ಕಿತ್ತೂರು ವಿಜಯ ಸುದ್ದಿ.ಕಾಲ್ತುಳಿತದಲ್ಲಿ ಮಹಿಳೆ ಸಾವು ಪ್ರಕರಣ: ವಿಚಾರಣೆಗೆ ಹಾಜರಾದ ನಟ ಅಲ್ಲು ಅರ್ಜುನ್

ಕಿತ್ತೂರು ವಿಜಯ ಸುದ್ದಿ: ಪುಷ್ಪ-2 ಸಿನಿಮಾ ಬಿಡಿಗಡೆ ಸಂದರ್ಭದಲ್ಲಿ ಹೈದರಾಬಾದ್ ನ ಸಂಧ್ಯಾ ಥಿಯೇಟರ್ ನಲ್ಲಿ ಕಾಲ್ತುಳಿತ ಸಂಭವಿಸಿ ಮಹಿಳೆ ಸಾವನ್ನಪ್ಪಿದ ಪ್ರಕರಣ ಸಂಬಂಧ ಟಾಲಿವುಡ್ ನಟ ಅಲ್ಲು ಅರ್ಜುನ್ ಪೊಲೀಸ್ ವಿಚಾರಣೆಗೆ ಹಾಜರಾಗಿದ್ದಾರೆ.ಮೃತ ರೇವತಿ ಕುಟುಂಬಕ್ಕೆ ಸಿನಿಮಾದ ನಿರ್ದೇಶಕರಿಂದ ರೂ.50 ಲಕ್ಷ ಹಾಗೂ ನಿರ್ಮಾಪಕರಿಂದ ತಲಾ ರೂ.50 ಲಕ್ಷವನ್ನು ಘೋಷಣೆ ಮಾಡಲಾಗಿದ್ದು, ಬರೋಬ್ಬರಿ 2 ಕೋಟಿ ರೂಪಾಯಿ ಮೊತ್ತ ಪರಿಹಾರದ ರೂಪದಲ್ಲಿ ನೀಡಲು ಅನೌನ್ಸ್ ಮಾಡಲಾಗಿದೆ. ಒಟ್ಟು 2 ಕೋಟಿ ರೂಪಾಯಿ ಪರಿಹಾರವಾಗಿ ನೀಡಲು ನಾವು ತೀರ್ಮಾನಿಸಿದ್ದಾಗಿ ಅಲ್ಲು ಅರವಿಂದ ಹೇಳಿದ್ದಾರೆ.

ಇದೇ ಪ್ರಕರಣದಲ್ಲಿ ಕೆಲ ದಿನಗಲ ಹಿಂದೆ ಬಂಧನಕ್ಕೀಡಾಗಿದ್ದ ನಟ ಅಲ್ಲು ಅರ್ಜುನ್, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದೀಗ ಪೊಲಿಸರು ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್ ಹೈದರಾಬಾದ್ ನ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ.ಇತ್ತೀಚೆಗೆ ಅಲ್ಲು ಅರ್ಜುನ್ ಅವರ ಹೈದರಾಬಾದಿನ ಜ್ಯುಬಿಲಿ ಹಿಲ್ಸ್ ನಿವಾಸದ ಮೇಲೆ ಕೆಲವರು ಕಲ್ಲು ತೂರಾಟ ನಡೆಸಿದ್ದಾಗ, ಭಾರೀ ಮೊತ್ತದ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದರು. ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತ ಘಟನೆ ನಡೆದಾಗ ರೇವತಿ ಎಂಬುವವರು ಸಾವನ್ನಪ್ಪಿದ್ದು ಇನ್ನೋರ್ವರು ಗಂಭೀರವಾಗಿ ಗಾಯಗೊಂಡಿದ್ದರು.

Post a Comment

0 Comments