ಕಿತ್ತೂರು ವಿಜಯ ಸುದ್ದಿ: ಬಿಪಿಎಲ್ ಕಾರ್ಡ್ ಗೊಂದಲಗಳ ನಡುವೆಯೇ ರಾಜ್ಯದಲ್ಲಿ ಇಂದಿನಿಂದ ಬಿಪಿಎಲ್ ಕಾರ್ಡ್ ಪರೀಷ್ಕರಣೆ ಆರಂಭವಾಗಲಿದೆ. ಅರ್ಹ ಫಲಾನುಭವಿಗಳಿಗೆ ಕಾರ್ಡ್ ಗಳನ್ನು ಮತ್ತೆ ನೀಡುವ ನಿಟ್ಟಿನಲ್ಲಿ ಕಾರ್ಡ್ ಪರಿಷ್ಕರಣೆ ನಡೆಸುತ್ತಿದೆ.
ಯಾವುದೇ ಅರ್ಹ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡದಂತೆಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು, ಅಲ್ಲದೇ ಒಂದು ವೇಳೆ ಅರ್ಹರ ಬಿಪಿಎಲ್ ಕಾರ್ಡ್ ರದ್ದಾದರೆ ಮತ್ತೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.ಈ ಎಲ್ಲಾ ಬೆಳವಣಿಗೆ ನಡುವೆ ಆಹಾರ ಇಲಾಖೆ ಪಡಿತರ ಚೀಟಿ- ಬಿಪಿಎಲ್ ಕಾರ್ಡ್ ಗಳ ಪರೀಷ್ಕರಣೆ ಮತ್ತು ತಿದ್ದುಪಡಿ ನಡೆಸಲು ಮುಂದಾಗಿದೆ.
ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಐಟಿ ರಶೀದಿ ಮೂಲಕ ಅರ್ಹರ ಕಾರ್ಡ್ ಗಳನ್ನು.ಪರಿಶೀಲಿಸಲಾಗುತ್ತದೆ.
0 Comments