ಕಿತ್ತೂರು ವಿಜಯ ಸುದ್ದಿ.
ನಿನ್ನೆ ಕಿತ್ತೂರಿನ ಕೋಟೆ ಆವರಣದಲ್ಲಿ ನಡೆದ ಲಕ್ಷ ದೀಪೋತ್ಸವವು ಜನಸಾಮಾನ್ಯರಿಗೆ ನಿಜವಾದ ಸಾಂಸ್ಕೃತಿಕ ತಿರುನಾಳವಾಗಿ ಪರಿಣಮಿಸಿತು. ಸಾವಿರಾರು ದೀಪಗಳಿಂದ ಜಗಮಗಿಸಿದ ಕೋಟೆಯ ಆವರಣವು ಕೇವಲ ಸ್ಥಳೀಯರನ್ನಷ್ಟೇ ಅಲ್ಲದೆ, ದೂರದೂರಿಂದ ಬಂದ ಜನರನ್ನು ಸಹ ಆಕರ್ಷಿಸಿತು. ಈ ದೀಪೋತ್ಸವವು ಕಿತ್ತೂರಿನ ಐತಿಹಾಸಿಕ ಮಹತ್ವವನ್ನು ಹೊಸ ತಲೆಮಾರಿಗೂ ಪರಿಚಯಿಸುವಲ್ಲಿ ಯಶಸ್ವಿಯಾಯಿತು.
ಅತೀ ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿದ ಸಾರ್ವಜನಿಕರ ಸಹಕಾರ ಮತ್ತು ಪ್ರೋತ್ಸಾಹವೇ ಈ ಕಾರ್ಯಕ್ರಮದ ಸಫಲತೆಯ ಸಾಕ್ಷಿಯಾಗಿದೆ. ಶ್ರೀಮತಿ ರೋಹಿಣಿ ಅಕ್ಕ ಅಭಿಮಾನ ಬಳಗ ಮತ್ತು ಶ್ರೀ ಬಾಬಾಸಾಹೇಬ ಪಾಟೀಲ ಅಭಿಮಾನ ಬಳಗದ ಪರವಾಗಿ ಈ ಕಾರ್ಯಕ್ರಮದಲ್ಲಿ ಪ್ರತಿಯೊಂದು ಹಂತದಲ್ಲೂ ಸಹಕರಿಸಿದ ಪ್ರತಿಯೊಬ್ಬರಿಗೂ ಮನಃಪೂರ್ವಕ ಧನ್ಯವಾದಗಳು.ಕಿತ್ತೂರ ಕೋಟೆ ಆವರಣದ ಗ್ರಾಮ ದೇವಿಯರ ದೇವಸ್ಥಾನ , ಆಂಜನೇಯ ದೇವಸ್ಥಾನ ಬತ್ತೆರಿ ಮೇಲೆ ದೀಪೋತ್ಸವ, ಹಾಗೂ ಪ್ರ ಪ್ರಥಮ ಬಾರಿಗೆ ಚನ್ನಮ್ಮ ಸರ್ಕಲ ಮುಂದೆಯೂ ನೂರಾರು ಮಹಿಳೆಯರು ಸೇರಿ ದೀಪೋತ್ಸವ ಕಾರ್ಯಕ್ರಮ ಶ್ರೀಮತಿ ರೋಹಿಣಿ ಬಾಬಾಸಾಹೇಬ ಪಾಟಿಲರವರ ನೇತ್ರತ್ವದಲ್ಲಿ ಯಶಸ್ವಿಯಾಗಿ ನೇರವೇರಿಸಿದರು.
ಕಿರಣ ವಾಳದ ಹಾಗೂ ಯುವಕರ ತಂಡ ಹಾಗೂ ರಾಣಿ ಚನ್ನಮ್ಮ ಮಹಿಳಾ ವೇದಿಕೆ ಹಾಗೂ ವಿವಿಧ ಮಹಿಳಾ ಸಂಘಗಳು ಕಾರ್ಯಕ್ರಮವು.ಯಶಸ್ವಿಯಾಗುವಂತೆ ಎಲ್ಲ ವ್ಯವಸ್ಥೆ ಮಾಡಿ ಮುಂಚೂಣಿಯಲ್ಲಿದ್ದರು.
ಈ ಕಾರ್ಯಕ್ರಮಕ್ಕೆ ಮಾನ್ಯ ಶಾಸಕರು ಶ್ರೀ ಬಾಬಾಸಾಹೇಬ ಪಾಟಿಲರು, CDPO, ಊರಿನ ಗಣ್ಯರು ಚನ್ನಬಸ್ಸಯ್ಯ ಹಿರೇಮಠ, ಜಕಾತಿ ಶಿವಾನಂದ, ಸಂಗನಗೌಡ ಪಾಟಿಲ, ಗುರುಸಿದ್ದ ಕಲ್ಮಠ , ನಿಂಗಪ್ಪ ಬೆಳವಡಿ ಹಾಗೂ ಗ್ರಾಮ ದೇವಿ ಕಮಿಟಿ ಸದಸ್ಯರು, ಸಾವಿರಾರು ಮಹಿಳಾ ಭಕ್ತಾಧಿಗಳು ಪಾಲ್ಗೊಂಡಿದ್ದರು.
0 Comments