ಕಿತ್ತೂರು ವಿಜಯ ಸುದ್ದಿ. ಚನ್ನಮ್ಮನ ಕಿತ್ತೂರು :- ಕಿತ್ತೂರು ಪಟ್ಟಣದ ಗುರುವಾರ ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ನಲಿಕಲಿ ENK ತರಬೇತಿ ಶಿಬಿರವನ್ನು ಕ್ಷೇತ್ರಶಿಕ್ಷಣಾಧಿಕಾರಿಗಳಾದ ಸಿ. ವಾಯ್. ತುಬಾಕದ
ಉದ್ಘಾಟಿಸಿದರು.
ಶಿಬಿರದಲ್ಲಿ ಅವರು ಸ್ಪೀಕಿಂಗ್ ಸ್ಕಿಲ್ಸ್ ಮತ್ತು ಕಮ್ಯುನಿಕೇಶನ್ ಕೌಶಲಗಳು ಕುರಿತಂತೆ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಈ ಮೂಲಕ ಅವರು ಉತ್ತಮ ಸಂವಹನವು ಶಿಕ್ಷಕರಿಗೆ ಉತ್ತಮ ಪಾಠಶಾಲಾ ಪರಿಸರ ನಿರ್ಮಾಣದಲ್ಲಿ ಹೇಗೆ ಸಹಕಾರಿಯಾಗಿದೆ ಎಂಬುದರ ಮೇಲೆ ಬೆಳಕು ಚೆಲ್ಲಿದರು.
ಸಹಭಾಗಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು
ತರಬೇತಿಯಲ್ಲಿ ಬ್ಲಾಕ್ ರಿಸೋರ್ಸ್ ಪರ್ಸನ್‌ಗಳಾದ ಶ್ರೀಮತಿ ಸ್ನೇಹಲ್ ಪೂಜೇರ ಮತ್ತು ಶ್ರೀಮತಿ ಸುನೀತಾ ಪರಪ್ಪನ್ನವರ ಅವರು ಭಾಗವಹಿಸಿ, ನಲಿಕಲಿ ಶಿಕ್ಷಣ ವಿಧಾನಗಳ ಕಾರ್ಯತಂತ್ರಗಳನ್ನು ಶೈಕ್ಷಣಿಕ ರೀತಿಯಲ್ಲಿ ವಿವರಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಬಿ.ಎಸ್. ಕುಂಬಾರ, ಎಸ್.ಎಮ್. ಪಶ್ಚಾಪೂರ, ಲಕ್ಷ್ಮೀ ಭೂಸನ್ನವರ, ಎಂ.ವಾಯ್. ಗುಂಡಗಾಂವಿ, ಮತ್ತು ಶಂಕರ ಹಂಬರ ಅವರು ನಲಿಕಲಿ ಪಾಠಕ್ರಮದ ನವೀಕರಿಸಿದ ಮಾರ್ಗಗಳನ್ನು ಶಿಬಿರಾರ್ಥಿಗಳಿಗೆ ಪರಿಚಯಿಸಿದರು.ಶಿಬಿರದ ಮುಖ್ಯಾಂಶಗಳು:
ಶಿಬಿರದಲ್ಲಿ ನಲಿಕಲಿ ಪಾಠಕ್ರಮದ ಅಧ್ಯಾಪನ ತಂತ್ರಗಳು, ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮೆಟ್ಟಿಲುಗಳನ್ನು ಏರಲು ಹೇಗೆ ಸಹಕಾರಿಯಾಗುತ್ತವೆ ಎಂಬುದರ ಕುರಿತಂತೆ ಚರ್ಚೆ ನಡೆಯಿತು.ಶಿಬಿರದಲ್ಲಿ ತಾಲೂಕಿನ ನಲಿಕಲಿ ಶಿಕ್ಷಕರು
ಚಿರೋತ್ಸಾಹದಿಂದ ಭಾಗವಹಿಸಿ, ತಮ್ಮ.ಅನುಭವಗಳನ್ನುಹಂಚಿಕೊಂಡರು.ಶಿಕ್ಷಣ ಕ್ಷೇತ್ರದಲ್ಲಿ ನಲಿಕಲಿ ತರಗತಿಯ ಅಧ್ಯಯನ ಮತ್ತು ಅಧ್ಯಾಪನ ವಿಧಾನಗಳಿಗೆ ಹೊಸ ದಿಕ್ಕು ನೀಡುವಲ್ಲಿ ಈ ತರಬೇತಿ ಶಿಬಿರ ಮುಖ್ಯವಾದ ಪಾತ್ರ ವಹಿಸಿದೆ. ನಮ್ಮ ತಾಲೂಕಿನ ಶಿಕ್ಷಣ ಅಧಿಕಾರಿ ತುಬಾಕದ ಅವರ ಮಾರ್ಗದರ್ಶನವು ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ಶಿಬಿರಾರ್ಥಿಗಳು.
ಅಭಿಪ್ರಾಯಪಟರು.
ಈ ಶಿಬಿರದ ಮೂಲಕ ಶಿಕ್ಷಕರು ತಮ್ಮ ಶಿಕ್ಷಣ ಕೌಶಲತೆಯನ್ನು ಹೆಚ್ಚಿಸಿಕೊಂಡು, ನಲಿಕಲಿ ಮೂಲಕ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ಹೊಸ ಆಕಾರ ನೀಡಲು ಸಜ್ಜಾಗಿದ್ದಾರೆ.
0 Comments