ಕಿತ್ತೂರು ವಿಜಯ ಸುದ್ದಿ. ಚೆನ್ನಮ್ಮನ ಕಿತ್ತೂರು : ಬೆಳಗಾವಿ ಸುವರ್ಣಸೌಧಕ್ಕೆ ಪಂಚಮಸಾಲಿ ಸಮಾಜದಿಂದ 2A ಮೀಸಲಾತಿಗಾಗಿ ಮುತ್ತಿಗೆ ಹಾಕಲು ನಿರ್ಧರಿಸಿದ್ದು ಸರಕಾರ ಏನಾದರೂ ಹೋರಾಟ ಹತ್ತಿಕ್ಕಲು ಪ್ರಯತ್ನಿಸಿದರೆ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಪಂಚ ಸೇನಾ ರಾಜ್ಯಾಧ್ಯಕ್ಷ ರುದ್ರಗೌಡ ಸೊಲಬಗೌಡ್ರ ಹೇಳಿದರು. ಅವರು ಸೋಮವಾರ. ಕಿತ್ತೂರು ಚೆನ್ನಮ್ಮ ಸರ್ಕಲ್ ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಅಧಿವೇಶನದ ಪ್ರಾರಂಭದ ದಿನದಂದು ಐದು ಸಾವಿರಕ್ಕೂ ಹೆಚ್ಚು ಟ್ಯಾಕ್ಟರ್ ಹಾಗೂ ರೈತರಿಂದ ಮುತ್ತಿಗೆ ಹಾಕಲಾಗುವುದು, ಕಳೆದ ನಾಲ್ಕು ವರ್ಷಗಳಿಂದ ಪಂಚಮಸಾಲಿ 2 A ಹೋರಾಟ ನಿರಂತರವಾಗಿ ವಿಭಿನ್ನ ರೀತಿಗಳಲ್ಲಿ ನಡೆಯುತ್ತಿದ್ದರೂ ಸರ್ಕಾರ ನೋಡಿದರೂ ಕುರುಡರಂತೆ ಕೇಳಿದರೂ ಕಿವುಡರಂತೆ ವರ್ತಿಸುತ್ತಿದೆ, ಶ್ರೀಗಳು ಸಮುದಾಯವನ್ನು ಸಂಘಟಿಸಿ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಹೋರಾಟ ಮಾಡುತ್ತಿದ್ದಾರೆ, ಈ ಹೋರಾಟ ಅಂತಿಮ ಹೋರಾಟ ಹಾಗೂ ಮಾಡು ಇಲ್ಲವೇ ಮಡಿ ಹೋರಾಟ
ಆದರೆ ಪಂಚಮಸಾಲಿ ಸಮಾಜದ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಮುಂದಾದರೆ ಇದು ಸರ್ಕಾರಕ್ಕೂ ಮುಜುಗರ ಉಂಟುಮಾಡುತ್ತದೆ ಹಾಗೂ ನಮ್ಮ ಸಮುದಾಯವು ಸರ್ಕಾರದ ಮೇಲಿರುವ ನಂಬಿಕೆಯನ್ನು ಕಳೆದುಕೊಳ್ಳುತ್ತದೆ ಎಂದರು. ಈ ಸಂದರ್ಭದಲ್ಲಿ ಕಿತ್ತೂರು ಪಂಚಸೇನಾ ತಾಲೂಕ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಇನ್ನು ಅನೇಕ ಮುಖಂಡರು ಅನೇಕ ಮುಖಂಡರು ಉಪಸ್ಥಿತರಿದ್ದರು.
0 Comments