ಕಿತ್ತೂರು ವಿಜಯ ಸುದ್ದಿ. ಬೆಳಗಾವಿ ದಿನಾಂಕ 24-11-2024 ಇಂದು ಕರ್ನಾಟಕ ರಾಜ್ಯ ಸರಕಾರಿ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಎಂ.ಸುಧಾಕರ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಗಂಗಾಧರ ಮತ್ತು ರಾಜ್ಯ ಉಪಾಧ್ಯಕ್ಷರಾದ ಶ್ರೀ ಕಲ್ಲಯ್ಯ ಗಣಾಚಾರಿ, ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಶ್ರೀ ಕಲ್ಮೇಶ ಹಾಶೆಟ್ಟಿ ಮತ್ತು ವಿವಿಧ ಜಿಲ್ಲೆಗಳಿಂದ ಆಗಮಿಸಿದ ಹೊರಗುತ್ತಿಗೆ ನೌಕರರ ಸಮ್ಮುಖದಲ್ಲಿ ಹೊರಗುತ್ತಿಗೆ ನೌಕರರ ಕುರಿತು ಸಭೆ ಜರುಗಿತು ಅದರಂತೆ ಸದರಿ ಸಭೆಯಲ್ಲಿ ವಿವಿಧ ಜಿಲ್ಲೆಗಳ ಅಧ್ಯಕ್ಷರ ಆಯ್ಕೆ ಮಾಡಲಾಯಿತು ಬೆಳಗಾವಿ ಜಿಲ್ಲೆ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷರನ್ನಾಗಿ ಕಿತ್ತೂರ ತಾಲೂಕಿನ ಶ್ರೀ ಬಸವರಾಜ ಸದೆಪ್ಪ ಹಂಚಿನಾಳ,ಸಾ: ಹುಣಶೀಕಟ್ಟಿ ಇವರು ಆಯ್ಕೆಗೊಂಡರು.
0 Comments