ಕಿತ್ತೂರು ವಿಜಯ ಸುದ್ದಿ.ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು : ಮಹಾಂತೇಶ ಕಂಬಾರ
ಚನ್ನಮ್ಮನ ಕಿತ್ತೂರ: ವಿದ್ಯಾರ್ಥಿಗಳು ತಮಗೆ ದೊರಯುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ತಂತ್ರಜ್ಞಾನ ಯುಗದಲ್ಲಿ ಅವಕಾಶಗಳು ವಿರಳವಾಗಿದ್ದು ದೊರಕಿದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಮಹಾಂತೇಶ ಕಂಬಾರ ವಿದ್ಯಾರ್ಥಿಗಳಿಗೆ ಕರೆನೀಡಿದರು.
ಪಟ್ಟಣದ ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟ, ಎನ್.ಎಸ್.ಎಸ್., ಎನ್.ಸಿ.ಸಿ, ಕ್ರೀಡಾ ಚಟುವಟಿಕೆ ಹಾಗೂ ಇತರ ವಿಭಾಗಗಳ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದ ಮಹಾಂತೇಶ ಕಂಬಾರ, ಇಂದಿನ ತಂತ್ರಜ್ಞಾನದ ಯುಗದಲ್ಲಿ ಜಗತ್ತೇ ಲಭ್ಯವಿರುವ ಸಂಪನ್ಮೂಲಗಳನ್ನು, ಅವಕಾಶಗಳನು ಗರಿಷ್ಠಮಟ್ಟದಲ್ಲಿ ಬಳಸಿಕೊಂಡು, ಪರೀಕ್ಷೆಗಳಲ್ಲಿ ಉತ್ತಮ ಮಟ್ಟವನ್ನು ತೋರಬೇಕಾದರೆ ಅವರ ಮನಸ್ಸು ನೆಮ್ಮದಿಯಿಂದಿರಬೇಕು. ಯಶಸ್ಸು ಮತ್ತು ವೈಫಲ್ಯಗಳು ಪರಸ್ಪರ ವಿಲೋಮ ಅನುಪಾತದಲ್ಲಿರುತ್ತವೆ. ಒಬ್ಬ ವ್ಯಕ್ತಿಯು ಯಶಸ್ಸನ್ನು ಸಾಧಿಸುವುದು ಸುಲಭವಲ್ಲ, ಅದು ಸುಲಭವಾಗಿದ್ದರೆ ಎಲ್ಲರೂ ಅದನ್ನು ಮಾಡುತ್ತಿದ್ದರು, ಆದರೆ ಅದು ಅಸಾಧ್ಯವಲ್ಲ. ಯಶಸ್ಸಿನ ಹಾದಿಯು ವೈಫಲ್ಯಗಳಿಂದ ತುಂಬಿರುತ್ತದೆ ಮತ್ತು ಆ ವೈಫಲ್ಯಗಳ ಮೂಲಕ ಒಬ್ಬರು ಯಶಸ್ವಿಯಾಗುತ್ತಾರೆ ಎಂದು ತಿಳಿಯುವುದು ಮುಖ್ಯ. ವೈಫಲ್ಯವು ಯಶಸ್ಸಿನ ಸೋಪಾನವಾಗಿ ಕಾರ್ಯನಿರ್ವಹಿಸುತ್ತದೆ. ಒಬ್ಬನು ತನ್ನ ಗುರಿಗಳ ಕಡೆಗೆ ಎಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಾನೋ ಅಷ್ಟು ಸುಲಭದಲ್ಲಿ ಯಶಸ್ಸನ್ನು ಸಾಧಿಸಬಹುದು. ಕಠಿಣ ಕೆಲಸ ಎಂದರೆ ಶ್ರಮದಾಯಕ ಕೆಲಸ ಅಥವಾ ಬೆವರು ಸುರಿಸುವಂತಹ ಕೆಲಸ ಮಾಡುವುದು ಎಂದಲ್ಲ. ಕಠಿಣ ಪರಿಶ್ರಮ ಎಂದರೆ ನಿಮ್ಮ ಗುರಿಗಳ ಮೇಲೆ ಕೆಲಸ ಮಾಡುವುದು ಮಾತ್ರವಲ್ಲ, ಜೀವನದ ಬಗ್ಗೆ ಆಶಾವಾದಿ ಮತ್ತು ಪ್ರಯಾಣವು ಕಷ್ಟಕರವಾಗಿದ್ದರೂ ಸಹ ಅದನ್ನು ಸಾಧಿಸಬಹುದು ಎಂದು ನಿಮ್ಮಲ್ಲಿ ನಂಬಿಕೆ ಇರಬೇಕು. ಇದನ್ನು ನಿಮ್ಮ ಜೀವನದಿಂದ ನಕಾರಾತ್ಮಕ ಆಲೋಚನೆಗಳು ಮತ್ತು ನಕಾರಾತ್ಮಕ ಜನರನ್ನು ತೊಡೆದುಹಾಕಬಹುದು. ಧನಾತ್ಮಕವಾಗಿ ಉಳಿಯುವುದು ಯಶಸ್ಸಿನ ಕೀಲಿಯಾಗಿದೆ. ವಿದ್ಯಾರ್ಥಿಗಳು ಹೊಸ ವಿಷಯಗಳನ್ನು ಕಲಿಯಲು ಪ್ರಯತ್ನಿಸಬೇಕು ಎಂದರು.
ಕ್ರೀಡಾ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಪ್ರದೀಪ ಮೇಲಿನಮನಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ, ಜೀವನವನ್ನು ಯಶಸ್ವಿಯಾಗಿ ನಿಭಾಯಿಸಲು ಸಂವಹನ ಕಲೆಯನ್ನು ಮತ್ತು ಸಮಯ ನಿರ್ವಹಣೆ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಬೇಕು. ಪ್ರತಿದಿನ ಹೆಚ್ಚು ಶ್ರಮವಹಿಸಿ ಸಮಯವನ್ನು ಸರಿಯಾಗಿ ನಿರ್ವಹಿಸುವವರಿಂದ ಯಶಸ್ಸು ಸಾಧಿಸಲಾಗುತ್ತದೆ. ಸಮಯ ನಿರ್ವಹಣೆಯ ಮಹತ್ವವನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು. ಸಮಯವನ್ನು ಸರಿಯಾಗಿ ನಿರ್ವಹಿಸುವುದು ಯಶಸ್ಸಿನ ಕೀಲಿಯಾಗಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಕನಸುಗಳ ಬಗ್ಗೆ ಸ್ಪಷ್ಟವಾದ ದೃಷ್ಟಿಕೋನವನ್ನು ಹೊಂದಿರಬೇಕು. ಒಬ್ಬ ವ್ಯಕ್ತಿಯು ಜೀವನದಲ್ಲಿ ತಾನು ಏನಾಗಬೇಕೆಂದು ಬಯಸುತ್ತಾನೆ ಎಂಬ ದೃಷ್ಟಿಯನ್ನು ಹೊಂದಿದ್ದರೆ, ಅವನು ಅಲೆದಾಡುವುದಿಲ್ಲ ಮತ್ತು ತಪ್ಪಾದ ಸ್ಥಳದಲ್ಲಿ ಕೊನೆಗೊಳ್ಳುವುದಿಲ್ಲ. ದೃಷ್ಟಿ ಅಥವಾ ಕನಸನ್ನು ಹೊಂದಿದ ನಂತರ ಆ ಕನಸನ್ನು ನನಸಾಗಿಸಲು ತನ್ನ ಸಮಯವನ್ನು ಹೂಡಿಕೆ ಮಾಡಬೇಕು. ನಿರಂತರ ಪರಿಶ್ರಮದಿಂದ ಇದನ್ನು ಮಾಡಬಹುದು. ಪ್ರತಿಭಾವಂತರಲ್ಲದಿದ್ದರೂ ಕಠಿಣ ಪರಿಶ್ರಮ ಮತ್ತು ಸಂಕಲ್ಪದಿAದ ಯಶಸ್ಸು ಸಾಧಿಸಬಹುದು. ಎಂದರು. ಅಧ್ಯಕ್ಷತೆವಹಿಸಿ ಮಾತನಾಡಿ ಕಿತ್ತೂರ ನಾಡ ವಿದ್ಯಾವರ್ಧಕ ಸಂಘದ ಚೇರಮನ್ನರಾದ ಜಗದೀಶ ವಸ್ತçದ ಮಾತನಾಡಿ ನಮ್ಮ ಸಂಸ್ಥೆಯು ವಿದ್ಯಾರ್ಥಿಗಳಿಗೆ ಅವಶ್ಯಕವಿರುವ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿದ್ದು ವಿದ್ಯಾರ್ಥಿಗಳು ಅವುಗಳನ್ನು ಸರಿಯಾಗಿ ಬಳಸಿಕೊಂಡು ಸಮಾಜದಲ್ಲಿ ಒಬ್ಬ ಉತ್ತಮ ಪ್ರಜೆಯಾಗಿ ನಮ್ಮ ನಾಡಿನ ಕೀರ್ತಿಯನ್ನು ಹೆಚ್ಚಿಸಿದಾಗ ನಮ್ಮ ಸಂಸ್ಥೆಗೆ ಹಿರಿಮೆ ಎಂದರು.
ಪ್ರಾಚಾರ್ಯ ನಾಗರಾಜ ಎಚ್.ಕೆ ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕಯಲ್ಲಿ ಭಾಗವಹಿಸಿ ತಮ್ಮಲ್ಲಿ ಅಡಗಿರುವ ಸೂಕ್ತಪ್ರತಿಭೆಯಿಂದ ತಮ್ಮ ವ್ಯಕ್ತಿತ್ವ ವಿಕಸನವನ್ನು ಮಾಡಿಕೊಳ್ಳಲು ಮಹಾವಿದ್ಯಾಲಯದ ವಿದ್ಯಾರ್ಥಿ ಘಟಕಗಳು ಸಹಕಾರಿಯಾಗಲಿವೆ ಎಂದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮಹಿಳಾ ವಾಲಿಬಾಲ ತಂಡಕ್ಕೆ ಆಯ್ಕೆಯಾದ ಮಹಾವಿದ್ಯಾಲಯದ ಕ್ರೀಡಾಪಟು ಕುಮಾರಿ ವೈಷ್ಣವಿ ದೇಗಾವಿ ಹಾಗೂ ಜೂಡೊದಲ್ಲಿ ವಿಶ್ವವಿದ್ಯಾಲಯಕ್ಕೆ ಮೂರನೇ ಸ್ಥಾನಗಳಿಸಿದ ಕುಮಾರಿ ರಾಣಿ ಕೋಟೆ ಇವರನ್ನು ಸನ್ಮಾನಿಸಲಾಯಿತು. ಕಿನಾವಿವ ಸಂಘದ ಉಪಾಧ್ಯಕ್ಷರಾದ ಅರುಣಕುಮಾರ ಬಿಕ್ಕಣ್ಣವರ, ಗೌರವ ಕಾರ್ಯದರ್ಶಿ ಜೆ.ಎಸ್.ಬಿಕ್ಕಣ್ಣವರ, ನಿರ್ದೇಶಕರಾದ ಎಮ್.ಬಿ.ದಳವಾಯಿ, ಜೆ.ಬಿ.ಘಟ್ನಟ್ಟಿ, ವ್ಹಿ.ಆರ್.ಪಾಟೀಲ ಐ.ಕ್ಯೂ.ಎ.ಸಿ ಚೇರಮನ್ನರಾದ ಆರ್.ಬಿ.ಹವಿನಾಳೆ, ವಿದ್ಯಾರ್ಥಿನಿ ಪ್ರತಿನಿಧಿ ವಿದ್ಯಾಶ್ರೀ ಶಟೋಜಿ, ಕ್ರೀಡಾ ನಿರ್ದೇಶಕರಾದ ಎಮ್.ಜಿ.ಹಿರೇಮಠ ವೇದಿಕೆಯಲ್ಲಿದ್ದರು.
ನಾಡಗೀತೆ ಮತ್ತು ಪ್ರಾರ್ಥನಾಗೀತೆಯನ್ನು ಸಂಗೀತ ವಿಭಾಗದ ವಿದ್ಯಾರ್ಥಿನಿಯರು ಹಾಡಿದರು, ಕುಮಾರಿ ಕೀರ್ತಿ ಪಟ್ಟಣಶೆಟ್ಟಿ ಸ್ವಾಗತಿಸಿದರು, ವಿದ್ಯಾರ್ಥಿ ಒಕ್ಕೂಟದ ಚೇರಮನ್ನರಾದ ಡಾ. ಕೆ.ಆರ್.ಮೆಳವಂಕಿ ವರದಿವಾಚನ ಮಾಡಿದರು, ಕುಮಾರಿ ರೂಪಾ ಹುಣಶಿಮರದ ಹಾಗೂ ಕುಮಾರಿ ಅಶ್ವಿನಿ ಹಾಲಗಿಮರಡಿ ಅತಿಥಿಗಳನ್ನು ಪರಿಚಯಿಸಿದರು, ಕುಮಾರ ಹನುಮಂತ ಶೀಗಿಹಳ್ಳಿ ವಂದಿಸಿದರು, ಕುಮಾರಿ ಚೈತ್ರಾ ಪಠಾಣೆ ಕಾರ್ಯಕ್ರಮ ನಿರೂಪಿಸಿದರು.
ಪೋಟೊ: ೧. ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟ ಹಾಗೂ ಕ್ರೀಡಾ ಚಟುವಟಿಕೆಗಳನ್ನು ರಾಚವಿವಿ ಸಿಂಡಿಕೆಟ್ ಸದಸ್ಯ ಮಹಾಂತೇಶ ಕಂಬಾರ ಹಾಗೂ ವರದಿಗಾರ ಪ್ರದೀಪ ಮೇಲಿನಮನಿ ನೇರವೆರಿಸಿದರು. ಚೇರಮನ್ನ ಜೆ.ವ್ಹಿ.ವಸ್ತçದ, ಕಾರ್ಯದರ್ಶಿ ಜೆ.ಎಸ್.ಬಿಕ್ಕಣ್ಣವರ, ಪ್ರಾಚಾರ್ಯ ನಾಗರಾಜ ಎಚ್.ಕೆ. ಇತರರು ಚಿತ್ರದಲ್ಲಿದ್ದಾರೆ.
೨. ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡುತ್ತೀರುವ ರಾಚವಿವಿ ಸಿಂಡಿಕೆಟ್ ಸದಸ್ಯ ಮಹಾಂತೇಶ ಕಂಬಾರ. ವರದಿಗಾರ ಪ್ರದೀಪ ಮೇಲಿನಮನಿ, ಚೇರಮನ್ನ ಜೆ.ವ್ಹಿ.ವಸ್ತçದ, ಕಾರ್ಯದರ್ಶಿ ಜೆ.ಎಸ್.ಬಿಕ್ಕಣ್ಣವರ, ಪ್ರಾಚಾರ್ಯ ನಾಗರಾಜ ಎಚ್.ಕೆ. ಇತರರು ಚಿತ್ರದಲ್ಲಿದ್ದಾರೆ.
೨. ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಉದ್ಘಾಟಿಸಿ.ಮಾತನಾಡುತ್ತೀರುವ ವರದಿಗಾರ ಪ್ರದೀಪ ಮೇಲಿನಮನಿ, ರಾಚವಿವಿ ಸಿಂಡಿಕೆಟ್ ಸದಸ್ಯ ಮಹಾಂತೇಶ ಕಂಬಾರ, ಚೇರಮನ್ನ ಜೆ.ವ್ಹಿ.ವಸ್ತçದ, ಕಾರ್ಯದರ್ಶಿ.ಜೆ.ಎಸ್.ಬಿಕ್ಕಣ್ಣವರ, ಪ್ರಾಚಾರ್ಯ ನಾಗರಾಜ ಎಚ್.ಕೆ. ಇತರರು ಚಿತ್ರದಲ್ಲಿದ್ದಾರೆ.
0 Comments