ಚನ್ನಮ್ಮನ ಕಿತ್ತೂರು :- ದಿ.16 ರಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಘಟಕ ಚನ್ನಮ್ಮನ ಕಿತ್ತೂರು ಇದರ ತಾಲೂಕಾ ಅಧ್ಯಕ್ಷ ಹಾಗೂ ಖಜಾಂಚಿ ಮತ್ತು ರಾಜ್ಯ ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಸದರಿ ಚುನಾವಣೆಯು ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರ ಸಂಘ ಕಿತ್ತೂರಿನ ಕಚೇರಿ ಕಟ್ಟಡದಲ್ಲಿ ಚುನಾವಣೆಯು ಶಾಂತಿಯುತವಾಗಿ ನಡೆದಿದ್ದು ಅಂತಿಮ ಪಲಿತಾಂಶ ಇದೀಗ ಹೊರಬಿದ್ದಿದ್ದು ಅಧ್ಯಕ್ಷ ಸ್ಥಾಳನಕ್ಕಾಗಿ ತಿವ್ರ ಪೈಪೋಟಿ ನಡೆದು. ಕಂದಾಯ ಇಲಾಖೆಯ ಶ್ರೀ ಈರಣ್ಣಾ ರಾಯಪ್ಪ ಕರಡಿ ಹಾಗೂ ಶಿಕ್ಷಣ ಇಲಾಖೆಯ ಶ್ರೀ ಆದಿನಾಥ ವಣ್ಣೂರ ಇವರುಗಳಿಗೆ ತಲಾ 09 ಮತಗಳು ಪಡೆದು ಸಮಬಲ ಸಾಧಿಸಿದ್ದರಿಂದ ಅಂತಿಮವಾಗಿ ಚೀಟಿ ಎತ್ತಿದಾಗ ಕಂದಾಯ ಇಲಾಖೆಯ. ಈರಣ್ಣಾ ರಾಯಪ್ಪ ಕರಡಿ ಇವರಿಗೆ ವಿಜಯಲಕ್ಷ್ಮಿ ಒಲೆದು ಅಧ್ಯಕ್ಷರಾದರು ಅದೇ ರೀತಿ ರಾಜ್ಯ ಪರಿಷತ್ ಸ್ಥಾನಕ್ಕೆ ಶಿಕ್ಷಣ ಇಲಾಖೆಯ. ಪಂಡಿತ ಗಂಗಪ್ಪ ಪಡೆಣ್ಣವರ ಇವರು ಅತಿ ಹೆಚ್ಚು 14 ಮತಗಳನ್ನು ಪಡೆದು ಆಯ್ಕೆಯಾದರು ಮತ್ತು ಖಜಾಂಚಿ ಸ್ಥಾನದಲ್ಲಿ ಆರೋಗ್ಯ ಇಲಾಖೆಯ ಶ್ರೀ ಶಿವಪ್ಪ ನಿಂಗಪ್ಪ ಬೆಣಚಮರ್ಡಿ ಇವರು 15 ಮತಗಳಿಂದ ಆಯ್ಕೆಗೊಂಡರು
0 Comments