ಚನ್ನಮ್ಮನ ಕಿತ್ತೂರು:- ರಾಜಗುರು ಸಂಸ್ಥಾನ ಕಲ್ಮಠದ ಆವರಣದಲ್ಲಿ ಪೂಜ್ಯ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ರಾಣಿ ಚನ್ನಮ್ಮಳ 246 ನೆಯ ಜಯಂತಿ ಮತ್ತು ಮಕ್ಕಳ ದಿನಾಚರಣೆಯ ಆಚರಣೆಯ ಅಂಗವಾಗಿ ನಡೆದ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಚನ್ನಮ್ಮನ ಕಿತ್ತೂರಿನ ತಾಲೂಕಾ ಘಟಕದ ಅಧ್ಯಕ್ಷರಾದ ಡಾ.ಎಸ್.ಬಿ.ದಳವಾಯಿ ಮಾತನಾಡಿ ವೀರ ರಾಣಿ ಚನ್ನಮ್ಮಳ ಜಯಂತಿಯನ್ನು ಪ್ರತಿ ವರ್ಷ ನವೆಂಬರ್ 14 ರಂದು ಆಚರಿಸುತ್ತಾ ಬರಲಾಗಿದೆ. ಸರಕಾರವು ಅಕ್ಟೋಬರ್ 23 ರಂದು ಚನ್ನಮ್ಮಳ ಜಯಂತಿಯನ್ನು ಆಚರಿಸುವದರ ಮೂಲಕ ಜನತೆಯಲ್ಲಿ ಗೊಂದಲ ಮೂಡಿಸುತ್ತಿರುವದಕ್ಕೆ ವಿಷಾದ ವ್ಯಕ್ತ ಪಡಿಸುತ್ತಾ ಮಕ್ಕಳಲ್ಲಿ ಚನ್ನಮ್ಮನ ಜಯಂತಿ ಮತ್ತು ವಿಜಯೋತ್ಸವ ಕುರಿತು ಸರಿಯಾದ ಮಾಹಿತಿ ನೀಡುವದಾಗಬೇಕೆಂದು ಶಿಕ್ಷಕರಲ್ಲಿ ಮನವಿ ಮಾಡಿದರು.ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳನ್ನು ತಿಳಿಸುತ್ತಾ ದೂರದರ್ಶನ ಮತ್ತು ಮೋಬೈಲಗಳಿಂದ ದೂರವಿರುವಂತೆ ಮನವಿಮಾಡಿದರು.
ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೂಜ್ಯ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಹತ್ತು ಹಲವಾರು ವರ್ಷಗಳಿಂದ ನವೆಂಬರ 14 ರಂದೇ ರಾಣೆ ಚನ್ನಮ್ಮಳ ಜಯಂತಿಯನ್ನು ಆಚರಿಸುತ್ತಾ ಬರಲಾಗುತ್ತಿದೆ. ಈ ಕುರಿತು ಸರಕಾರಕ್ಕೆ ಎಷ್ಟು ಸಲ ಮನವಿ ಮಾಡಿದರೂ ಸಹಿತ ಸ್ಪಂದಿಸದೇ ವಿಜಯೋತ್ಸವದ ದಿನವೇ ಚನ್ನಮ್ಮಳ ಜಯಂತಿಯನ್ನು ಆಚರಿಸುತ್ತಿರುವದಕ್ಕೆ ಕಳವಳ ವ್ಯಕ್ತ ಪಡಿಸುತ್ತಾ ಇನ್ನು ಮುಂದೆಯಾದರೂ ಸರಕಾರ ಮತ್ತು ಜನ ಪ್ರತಿನಿಧಿಗಳು ಹೀಗಾಗದಂತೆ ನೋಡಿಕೊಳ್ಳಬೇಕೆಂದು ಒತ್ತಾಯ ಮಾಡಿದರು. ಸಮಾರಂಭದಲ್ಲಿ ರಾಜಗುರು ಶಿಕ್ಷಣ ಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶ್ರೀಮತಿ ದೀನಾ ಲಂಗೋಟಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಶ್ರೀಮತಿ ನಂದಿನಿ ಹಿರೇಮಠ ವಂದಿಸಿದರು.ಶ್ರೀಮತಿ ರಾಜೇಶ್ವರಿ ಕಳಸಣ್ಣವರ ನಿರೂಪಿಸಿದರು. ಸಮಾರಂಭದ ನಂತರ ಮಕ್ಕಳಿಂದ ವೇಷ ಭೂಷಣ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
0 Comments