ಕಿತ್ತೂರು ವಿಜಯ.
ಸುದ್ದಿ. ಸರಕಾರಿ ಪ್ರಥಮ ದರ್ಜೆ ಕಾಲೇಜು , ಚನ್ನಮ್ಮನ ಕಿತ್ತೂರು ಇಲ್ಲಿ ನಡೆದ 2024-25 ನೇ ಸಾಲಿನ ಸಾಂಸ್ಕೃತಿಕ ,ಕ್ರೀಡಾ , ರೆಡಕ್ರಾಸ್ ಮುಂತಾದ ಘಟಕದ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಕಾರ್ಯಕ್ರಮದಲ್ಲಿ ಚ.ಕಿತ್ತೂರು ಜನಪ್ರಿಯ ಶಾಸಕರಾದ ಬಾಬಾಸಾಹೇಬ ಅಣ್ಣಾ ಪಾಟೀಲರವರು ಮತ್ತು ಅವರ ಧರ್ಮಪತ್ನಿಯರಾದ ರೋಹಿಣಿ ತಾಯಿ ಬಾಬಾಸಾಹೇಬ ಪಾಟೀಲರವರು ( ಕೆಪಿಸಿಸಿ ಸದಸ್ಯರು ಬೆಂಗಳೂರು ) ಭಾಗವಹಿಸಿದರು. ಈ ಸಂದರ್ಭದಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು , ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪ್ರದೀಪ ಮೇಲಿನಮನಿ ಪತ್ರಕರ್ತರನ್ನು , ರಾಣಿ ಚನ್ನಮ್ಮ ವಿ.ವಿ ಸಿಂಡಿಕೇಟ್ ಸದಸ್ಯರಾಗಿ ನೇಮಕವಾದ ಮಹಾಂತೇಶ ಕಂಬಾರರನ್ನು , ನೂತನ ಪ್ರಾಚಾರ್ಯರಾಗಿ ನೇಮಕವಾದ ಕವಿತಾ ಕುಲಕರ್ಣಿ ಮೇಡಂ ಅವರನ್ನು ಬಾಬಾಸಾಹೇಬ ಪಾಟೀಲ ದಂಪತಿಗಳು ಆತ್ಮೀಯವಾಗಿ ಸನ್ಮಾನಿಸಿದರು . ವೇದಿಕೆಯ ಮೇಲಿನ ಗಣ್ಯರು , ಕಾಲೇಜಿನ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
0 Comments