ಕಿತ್ತೂರು ವಿಜಯ ಸುದ್ದಿ. ಚನ್ನಮ್ಮನ ಕಿತ್ತೂರು: ವಾಟರ್‌ಮೀಟರ್ ಹಾಗೂ ವಾಲ್ಸ್ ಗಳನ್ನು ಕಳ್ಳತನ ಮಾಡಿದವರನ್ನು ಬಂಧಿಸಿದ ಕಿತ್ತೂರು .ಪೊಲೀಸ್ ತಂಡ
ಚನ್ನಮ್ಮನ ಕಿತ್ತೂರು: ಕೇಂದ್ರ ಸರಕಾರದ ಅಮೃತ 2.0 ಯೋಜನೆಯಲ್ಲಿ ವಾಟರ್ ಸಪ್ಪೆ ಕೆಲಸಕ್ಕಾಗಿ ದಾಸ್ತಾನಿಟ್ಟಿದ್ದ ವಾಟರ್ ಮೀಟರ್ ಹಾಗೂ ವಾಲ್ಸ್‌ಗಳನ್ನು ಕಳ್ಳತನ ಮಾಡಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಧಾರವಾಡ ತಾಲೂಕಿನ ಶಿಂಗನಹಳ್ಳಿಯ ಮಹಮ್ಮದ ರಫೀಕ ಮೆಹಬೂಬಸಾಬ ನದಾಫ ಹಾಗೂ ಅವನ ಇನ್ನಿಬ್ಬರು ಸಹಚರರನ್ನು ಬಂಧಿಸಿ, ಸುಮಾರು 9,28,000 ರೂಪಾಯಿ ಮೌಲ್ಯದ 47 ಬಾಕ್ಸ್ ವಾಟರ್‌ಮೀಟರ್ ಹಾಗೂ ವಾಲ್ಟಗಳನ್ನು ವಶಪಡಿಸಿಕೊ ಳ್ಳಲಾಗಿದೆ. ತಾಲೂಕಿನ ಎಂ.ಕೆ. ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಕೇಂದ್ರ ಸರಕಾರದ ಅಮೃತ 2.0 ಯೋಜನೆಯಲ್ಲಿ ವಾಟರ್‌ಸಪ್ಪೆ ಕೆಲಸದ ಸಲುವಾಗಿ ಎಂ.ಕೆ.ಹುಬ್ಬಳ್ಳಿ ಪಟ್ಟಣದ ಪರಶುರಾಮ ಬಸವಣ್ಣೆಪ್ಪ ಗಾಣಿಗೇರ ಅವರ ಕೋಳಿ ಫಾರ್ಮ್ ಶೆಡ್ ನಲ್ಲಿ ಇರಿಸಿದ್ದ ಕೊನಾರ್ಕ್ ಕಂಪನಿಯ 47 ಬಾಕ್ಸ್.ವಾಟರ್‌ಮೀಟರ್‌ಗಳು ಹಾಗೂ ವಾಲ್ಸ್‌ಗಳನ್ನು ನ.19ರಂದು ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಿಎಸ್‌ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ ಶಿವಾನಂದ ಗುಡಗನಟ್ಟಿ సిఐ ಪಿಎಸ್ಐ , ಪ್ರವೀಣ ಗಂಗೋಳ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
0 Comments