ಹಿರಿಯ ಪತ್ರಕರ್ತ ಪ್ರದೀಪ್ ಮೇಲಿನಮನಿ. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸನ್ಮಾನ







ಪೂಜ್ಯರ ಆಶೀರ್ವಾದ, ಹಿರಿಯ ಸಾಹಿತಿಗಳ, ಹೋರಾಟಗಾರರ ಪ್ರೇರಣೆ ಮತ್ತು ಸ್ನೇಹಿತರ ಒತ್ತಾಸೆಗಳಿಂದ ಪತ್ರಿಕಾ ರಂಗಕ್ಕೆ ಪ್ರವೇಶ ಮಾಡಿದ್ದೇ ರಾಜ್ಯೋತ್ಸವ ಪ್ರಶಸ್ತಿ ಪಡೆಯಲು ಪ್ರೇರಕ ಶಕ್ತಿ ಆಗಿದೆ.

ಶ್ರೀ ಪ್ರದೀಪ ಮೇಲಿನಮನಿ

ಚನ್ನಮ್ಮನ ಕಿತ್ತೂರು:- ಕಿತ್ತೂರಿನ ಕಲ್ಮಠದ ಆವರಣದಲ್ಲಿ ಮಂಗಳವಾರ ದಿನಾಂಕ ೦೫ ರಂದು ಸಾಯಂಕಾಲ ಕಲ್ಮಠದ ಪೂಜ್ಯ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಬೆಳಗಾವಿ ಜಿಲ್ಲಾ ಆಡಳಿತವು ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಚನ್ನಮ್ಮನ ಕಿತ್ತೂರಿನ ಹಿರಿಯ ಪ್ರಜಾವಾಣಿ ಪತ್ರಿಕೆಯ ವರದಿಗಾರರಾದ ಶ್ರೀ ಪ್ರದೀಪ ಮೇಲಿನಮನಿ ಇವರಿಗೆ ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಸನ್ಮಾನಿಸಿ ಶುಭ ಕೋರಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ ಪ್ರದೀಪ ಮೇಲಿನಮನಿ ಇವರು ತಾವುಗಳು ಪತ್ರಿಕಾ ರಂಗಕ್ಕೆ ಕಾಲಿಡಲು ಕಾರಣೀಭೂತವಾದ ನಾಡೋಜ,ಉಷಾಕಿರಣ, ಕನ್ನಡಪ್ರಭ ಪತ್ರಿಕೆಗಳಲ್ಲಿ ವರದಿ ಮಾಡಿದ ಅನುಭವಗಳನ್ನು ಸ್ಮರಿಸುತ್ತ ಪೂಜ್ಯರ ಆಶೀರ್ವಾದ, ಶ್ರೀ ರಾಘವೇಂದ್ರ ಜೋಷಿ,ತಮ್ಮ ತಂದೆಯವರು ಮತ್ತು ಹಿರಿಯರ ಮಾರ್ಗದರ್ಶನಗಳೇ ನನ್ನ ಈ ಅಲ್ಪ ಸಾಧನೆಗೆ ಕಾರಣ ಎಂದು ತಿಳಿಸುತ್ತಾ ಸಂತಸ ವ್ಯಕ್ತಪಡಿಸಿದರು.

ಅಧ್ಯಕ್ಷೀಯ ನುಡಿಗಳನ್ನು ಆಡಿದ ಕಿತ್ತೂರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಸ್.ಬಿ.ದಳವಾಯಿ ಶ್ರೀ ಪ್ರದೀಪ ಮೇಲಿನಮನಿ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವದು ಇಡೀ ಕಿತ್ತೂರು ನಾಡಿಗೆ ಹೆಮ್ಮೆಯನ್ನು ತಂದಿದ್ದು ಬರಲಿರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಶಸ್ತಿಗಳು ಇವರಿಗೆ ಲಭಿಸಲಿ ಎಂದು ಹಾರೈಸಿದರು.

ಕಲ್ಮಠದ ಪೂಜ್ಯ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಮಾತನಾಡುತ್ತ ಸುಮಾರು ೩೦ ವರ್ಷಗಳ ಹಿಂದಿನಂದಲೇ ಬೇರೆ ಬೇರೆ ಪತ್ರಿಕೆಗಳಲ್ಲಿ ವರದಿಗಳನ್ನು ಪ್ರಕಟಿಸಿದ ಶ್ರೀ ಪ್ರದೀಪ ಮೇಲಿನಮನಿ ಇವರು ತಮ್ಮ ಲೇಖನಿಯ ಮೂಲಕ ನೈಜ ವಿಷಯವನ್ನು ಜನತೆಗೆ ಮುಟ್ಟಿಸುವಲ್ಲಿ ಮಾಡಿದ ಪ್ರಮಾಣಿಕ ಪ್ರಯತ್ನ ಮತ್ತು ಪರಿಶ್ರಮಗಳೇ ಇಂದು ರಾಜ್ಯೋತ್ಸವ ಪ್ರಶಸ್ತಿ ಪಡೆಯಲು ಕಾರಣವಾಗಿದ್ದು ಇದೇ ರೀತಿ ಅವರ ಬರವಣಿಗೆ ಕಾರ್ಯ ಮುಂದುವರೆಯಲಿ ಎಂದು ಆಶೀರ್ವದಿಸಿದರು. ಶ್ರೀ ಈಶ್ವರ ಗಡಿಬಿಡಿ ಪ್ರಾರ್ಥಿಸಿದರು. ಶ್ರೀ ಮಂಜುನಾಥ ಕಳಸಣ್ಣವರ ಸ್ವಾಗತಿಸಿದರು.ಶ್ರೀಮತಿ ಭುವನಾ ಹಿರೇಮಠ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಶ್ರೀ ನಾಗಯ್ಯ ಹುಲೆಪ್ಪನವರಮಠ ವಂದಿಸಿದರು. ಶ್ರೀ ಜಿ.ಬಿ.ಪಾಟೀಲ ನಿರೂಪಿಸಿದರು. ಸಮಾರಂಭದಲ್ಲಿ ಹಿರಿಯರಾದ ಶ್ರೀ ಅರುಣಕುಮಾರ ಬಿಕ್ಕಣ್ಣವರ, ಶ್ರೀ ಬಸಣ್ಣ ನಂದಗಡ, ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರೊ ಸಂಜೀವ ಲದ್ದೀಮಠ ಕಿತ್ತೂರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಕನ್ನಡ ಅಭಿಮಾನಿಗಳು ಮತ್ತು ಪತ್ರಕರ್ತರು ಉಪಸ್ಥಿತರಿದ್ದರು 

Post a Comment

0 Comments