ಅಲ್ಪಸಂಖ್ಯಾತ ವಿಶ್ವವಿದ್ಯಾಲಯ ಎಂದು ಘೋಷಿ ಸಬಹುದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ. 1967ರಲ್ಲಿ ನೀಡಿದ್ದ ತೀರ್ಪಿನಲ್ಲಿ ಈ ಸಂಸ್ಥೆಯ ಕೇಂದ್ರದ ಕಾನೂನಿನ್ವಯ ಸ್ಥಾಪನೆಯಾಗಿರುವುದರಿಂದ ಇದನ್ನು ಅಲ್ಪಸಂಖ್ಯಾತ ಸಂಸ್ಥೆ ಎನ್ನಲಾಗದು ಎಂದು ಅಭಿಪ್ರಾಯಪಟ್ಟಿತ್ತು. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದಲ್ಲಿ ಏಳು ನ್ಯಾಯಾ ಧೀಶರ ಪೀಠ ಇದನ್ನು ತಳ್ಳಿ ಹಾಕಿದ್ದು, ಅಂತಿಮ ತೀರ್ಪಿಗಾಗಿ ಮೂವರು ನ್ಯಾಯಾಧೀಶರ ಪೀಠಕ್ಕೆ ಇದನ್ನು ವರ್ಗಾಹಿಸಲಾಗಿದೆ. ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದು ಯಾರು? ಯಾರು ಇದಕ್ಕಾಗಿ ಹಣ ಸಂಗ್ರಹಿಸಿದ್ದರು? ಮುಂತಾದ ಅಂಶಗಳ ಬಗ್ಗೆ ಈಗ ನ್ಯಾಯಪೀಠ ವಿಚಾರಣೆ ನಡೆಸಬೇಕಾಗುತ್ತದೆ. ಅದರಲ್ಲಿ ಅಲ್ಪಸಂಖ್ಯಾತ ರಿಗಾಗಿಯೇ ಈ ವಿವಿ ಶುರು ಮಾಡಿದ್ದು ಎನ್ನುವುದು ಖಚಿತವಾದಲ್ಲಿ, ಆ ಸ್ಥಾನಮಾನ ನೀಡಲಾಗುತ್ತದೆ. 2005ರಲ್ಲಿ ತನ್ನ ಅರ್ಧ ಸ್ನಾತಕೋತ್ತರ ಮೆಡಿಕಲ್ ಸೀಟುಗಳನ್ನು ಮುಸ್ಲಿಮರಿಗೆ ಮೀಸಲಾಗಿರಿಸಿತು. ಇದನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಆಗ ಅಲಹಾಬಾದ್ ಹೈಕೋರ್ಟ್ ಅಲೀ ಗಢ ವಿವಿ ಅಲ್ಪಸಂಖ್ಯಾತ ಸಂಸ್ಥೆ ಅಲ್ಲ ಎಂದು ತೀರ್ಪಿತ್ತಿತ್ತು. ಅದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂ ಮೆಟ್ಟಿಲೇರಿತ್ತು. 2006ರಲ್ಲಿ ಅಂದಿನ ಸಿಜೆಐ ರಂಜನ್ ಗೊಗೊಯಿ ನೇತೃತ್ವದ ತ್ರಿಸದಸ್ಯ ಪೀಠ ಉನ್ನತ ಪೀಠವು ಏಳು ಸದಸ್ಯರ ಪೀಠದಲ್ಲಿ ಪ್ರಕರಣದ ವಿಚಾರಣೆಗೆ ನಿರ್ದೇಶನ ನೀಡಿತ್ತು. ಕಳೆದ ವರ್ಷಅಕ್ಟೋಬರ್ ತಿಂಗಳಲ್ಲಿ ಚಂದ್ರಚೂಡ್ ಅವರ ಏಳು ಸದಸ್ಯರ ಪೀಠವನ್ನು ನೇಮಕ ಮಾಡಿದ್ದರು. ಸಿಜೆ ಐ ಚಂದ್ರಚೂಡ ಪ್ರಮುಖ ತೀರ್ಪುಗಳು
0 Comments