ಕಿತ್ತೂರು ವಿಜಯ ಸುದ್ದಿ ಬೆಳಗಾವಿ: ಬೆಳಗಾವಿ ನಗರದ ವಡ್ಡರವಾಡಿಯಲ್ಲಿ ಕೆಲ ದಿನಗಳ ಹಿಂದೆ ಮಹಿಳೆ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಆರೋಪಿ ಮಹಿಳೆಯ ಪುತ್ರ ಹಲ್ಲೆಗೊಳಗಾದ ಮಹಿಳೆಯ ವಿರುದ್ಧ ದೂರು ದಾಖಲಿಸಿದ್ದಾನೆ.
ಹಲ್ಲೆಗೊಳಗಾದ ಮಹಿಳೆ ವಿರುದ್ಧ 11 ವರ್ಷ ಬಾಲಕನೊಬ್ಬ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾನೆ. ಹಲ್ಲೆ ಆರೋಪ ಹೊತ್ತ ಮಹಿಳೆಯ ಪುತ್ರ ದೂರು ನೀಡಿದ್ದಾನೆ. 'ಅಪರಿಚಿತರು ಮನೆಗೆ ಬಂದಾಗ ನನ್ನ ಕೈಯಿಂದಲೇ ಮದ್ಯ, ಸಿಗರೇಟ್, ಕಾಂಡೋಮ್ ಸೇರಿದಂತೆ ಇತರ ವಸ್ತುಗಳನ್ನು ತರಿಸುತ್ತಿದ್ದರು. ಈ ವಿಚಾರವನ್ನು ನಾನು ನನ್ನ ತಾಯಿಗೆ ಹೇಳಿದೆ. ಇದರಿಂದ ಕೋಪಗೊಂಡ ನನ್ನ ತಾಯಿ ಮಹಿಳೆಯನ್ನು ವಿಚಾರಿಸಲು ಹೋಗಿದ್ದರು. ಅಷ್ಟಕ್ಕೆ ನನ್ನ ತಾಯಿಯ ಮೇಲೆ ಕೇಸ್ ಹಾಕಿ ಅವರನ್ನು ಜೈಲಿಗೆ ಕಳುಹಿಸಲಾಗಿದೆ. ನನಗೆ ನ್ಯಾಯ ಕೊಡಿಸಿ' ಎಂದು ದೂರಿನಲಿ ಬರೆದಿದ್ದಾನೆ.
0 Comments