜನ ಕೋಟಿ ಕುಳಗಳು ಪತ್ತೆ: ಬೆಳಗಾವಿ ಜಿಲ್ಲೆ ನಿಪ್ಪಾಣಿ

ತಾಲೂಕಿನ ಗ್ರಾಮ ಆಡಳಿತಾಧಿಕಾರಿ ವಿಠಲ್ ಶಿವಪ್ಪ ಧವಳೇಶ್ವರ ಮನೆ, ಕಚೇರಿ ಮೇಲೆ ದಾಳಿ ನಡೆಸಿ ಒಂದು ಮನೆ, 4 ಎಕರೆ ಕೃಷಿ ಜಮೀನು ಸೇರಿ 1.50 ಕೋಟಿ ಮೌಲ್ಯದ ಆಸ್ತಿ, 3.45 ಚಿನ್ನಾಭರಣ ಸೇರಿ

ಒಟ್ಟು 1,08,52,244 ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಬೆಂಗಳೂರು ಕೋರಮಂಗಲ ವಾಣಿಜ್ಯ ತೆರಿಗೆಗಳ ಸಾಹಾಯಕ ಆಯುಕ್ತ ವೆಂಕಟೇಶ್ ಎಸ್. ಮುಜಮ್ಹಾರ್‌ಗೆ ಸೇರಿದ 5 ಸ್ಥಳಗಳಲ್ಲಿ ದಾಳಿ ನಡೆಸಿ, ಒಟ್ಟ 1/63 ಕೋಟಿ ರೂ.ಬೆಲೆ ಬಾಳುವ ಎರಡು ವಾಸದ ಮನೆ, 1 ಗ್ಯಾಸ್ ಗೋಡೌನ್, 1 ಎಕರೆ ಜಮೀನು ಹಾಗೂ 58.43 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಚರಾಸ್ತಿ, ವಾಹನ ಸೇರಿ 2,21,43,900 ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

ಹಿರೆಕೇರೂರು ಗ್ರಾಮೀಣ ಕುಡಿವ ನೀರು ಮತ್ತು ಒಳಚರಂಡಿ ಇಲಾಖೆ ಸಹಾಯಕ ಇಂಜಿನಿಯರ್ ಕಾಶಿನಾಥ್ ಬುದ್ದಪ್ಪ ಭಜಂತ್ರಿ ಅವರಿಗೆ ಸೇರಿದ 4 ಸ್ಥಳಗಳಲ್ಲಿ ಲೋಕಾಯುಕ್ತರು ದಾಳಿ ನಡೆಸಿ 2 ಕೋಟಿ 61 ಲಕ್ಷ ರೂ. ಮೌಲ್ಯದ 6 ನಿವೇಶ, 2 ವಾಸದ ಮನೆ, 5 ಎಕರೆ ಕೃಷಿ ಜಮೀನು ಪತ್ತೆಯಾಗಿದೆ. 59.62 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 20 ಲಕ್ಷ ನಗದು, ವಾಹನ ಸೇರಿದಂತೆ 3 ಕೋಟಿ 20 ಲಕ್ಷ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೈಗಾರಿಕಾ ಪ್ರದೇಶ ಕರೂರು ದಾವಣಗೆರೆ ಜಿಲ್ಲೆಯ ಸಹಾಯಕ ನಿರ್ದೇಶಕ ಕಮಲ್‌ರಾಜ್‌ಗೆ ಸೇರಿ 4 ಕಡೆ ದಾಳಿ ನಡೆಸಿ 1.31 ಕೋಟಿ ರೂ. ಮೌಲ್ಯದ 6 ನಿವೇಶನ, 2 ವಾಸದ ಮನೆ, 1 ಎಕರೆ ಜಮೀನು ಪತ್ತೆಯಾಗಿದೆ. 

Post a Comment

0 Comments