ಕಿತ್ತೂರು ವಿಜಯ ಸುದ್ದಿ ಸಂಗೋಳ್ಳಿ ರಾಯಣ್ಣನ ಉತ್ಸವ-2025 ರ ಅಂಗವಾಗಿ ವೀರ ಜ್ಯೋತಿಯು ಇಂದು ಕಿತ್ತೂರ ತಾಲೂಕಿಗೆ ಆಗಮಿಸಿದ್ದು ಸದರಿ ಜ್ಯೋತಿಯನ್ನು ಕಿತ್ತೂರ ತಾಲೂಕ ಆಡಳಿತ ವತಿಯಿಂದ ಅದ್ದೂರಿಯಾಗಿ ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ಸ್ವಾಗತಿಸಿ ನಂತರ ದಾಸ್ತಿಕೊಪ್ಪ, ಮಲಪ್ರಭಾ ಸಹಕಾರಿ ಸಕ್ಕರೆ ಕಾರಖಾನೆಯಲ್ಲಿ ಸ್ವಾಗತಿಸಿ ಸಿಬ್ಬಂದಿಗಳಿ ಊಟೋಪಚಾರ ಮಾಡಿಸಿ ಇಟಗಿ ಕ್ರಾಸ್ ದಲ್ಲಿ ಪೂಜೆಯೊಂದಿಗೆ ಬಿಳ್ಕೊಟ್ಟು ನಂತರ ಚನ್ನಮ್ಮನ ಕಿತ್ತೂರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಚನ್ನಮ್ಮಾಜಿ ಪುಥ್ಥಳಿಯ ಹತ್ತಿರ ಅದ್ದೂರಿಯಾಗಿ ಬರಮಾಡಕೊಂಡು ಪೂಜೆ ಮಾಡಿ ತಾಲೂಕ ಆಡಳಿತ ವತಿಯಿಂದ ಕಿತ್ತೂರಿನ ತಹಶೀಲ್ದಾರರಾದ ಶ್ರೀ ರವೀಂದ್ರ ಕೆ.ಹಾದಿಮನಿ, ಹಾಗೂ ಶ್ರೀ ಘೋರ್ಪಡೆ, ತಾಲೂಕ ಪಂಚಾಯತ್ ಕಾರ್ಯನಿರ್ವಾಕ ಅಧಿಕಾರಿಗಳು,ಕಿತ್ತೂರ, ಶ್ರೀ ತುಬಾಕಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು,ಕಿತ್ತೂರ ,ಶ್ರೀ ರಾಘವೆಂದ್ರ ,ಸಹಾಯಕ ಕ್ಯೂರೇಟರ ಪ್ರಾಚ್ಯವಸ್ತು ಸಂಗ್ರಹಾಲಯ ಕಿತ್ತೂರ, ಶ್ರೀ ಎಂ.ಎಂ.ನೀರಲಗಿ, ಕಂದಾಯ ನಿರೀಕ್ಷಕರು,ಕಿತ್ತೂರ ಶ್ರೀ ಎಂ.ಎ.ಜಕಾತಿ,ಗ್ರಾಮ ಆಡಳಿತಾಧಿಕಾರಿಗಳು,ಕಿತ್ತೂರ, ಶ್ರೀ ಈರಣ್ಣಾ ಕುಂಟಿರಪ್ಪಗೊಳ, ಶ್ರೀ ಪ್ರಕಾಶ ಸುಣಗಾರ, ಶ್ರೀ ಪ್ರವೀಣ ಸೋಗಲದ ಶ್ರೀ ವಿಠ್ಠಲ ಬಡ್ಲಿ, ಕಂದಾಯ ಇಲಾಖೆ ಸಿಬ್ಬಂದಿಗಳು ಮತ್ತು ಪೊಲೀಸ ಇಲಾಖೆ, ಪಟ್ಟಣ ಪಂಚಾಯತ್ ಸಿಬ್ಬಂದಿಗಳಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿಗಳು, ಕಿತ್ತೂರ ಪಟ್ಟಣ ಪತ್ರಿಕಾ ಮಾಧ್ಯಮದವರು, ಹಾಗೂ ಕಿತ್ತೂರ ಪಟ್ಟಣದ ಹಾಗೂ ಸುತ್ತಮುತ್ತಲಿನ ಗಣ್ಯನಾಗರಿಕರು ಹಾಜರಿದ್ದು ಜ್ಯೋತಿಯನ್ನು ಬರಮಾಡಿಕೊಂಡು ಪೂಜೆ ಮಾಡಿ ಜ್ಯೋತಿಗೆ ಮಾಲಾರ್ಪಣೆ ಮಾಡಿ ಅದ್ದೂರಿಯಾಗಿ ಬಿಳ್ಕೊಡಲಾಯಿತು ನಂತರ ಕಿತ್ತೂರ ಪಟ್ಟಣದ ಗುರುವಾರ ಪೇಟೆ, ಅರಳಿಕಟ್ಟೆ ಮಾರ್ಗವಾಗಿ ಮಲ್ಲಾಪೂರ ಕೆ.ಎ. ಮಾರ್ಗವಾಗಿ ಚಿಕ್ಕನಂದಿಹಳ್ಳಿ ಶ್ರೀ ಬಸವಣ್ಣನ ದೇವಾಸ್ಥಾನಕ್ಕೆ ಬೇಟಿ ಕೊಟ್ಟು ಬೈಲಹೊಂಗಲ ತಾಲೂಕಿನ ಸಂಗೋಳ್ಳಿ ಗ್ರಾಮದ ಸೈನಿಕ ಶಾಲೆಗೆ ಕಳುಹಿಸಲಾಯಿತು.
0 Comments