ಕಿತ್ತೂರು ವಿಜಯ ಸುದ್ದಿ: ರಾಜ್ಯದಲ್ಲಿ ನಡೆಯಲಿರುವ ಮೂರು
ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಅಂತ್ಯಗೊಳ್ಳಲಿದೆ.
ನ.13 ರಂದು ಉಪಚುನಾವಣೆ ನಡೆಯಲಿದೆ. 3 ಕ್ಷೇತ್ರಗಳ ಪೈಕಿ ಬೊಂಬೆಗಳ ನಾಡು ಚನ್ನಪಟ್ಟಣ ಹೈವೋಲ್ವೇಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ. ಸಂಡೂರು ಹಾಗೂ ಶಿಗ್ಗಾವಿ ಕ್ಷೇತ್ರದಲ್ಲೂ ಜಿದ್ದಾಜಿದ್ದಿನಹೋರಾಟ ಕಂಡುಬರ್ತಿದ್ದು, ಇವತ್ತು ಅಬ್ಬರದ ಬಹಿರಂಗ ಪ್ರಚಾರ ಅಂತ್ಯವಾಗಲಿದೆ.ಉಪ ಚುನಾವಣೆ ಎದುರಿಸುತ್ತಿರುವ ಚನ್ನಪಟ್ಟಣ, ಶಿಗ್ಗಾವಿ,
ಸಂಡೂರು ವಿಧಾನಸಭೆ ಕ್ಷೇತಗಳಿಗೆ ಬರುವ ಬುಧವಾರ
ಮತದಾನ ನಡೆಯಲಿದೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ
ಸಿ ಪಿ ಯೋಗೇಶ್ ಮತ್ತು ಎನ್ ಡಿ ಎ ಒಕ್ಕೂಟದ ಜೆಡಿಎಸ್
ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಡುವೆ ತುರುಸಿನ ಸ್ಪರ್ಧೆ
ಏರ್ಪಟ್ಟಿದೆ.ಮತ್ತೊಂದೆಡೆ, ಶಿಗ್ಗಾವಿಯಲ್ಲಿ ಎನ್ ಡಿ ಎ ಅಭ್ಯರ್ಥಿ
ಭರತ್ ಬೊಮ್ಮಾಯಿ ಹಾಗೂ ಯಾಸಿರ್ ಅಹ್ಮದ್ ಖಾನ್
ಪಠಾಣ್ ಕಣದಲ್ಲಿ ದ್ದಾರೆ. ಇಲ್ಲಿಯೂ ಅಬ್ಬರದ ಪ್ರಚಾರ
ನಡೆಯುತ್ತಿದ್ದು ತೀವ್ರ ಕುತೂಹಲ ಕೆರಳಿಸಿದೆ.ಹಾಗೆಯೇ ಸಂಡೂರಲ್ಲಿ ಕಾಂಗ್ರೆಸ್ ನಿಂದ ಅನ್ನಪೂರ್ಣ ಹಾಗೂ ಬಿಜೆಪಿಯಿಂದ ಬಂಗಾರು ಹನುಮಂತ ಕಣದಲ್ಲಿ ಇದ್ದಾರೆ. ಎಲ್ಲಾ 3 ಕ್ಷೇತ್ರದಲ್ಲೂ ಬಹಿರಂಗ ಪ್ರಚಾರ ಇವತ್ತು ಅಂತ್ಯವಾಗಲಿದ್ದು,
ನಾಳೆಯಿಂದ ಮನೆ ಮನೆ ಪ್ರಚಾರ ನಡೆಯಲಿದೆ.
0 Comments