ಕಿತ್ತೂರು ವಿಜಯ ಸುದ್ದಿ.ಚನ್ನಮ್ಮನ ಕಿತ್ತೂರು ತಾಲೂಕಿನ ಪರಸನಟ್ಟಿ ಕೆರೆಗೆ ಹಾರಿ, ಸಾವನ್ನಪ್ಪಿದ ಯೋಧ

ಕಿತ್ತೂರು ವಿಜಯ ಸುದ್ದಿ. ಚನ್ನಮ್ಮನ ಕಿತ್ತೂರು ತಾಲೂಕಿನ ಪರಸನಟ್ಟಿ ಕೆರೆಗೆ ಹಾರಿ, ಸಾವನ್ನಪ್ಪಿದ ಯೋಧ ನರೇಶ ಯಲ್ಲಪ ಅಗಸರ ಎಂಬವರ ದುರ್ಘಟನೆಯ ಸುದ್ದಿ ಸ್ಥಳೀಯರ ಮತ್ತು ಕುಟುಂಬದವರಲ್ಲಿ ಆಘಾತ ತಂದಿದೆ. ಈ ಹೃದಯವಿದ್ರಾವಕ ಘಟನೆಯ ಬಳಿಕ, ಸನ್ಮಾನ್ಯ ಶಾಸಕರಾದ ಬಾಬಾಸಾಹೇಬ ಪಾಟೀಲರು ತಕ್ಷಣವೇ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಶಾಸಕರು ಮೃತನ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಂತಾಪ ಸೂಚಿಸಿದರು. ಅವರು ಸರ್ಕಾರದಿಂದ ಅಗತ್ಯ ಸಹಾಯ ಮತ್ತು ಪರಿಹಾರ ಒದಗಿಸಲು ಬದ್ಧತೆಯನ್ನು ವ್ಯಕ್ತಪಡಿಸಿದರು. ಈ ವೇಳೆ ಗ್ರಾಮಸ್ಥರು ಮತ್ತು ಸ್ಥಳೀಯರು ಘಟನೆಯ ಕುರಿತು ಶಾಸಕರೊಂದಿಗೆ ಚರ್ಚೆ ನಡೆಸಿದರು. ಸೈನಿಕನ ದುರ್ಘಟನೆಯನ್ನು ಸ್ಮರಿಸುತ್ತಾ, ಅವರು ಕುಟುಂಬದವರಿಗೆ ದೈರ್ಯ ನೀಡಲು ಶಾಸಕರು ಭರವಸೆ ನೀಡಿದರು ಮತ್ತು ಸಂಬಂಧಿತ ಇಲಾಖೆಗಳೊಂದಿಗೆ ತ್ವರಿತ ಕ್ರಮ ಕೈಗೊಳ್ಳಲು ಆದೇಶಿಸಿದರು. ಘಟನಾ ಸ್ಥಳಕ್ಕೆ ಕಿತ್ತೂರು ಪಿಎಸ್ಐ. ಪ್ರವೀಣ್ ಗಂಗೋಳ್  ಆಗಮಿಸಿ ಹೆಚ್ಚಿನ ವಿಚಾರಣೆ. ನಡೆಸಿದಾಗ ಸತ್ಯ ಘಟನೆ. ಈ ರೀತಿ ಇರುತ್ತದೆ ಮೃತ ಸುರೇಶ್ ಎಲ್ಲಪ್ಪ ಅಗಸರ. ವಯಸ್ಸು 28. ಸಾ / ದೇಗಾವ. ಕಿತ್ತೂರು ಇವನು ಸೈನಿಕ ನಿದ್ದು ತನ್ನ ಕೌಟುಂಬಿಕ ಸಮಸ್ಯೆಯಿಂದ ಮಾನಸಿಕ ಮಾಡಿಕೊಂಡು ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡು. ರಜೆ ಮೇಲೆ ಊರಿಗೆ ಬಂದಾಗ ಅದೇ ಮಾನಸಿಕತೆಯಲ್ಲಿ ಜೀವನದಲ್ಲಿ ಜಿಗುಪ್ಸೆ ಹೊಂದಿ. ಸರಾಯಿ ಕುಡಿದ ನಿಶಯಲ್ಲಿ 23.11.2024 ರಂದು. ಸಾಯಂಕಾಲ 4:30 ಗಂಟೆಗೆ ಪರಸನಟ್ಟ ಗ್ರಾಮದ ಕೆರೆಯ. ನೀರಿನಲ್ಲಿ ತನ್ನಿಂದ ತಾನೇ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು. ಎಂದು ತಿಳಿದು ಬಂದಿದೆ.

ಹೆಚ್ಚಿನ ವಿಚಾರಣೆ. ಕಿತ್ತೂರು ಪಿಎಸ್ಐ ಪ್ರವೀಣ್ ಗಂಗೋಳ ತನಿಖೆ ನಡೆಸಿದ್ದಾರೆ 




 

Post a Comment

0 Comments