ಕಿತ್ತೂರು ವಿಜಯ ಸುದ್ದಿ. ಚನ್ನಮ್ಮನ ಕಿತ್ತೂರು. ಶ್ರೀ ಗುರು ಬಸವೇಶ್ವರ ಅಭಿವೃದ್ಧಿ ಸೇವಾ ಸಂಘ. ಗುರು ಬಸವ ಮಂಟಪಕ್ಕೆ ಧನ.ಸಾಹಾಯಕ್ಕೆ ಮನವಿ.


 ದಯವೇ ಧರ್ಮದ ಮೂಲವಯ್ಯಾ
ಕಿತ್ತೂರು ವಿಜಯ ಸುದ್ದಿ  ಕಾಯಕವೇ ಕೈಲಾಸ ಜಾತಿಯಿಂದ ಗುರುತ್ವ ಬರದು, ಅತ್ಮ ಜ್ಯೋತಿಯಿಂದ ಮಾತ್ರ ಎಂಬುದನ್ನು ಘೋಷಿಸಿ ಬಸವಣ್ಣವರು ಶೂನ್ಯ ಪೀಠವನ್ನು ಸ್ಥಾಪಿಸಿದರು. ವೀರ ವೈರಾಗ್ಯನಿಧಿ ಅಲ್ಲಮಪ್ರಭುಗಳು ಪ್ರಥಮ ಶೂನ್ಯಪೀಠಾಧಿಕಾರಿಯಾಗಿ ಅನುಭವ ಮಂಟಪದ ಸಚೇತಕ ಶಕ್ತಿಯಾದರು. ಲೋಹ ಚುಂಬಕದತ್ತ ಕಬ್ಬಿಣವು ಆಕರ್ಷಿಸಲ್ಪಡುವಂತೆ ವೀರ ವಿರಾಗಣಿ ಅಕ್ಕಮಹಾದೇವಿ, ಲಿಂಗಾಂಗಯೋಗಿ ಸಿದ್ಧರಾಮೇಶ್ವರ, ಕಾಶ್ಮೀರದ ಮಹಾರಾಜ ಮೋಳಿಗೆ ಮಾರಯ್ಯ, ತತ್ವನಿಷ್ಠುರಿ ಮಡಿವಾಳ ಮಾಚಯ್ಯ ಆಕರ್ಷಿಸಲ್ಪಟ್ಟರು. ಅನುಭವ ಮಂಟಪವು ಜ್ಞಾನನಿಧಿ ಚನ್ನಬಸವಣ್ಣ, ಕ್ರಿಯಾಶಕ್ತಿ ಅಕ್ಕನಾಗಲಾಂಬಿಕೆ, ಹಡಪದ ಅಪ್ಪಣ್ಣ, ಮಾದರ ಚೆನ್ನಯ್ಯ, ಡೋಹರ ಕಕ್ಕಯ್ಯ, ಬ್ರಾಹ್ಮಣ ಮಧುವರಸ, ಸಮಗಾರ ಹರಳಯ್ಯ, ಅಂಬಿಗರ ಚೌಡಯ್ಯ, ಒಕ್ಕಲಿಗ ಮುದ್ದಣ್ಣ, ತುರಗಾಹಿ ರಾಮಣ್ಣ ಮುಂತಾದ ಅಸಂಖ್ಯಾತ ಜಂಗಮ ಪುಂಗವರಿಂದ ವಿಜೃಂಭಿಸಿತು. ಅನುಭವ ಮಂಟಪದ ಚಿಕ್ಕ ರೂಪವೇ, ಬಸವ ಮಂಟಪ. ರಾಷ್ಟ್ರೀಯ ಬಸವ ದಳವು, ಕೂಡಲ ಸಂಗಮದ ಬಸವ ಧರ್ಮ ಪೀಠದ ಶಾಖೆಯಾಗಿದ್ದು, ಬಸವ ಮಂಟಪವು, ಬಸವ ಧರ್ಮ ಪೀಠದ ಅಂಗ ಸಂಸ್ಥೆಯಾಗಿದ್ದು ಅದರಂತೆ.ಕಾರ್ಯನಿರ್ವಹಿಸುವುದು.ರಾಷ್ಟ್ರೀಯ ಬಸವದಳದ ಕಾರ್ಯಕಲಾಪಗಳು ವಾರಕ್ಕೊಮ್ಮೆ ದೇವ (ಭಾನು) ವಾರ ಸಾಮೂಹಿಕ ಪ್ರಾರ್ಥನೆ ಶರಣ ಸಂಗಮ ಕಾರ್ಯಕ್ರಮ ನಡೆಸುವುದು, ಜಾತಿ ಮತಗಳ ಭೇಧವಿಲ್ಲದೆ ಬಸವ ಭಕ್ತರೆಲ್ಲ ಒಂದಡೆ ಸೇರಿ ಪ್ರಾರ್ಥನೆ ಆಧ್ಯಾತ್ಮಿಕ ಚಿಂತನೆ ಮಾಡುವುದು. ಬಸವಾದಿ ಶರಣರ ವಚನ ಸಾಹಿತ್ಯದ ಪ್ರಚಾರ ಮತ್ತು ಪ್ರಸಾರ ಮಾಡುವುದು. ಪ್ರತಿ ನಿತ್ಯ ಸಂಜೆ 7 ಘಂಟೆಗೆ ನೆನಹು ಪ್ರಾರ್ಥನೆ ನಡೆಸುವುದು. ಅನಾಥ ಮತ್ತು ಬಡಮಕ್ಕಳಿಗೆ ಸಹಾಯ ಮಾಡುವುದು. ಯೋಗ-ಧ್ಯಾನ-ತ್ರಾಟಕ ಯೋಗಗಳನ್ನು ಜನತೆಗೆ ಕಲಿಸುವುದು.ಜಾತಿ-ವರ್ಣ-ವರ್ಗರಹಿತ, ಧರ್ಮಸಹಿತ ಶರಣ ಸಮಾಜ ನಿರ್ಮಿಸುವುದು. ಬಸವ ಜಯಂತಿ, ಬಸವ ಪಂಚಮಿ, ಲಿಂಗೈಕ್ಯ ಸಂಸ್ಮರಣೆ ದಿನ ಹಾಗೂ ಇನ್ನಿತರ ಹಬ್ಬಗಳನ್ನು ಆಚರಿಸುವುದು.* ಗ್ರಾಮೀಣ ಯುವಕರನ್ನು ಒಂದುಗೂಡಿಸುವುದು. ಲಿಂಗಾಯತ ಧರ್ಮವನ್ನು ಉಳಿಸಿ ಬೆಳೆಸಲು ಶ್ರಮಿಸುವುದು. ಲಿಂಗಾಯತ ಧರ್ಮದ ಜಾಗೃತಿ ಮತ್ತು ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಬಸವಣ್ಣವರ ವಿಚಾರ ಜನರಿಗೆ ತಲುಪಿಸಲು ವಿಚಾರ ಸಂಕೀರ್ಣ, ಪ್ರವಚನ, ಕಾರ್ಯಾಗಾರಗಳನ್ನು ಏರ್ಪಡಿಸುವುದು. ಧೈಯೋದ್ದೇಶಗಳು ಬಸವ ಮಂಟಪ ನಿರ್ಮಿಸಿ ಆಧ್ಯಾತ್ಮಿಕತೆಯ ಜಾಗೃತಿಗೆ ಶ್ರಮಿಸುವುದು.ಜನತೆಗೆ ಅನುಕೂಲವಾಗುವಂತ ಆಧ್ಯಾತ್ಮಿಕ ವಾಚನಾಲಯವನ್ನು ತೆರೆಯುವುದು.* ಇಂಂದಿನ ವೈಜ್ಞಾಣಿಕ ಯುಗದಲ್ಲಿ ಭೌತಿಕವಾಗಿ ಮಾನವನು ಸಾಕಷ್ಟು ಪ್ರಗತಿ ಸಾಧಿಸಿದ್ದಾನೆ. ಆದರೆ ಮನಸ್ಸಿಗೆ ಶಾಂತಿ ನೆಮ್ಮದಿಯಿಲ್ಲದೆ ಪರಿತಪಿಸುತ್ತಿದ್ದಾನೆ. ಇಂಥ ಸಂದರ್ಭದಲ್ಲಿ ಯಾವುದೇ ಜಾತಿ, ಮತ, ಪಂಥಗಳ ಬೇಧವಿಲ್ಲದೆ ಸಮಾನವಾಗಿ ಕುಳಿತು ಓಂಕಾರ ನಾದದ ಜೊತೆಯಲ್ಲಿ ಧ್ಯಾನಮಗ್ನರಾಗಿ ಕೂರುವಂತ ಒಂದು ಬಸವ ಧ್ಯಾನ ಮಂಟಪದ ನಿರ್ಮಾಣ ಮಾಡುವುದು. 
ಮೊಬೈಲ್ ಸಂಖ್ಯೆ. 9164343082. 9775094564. 6361432543. 9844145927 ಇವರನ್ನು ಸಂಪರ್ಕಿಸಬಹುದು

Post a Comment

0 Comments