ಕಿತ್ತೂರು ವಿಜಯ ಸುದ್ದಿ. ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಪ್ರಗತಿಗೆ ಒತ್ತು: ಸ್ಪೀಕರ್ ಯು.ಟಿ. ಖಾದರ್


 ಕಿತ್ತೂರು ವಿಜಯ ಸುದ್ದಿ: ರಾಜ್ಯ ವಿಧಾನ ಮಂಡಲ ಚಳಿಗಾಲದ.ಅಧಿವೇಶನ ಡಿಸೆಂಬರ್ 9 ರಿಂದ 19 ರವರೆಗೆ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದ‌ರ್ ತಿಳಿಸಿದ್ದಾರೆ.ಅವರು ಗುರುವಾರ ಮಂಗಳೂರಿನ ಸರ್ಕ್ಯೂಟ್ ಹೌಸ್.ನಲ್ಲಿ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಇರುವುದರಿಂದ ಅಧಿವೇಶನವನ್ನು ಡಿಸೆಂಬರ್ 19 ಕೇ ಮುಕ್ತಾಯಗೊಳಿಸಲು ಸರ್ಕಾರವು ನಿರ್ಧರಿಸಿದೆ. ಅಧಿವೇಶನ.ಮುಂದುವರಿಸುವ ಕುರಿತು ಡಿಸೆಂಬರ್ 9ರಂದು ಸ್ಪೀಕರ್.ಅಧ್ಯಕ್ಷತೆಯಲ್ಲಿಮುಖ್ಯಮಂತ್ರಿಗಳುಉಪಮುಖ್ಯಮಂತ್ರಿಗಳು ಕಾನೂನು ಸಚಿವರು ಎಲ್ಲಾ ರಾಜಕೀಯ ಮುಖಂಡರು, ವಿರೋಧ ಪಕ್ಷದ ಮುಖಂಡರು ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.ಅಧಿವೇಶನದಲ್ಲಿ ರಾಜ್ಯದ ಅಭಿವೃದ್ಧಿ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಚರ್ಚೆಯಾಗಬೇಕಿದೆ. ಇದರಿಂದ ಆ ಭಾಗದ ಜನರ ಭಾವನೆಗಳನ್ನುಗೌರವಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷ ಸಹಕರಿಸಬೇಕು ಎಂದು ಸ್ಪೀಕರ್ ಮನವಿ ಮಾಡಿದರು.

Post a Comment

0 Comments