ಕಿತ್ತೂರು ವಿಜಯ ಸುದ್ದಿ.ಚನ್ನಮ್ಮನ ಕಿತ್ತೂರಿನಲ್ಲಿ ಯುವ ಪ್ರತಿಭೆಗಳು ಬೆಳೆಯುತ್ತಿರುವದು ಸಂತಸದ ವಿಷಯ.

ಕಿತ್ತೂರು ವಿಜಯ ಸುದ್ದಿ. ಚನ್ನಮ್ಮನ  ಕಿತ್ತೂರಿನಲ್ಲಿ ಮಾಸಿಕ  ಶಿವಾನು ಭವ ಕಾರ್ಯಕ್ರಮ. ನಡೆಯಿತು

 ಚನ್ನಮ್ಮನ .ಕಿತ್ತೂರಿನಲ್ಲಿ ಇತ್ತೀಚೆಗೆ ಯುವ ಸಾಹಿತಿಗಳು, ಕಲಾವಿದರು, ಬರಹಗಾರರು ಬೆಳೆಯುತ್ತಿರುವದು ಸಂತಸವಾಗಿದ್ದು ಇಂತಹವರನ್ನು ಗುರುತಿಸಿ ಗೌರವಿಸುತ್ತಿರುವದು ಹೆಮ್ಮೆಯ ವಿಷಯವಾಗಿದೆ ಎಂದು ರಾಜಗುರು ಸಂಸ್ಥಾನ ಕಲ್ಕತದ ಪೂಜ್ಯ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಸಂತಸ ವ್ಯಕ್ತ ಪಡಿಸಿದರು. ಅವರು ಕಿತ್ತೂರಿನ ಕಲ್ಕಪದ ಶ್ರೀ ಶಂಕರ ಚಂದರಗಿ ಸಭಾ ಭವನದಲ್ಲಿ ರಾಜಗುರು ಸಂಸ್ಥಾನ ಇಲ್ಮಶ ಮತ್ತು ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ೧೩ ನೆಯ ಮಾಸಿಕ ಶಿವಾನುಭವ,ವೀರ ರಾಣಿ ಚನ್ನಮ್ಮಳ ೨೪೬ ನೆಯ ಜಯಂತಿ, ಮೇದರ ಕೇತಯ್ಯ ಸ್ಮರಣೆ ಮತ್ತು ೬೯ ನೆಯ ಕರ್ನಾಟಕ ರಾಜ್ಯೋತ್ಸವ ಸಂಭ್ರಮಗಳ ಪ್ರಯುಕ್ತವಾಗಿ ಮಾಜಿ ಸೈನಿಕರಿಗೆ, ಸಾಧಕರಿಗೆ ಸನ್ಮಾನ ಮತ್ತು ಶ್ರೀ ರಾಜಶೇಖರ ಕೋಟಿ ವಿರಚಿತ ಕೃತಿ ಬಿಡುಗಡೆ ಸಮಾರಂಭದ ಸಾನಿಧ್ಯ ವಹಿಸಿ ಬೆಳಗಾವಿ ಜಿಲ್ಲಾ ಮಾಧ್ಯಮ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಪ್ರದೀಪ ಮೇಲಿನಮನಿ, ಶ್ರೀ ಸತೀಶ ಶಶಿಕಾಂತ ವಳಸಂಗ, ಸಾಹಿತಿಗಳಾದ ಶ್ರೀ ರಾಜಶೇಖರ ಕೋಟಿ, ನಿವೃತ್ತ ಸೇನಾಧಿಕಾರಿಗಳಾದ ಶ್ರೀ ಪರ್ವೇಜ್ ಹವಾಲ್ದಾರ ಮತ್ತು ಭಾವಚಿತ್ರ ಕಲಾವಿದರಾದ ಕುಮಾರ ವಿಕಾಸ ಮಹೇಶ್ವರ ಹೊಂಗಲ ಇವರುಗಳನ್ನು ಗೌರವಿಸಿ ಆಶೀರ್ವದಿಸಿದರು. ಸನ್ಮಾನ ಸ್ವೀಕರಿಸಿದ ಶ್ರೀ ಪ್ರದೀಪ ಮೇಲಿನಮನಿ ಮಾತನಾಡಿ ತಮ್ಮ ಪತ್ರಿಕಾ ಅನುಭವದ ಸಿಹಿ ಕಹಿ ಅನುಭವಗಳನ್ನು ಹಂಚಿಕೊಂಡು ಕಿತ್ತೂರು ಕರ್ನಾಟಕದ ಕೇಂದ್ರ ಸ್ಥಳ ಚನ್ನಮ್ಮನ ಕಿತ್ತೂರು ಆಗುವಂತೆ ಎಲ್ಲರೂ ಪ್ರಯತ್ನಿಸಬೇಕೆಂದು ಮನವಿ ಮಾಡಿದರು. ಶಿವಾನುಭವ ಕಾರ್ಯಕ್ರಮಕ್ಕೆ ಪಾಲಕರ ಜೊತೆಗೆ ಮಕ್ಕಳೂ ಭಾಗವಹಿಸುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು. ಕುಮಾರಿ ಕೃತಿ ರಾಘವೆಂದ್ರ ಕನ್ನಡ ಭಾಷೆಯ ಕುರಿತು ಮಾತನಾಡಿದರು. ದೀಕ್ಷಾಕಲೇಶ ಹೊಳಿ ಅಕ್ಕಮಹಾದೇವಿಯ ಪಾತ್ರದ ಮೂಲಕ ಅಕ್ಕನವರ ವಚನಗಳನ್ನು ನುಡಿದದ್ದು ಎಲ್ಲರನ್ನೂ ಆಕರ್ಷಿಸಿದವು. ಶ್ರೀ ಪರ್ವೇಜ್ ಹವಾಲ್ದಾರ ಮಾತನಾಡಿ ತಮ್ಮ ಸೇನಾ ಅವಧಿಯ

ನೆನಪುಗಳನ್ನು ಮೆಲಕು ಹಾಕುತ್ತಾ ಸೈನಿಕರನ್ನು ಸನ್ಮಾಸುತ್ತಿರುವ ಪೂಜ್ಯರನ್ನು ಅಭಿನಂದಿಸಿದರು.

ಪವಾಡ ಪುರುಷ ಶ್ರೀ ಮಡಿವಾಳೇಶ್ವರ ಚರಿತ್ರೆ " ಕೃತಿ ರಚನೆಕಾರರಾದ ಶ್ರೀ ರಾಜಶೇಖರ ಕೋಟಿ ಮಾತನಾಡಿ ಕೃತಿ ರಚನೆಗೆ ಪ್ರೇರೇಪಿಸಿ ಆಶೀರ್ವದಿಸಿದ ಪೂಜ್ಯರಿಗೆ ಮತ್ತು ಗ್ರಂಥ ದಾಸೋಹಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಕಲ್ಕಕದ ಪೂಜ್ಯ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳ ಭಾವ ಚಿತ್ರವನ್ನು ಬಿಡಿಸಿ ಪೂಜ್ಯರಿಗೆ ಅರ್ಪಿಸಿ ಆಶೀರ್ವಾದ ಪಡೆದ ಉದಯೋನ್ಮುಖ ಚಿತ್ರ ಕಲಾವಿದ ಕುಮಾರ ವಿಕಾಸ ಮಹೇಶ್ವರ ಹೊಂಗಲ ಇವರನ್ನು ಸನ್ಮಾನಿಸಲಾಯಿತು. ಬಿದಿರಿನ ಕಲಾ ಬಳಗದ ರಾಜು ಬೋಗೂರ ಮಾತನಾಡಿ ಪ್ರತಿ ಗೌರಿ ಹುಣ್ಣಿಮೆಯ ದಿನದಂದು ಪ್ರಸಾದ ಸೇವೆ ಮಾಡುವದಾಗಿ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಕಿತ್ತೂರಿನ ಅಧ್ಯಕ್ಷರಾದ ಡಾ.ಎಸ್.ಬಿ.ದಳವಾಯಿ ತಮ್ಮ ಸಮಾರೋಪ ನುಡಿಗಳಲ್ಲಿ ರಾಣಿ ಚನ್ನಮ್ಮಳ ಜಯಂತಿ ಕುರಿತು ಇರುವ ಗೊಂದಲಗಳನ್ನು ಸರಕಾರ ಹೋಗಲಾಡಿಸಬೇಕು. ಎಂದು ತಿಳಿಸುತ್ತಾ, ಶರಣ ಮೇದರ ಕೇತಯ್ಯ ಮತ್ತು ಶ್ರೀ ರಾಜಶೇಖರ ಕೋಟಿ ವಿರಚಿತ ಶ್ರೀ ಮಡಿವಾಳೇಶ್ವರ ಚರಿತ್ರೆ " ಕೃತಿ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು. ಪವಾಡ ಪುರುಷ

ಶ್ರೀ ಈಶ್ವರ ಗಡಿಬಿಡಿ ಪ್ರಾರ್ಥಿಸಿದರು. ಶ್ರೀಮತಿ ಪ್ರಭಾವತಿ ಲದ್ದಿಮಠ ಸ್ವಾಗತಿಸಿದರು. ಪ್ರಾಸ್ತಾವಿಕ ನುಡಿಗಳನ್ನು ಶೋಭಾ ಪಾಶ್ಚಾಪೂರ ಆಡಿದರು. ಬಸವರಾಜ ದಳವಾಯಿ ವಂದಿಸಿದರು.

 ಶ್ರೀ ವಿಷೇಕ ಕುರಗುಂದ ನಿರೂಪಿಸಿದರು.
 

Post a Comment

0 Comments