ಕಿತ್ತೂರು ವಿಜಯ ಸುದ್ದಿ.ಮನೆಗಳ್ಳತನ ಆರೋಪಿಯನ್ನು ಪತ್ತೆಹಚ್ಚಿದ ಎಪಿಎಂಸಿ ಪೊಲೀಸರು


 ಕಿತ್ತೂರು ವಿಜಯ ಸುದ್ದಿ: ಬೆಳಗಾವಿಯ ಎ.ಪಿ.ಎಮ್.ಸಿ

ಪೊಲೀಸ್‌ ಠಾಣೆಯ ವ್ಯಾಪ್ತಿಯ ಮಲ್ಲೇಶ್ವರ ನಗರದ ಮನೆಯವೊಂದರಲ್ಲಿ ಬಂಗಾರದ ಆಭರಣಗಳು ಹಾಗೂ ಬೆಳ್ಳಿಯ ಆಭರಣಗಳು ಕಳುವಾದ ಬಗ್ಗೆ ದೂರು ದಾಖಲಾಗಿದ್ದು, 24 ಗಂಟೆಯಲ್ಲೆ ಪೊಲೀಸರು ಕಳ್ಳನನ್ನು ಬಂಧಿಸಿದ್ದಾರೆ.

ಎಸಿಪಿ ಸಂತೋಷ ಸತ್ಯನಾಯಕ, ಸಿಪಿಐ ಯು ಎಸ್‌ ಅವಟಿ, ಪಿಎಸ್‌ಐಗಳ ನೇತೃತ್ವದ ತಂಡವು ಆರೋಪಿ ಮಸ್ತಾನ ಅಲಿ ರಸೂಲ್ ಶೇಖ್ (21) ಎಂಬಾತನನ್ನು ಬಂಧಿಸಿ 6.64.403 ರೂ ಬೆಲೆಯ 83.100 ಗ್ರಾಂ ಬಂಗಾರದ ಆಭರಣಗಳು ಹಾಗೂ 567.180 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆಕಾರ್ಯಾಚರಣೆಯಲ್ಲಿ ಎ.ಪಿ.ಎಮ್.ಸಿ ಪೊಲೀಸ್‌ ಠಾಣೆಯ ಪಿಎಸ್‌ಐ ಮಂಜುನಾಥ ಭಜಂತ್ರಿ, ಪಿಎಸ್‌ಐ, ತ್ರಿವೇಣಿ ನಾಟೀಕರ, ಸಂತೋಷ ದಳವಾಯಿ ಪಿಎಸ್‌ಐ, ಬಿ ಕೆ ಮಿಟಗಾರ. ಎ.ಎಸ್.ಐ. ಡಿ. ಸಿ ಸಾಗರ, ಬಿ ಎಮ್ ನರಗುಂದ, ನಾಗಪ್ಪ ಬೀರಗೊಂಡ, ಕೆ ಬಿ ಖಾನಮ್ಮನವರ, ಗೋವಿಂದಪ್ಪ ಪೂಜಾರ, ಎಮ್ ಜಿ ಮರನಿಂಗಗೋಳ. ಎ ಎನ್ ಮೊಕಾಸಿ ಹಾಗೂ ಸಿಬ್ಬಂದಿಯವರು ಭಾಗ ವಹಿಸಿದ್ದರು.

Post a Comment

0 Comments