ಕಿತ್ತೂರು ವಿಜಯ ಸುದ್ದಿ.ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳು.ಗದಗ ಜಿಲ್ಲೆ.
ಚನ್ನಮ್ಮನ ಕಿತ್ತೂರು:- ಸುಮಾರು 80 ಸಾವಿರ ಎಕರೆವುಳ್ಳ ಕಪ್ಪತಗುಡ್ಡ ಅರಣ್ಯ ಪ್ರದೇಶದಲ್ಲಿ ಯಾವದೇ ಕಾರಣಕ್ಕೂ ಗಣಿಗಾರಿಕೆಗೆ ಅವಕಾಶ ನೀಡಬಾರದೆಂದು ಡೋಣಿ- ಗದಗ ನಂದವೇರಿ ಸಂಸ್ಥಾನ ಮಠದ ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳು ಸರಕಾರವನ್ನು ಆಗ್ರಹಿಸಿದರು. ಇತ್ತೀಚೆಗೆ ಕಿತ್ತೂರ ಸಮೀಪದ ನಿಚ್ಚಣಕಿ ಗ್ರಾಮದಲ್ಲಿ ನಡೆದ ಕನ್ನಡದ ನೆಲ,ಜಲ,ವನ್ಯಜೀವಿಗಳು ಮತ್ತು ಕಪ್ಪತಗುಡ್ಡದ ಅರಣ್ಯ ಪ್ರದೇಶದ ರಕ್ಷಣೆ ಕುರಿತಾದ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡುತ್ತ ಅಪರೂಪದ ಔಷಧ ಸಸ್ಯ ಪ್ರಾಣಿ,ಪಕ್ಷಿಗಳ ಮತ್ತು ನಿಸರ್ಗದ ಆಗರವಾಗಿರುವ ಗದಗ ಜಿಲ್ಲೆಯ ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದೆಂದು ಮನವಿ ಮಾಡುತ್ತಾ ಈ ಕುರಿತು ಬೆಳಗಾವಿಯ ಪ್ರಾದೇಶಿಕ ವಿಭಾಗದ ಆಯುಕ್ತರಿಗೆ ಕನ್ನಡ ನಾಡಿನ ಜನತೆಯ ಮೂಲಕ ಮನವಿ ಪತ್ರ ನೀಡಲಾಗುವದೆಂದು ತಿಳಿಸಿದರು. ಈ ಗಣಿಗಾರಿಕೆಯ ವಿಷಯ ಕೇವಲ ಕಪ್ಪತಗುಡ್ಡದ ಮೇಲೆ ಮಾತ್ರ ಪರಿಣಾಮ ಬೀರದೆ ರಾಜ್ಯದ ಏಳು ಕೋಟೆಯ ಜನರ ಮೇಲೆಯೂ ಬೀರಲಿದೆ ಎಂದು ತಿಳಿಸಿದ ಪೂಜ್ಯರು ಒಂದು ವೇಳೆ ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಪರವಾಣಿಗೆ ನೀಡಿದ್ದೇ ಆದಲ್ಲಿ ಲಕ್ಷಾಂತರ ಜನರೊಂದಿಗೆ ಹೋರಾಟ ಮಾಡಲಾಗುವದೆಂದು ಸರಕಾರವನ್ನು ಆಗ್ರಹಿಸುತ್ತಾ ಗಣಿಗಾರಿಕೆ ಆಟ ಎಂಬ ಪ್ರಹಸನವನ್ನು ಕೂಡಲೇ ನಿಲ್ಲಿಸಿ ಈ ಪ್ರದೇಶವನ್ನು ಸಂರಕ್ಷಿತ ಜೀವ ವೈವಿಧ್ಯತಾ ತಾಣವೆಂದು ಘೋಷಿಸಿ ಸುತ್ತಲೂ ಸಮಾನಾಂತರವಾಗಿ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಯದಂತೆ ತಡೆಯುವತ್ತ ಸರಕಾರ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಸ್.ಬಿ.ದಳವಾಯಿ ತಮ್ಮ ಸಮಾರೋಪ ನುಡಿಗಳಲ್ಲಿ ಕನ್ನಡದ ನೆಲ,ಜಲ,ಅರಣ್ಯ ಗಳ ರಕ್ಷಣೆಗಾಗಿ ಪೂಜ್ಯರು ಕೈಗೊಳ್ಳುವ ಹೋರಾಟಕ್ಕೆ ಸಮಸ್ತ ಜನತೆ ಸಹಕಾರ ನೀಡುವ ಭರವಸೆ ನೀಡಿದರು. ಕಿತ್ತೂರು ಕರ್ನಾಟಕ ರೈತ ಜಾಗೃತಿ ಸಂಘಟನೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅಪ್ಪೇಶಿ ದಳವಾಯಿ ಸ್ವಾಗತಿಸಿ ವಂದಿಸಿದರು. ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಗ್ರಾಮದ ಜನತೆಯ ಪರವಾಗಿ ಪೂಜ್ಯರನ್ನು ಗೌರವಿಸಲಾಯಿತು.ಮಡಿವಾಳಪ್ಪ ವರಗಣ್ಣವರ,ಗಿಡ್ಡಪ್ಪ ಬುಡರಕಟ್ಟಿ,ಮಲ್ಲಿಕಾರ್ಜುನ ಕಾಳಿಂಗೌಡ್ರ, ಶಿವಾನಂದ ಶಾಸ್ತ್ರಿಗಳು ತೊರಗಲ್ಮಠ ಮುಂತಾದವರು ಉಪಸ್ಥಿತರಿದ್ದರು.
0 Comments