ಕಿತ್ತೂರು ವಿಜಯ ಸುದ್ದಿ ಮಾಸಿಕ ಶಿವಾನುಭವದ ನಿಮಿತ್ತ ಶರಣರ ವಚನಗಳಲ್ಲಿ ಆರೋಗ್ಯ ಕುರಿತು ಉಪನ್ಯಾಸ.


 ಕಿತ್ತೂರು ವಿಜಯ ಸುದ್ದಿ.ಮಾಸಿಕ ಶಿವಾನುಭವದ ನಿಮಿತ್ತ "ಶರಣರ ವಚನಗಳಲ್ಲಿ ಆರೋಗ್ಯ" ಕುರಿತು.ಉಪನ್ಯಾಸ.

ಚನ್ನಮ್ಮನ ಕಿತ್ತೂರು:- ಕಿತ್ತೂರಿನ ಕಲ್ಮಠದ ಶ್ರೀ ಶಂಕರ ಚಂದರಗಿ ಸಭಾ ಭವನದಲ್ಲಿ ಸೋಮವಾರ

ದಿನಾಂಕ ೧೩ ರಂದು ಸಾಯಂಕಾಲ ೬ ಗಂಟೆಗೆ ರಾಜಗುರು ಸಂಸ್ಥಾನ ಕಲ್ಮಠ ಮತ್ತು ಕಿತ್ತೂರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಗಳ ಸಂಯುಕ್ತ ಆಶ್ರಯದಲ್ಲಿ ೧೫ ನೆಯ ಮಾಸಿಕ ಶಿವಾನುಭವದ ಪ್ರಯುಕ್ತವಾಗಿ ಮಾಜಿ ಸೈನಿಕರಿಗೆ, ಸಾಧಕರಿಗೆ ಸನ್ಮಾನ ಮತ್ತು ಉಪನ್ಯಾಸ ಕಾರ್ಯಕ್ರಮಗಳು ಜರುಗಲಿದೆ ಎಂದು ಕಿತ್ತೂರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಸ್.ಬಿ.ದಳವಾಯಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಲ್ಮಠದ ಪೂಜ್ಯ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಮತ್ತು ನಿಚ್ಚಣಕಿಯ ಪೂಜ್ಯ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಲಿರುವ ಈ ಸಮಾರಂಭದ ಅಧ್ಯಕ್ಷತೆಯನ್ನು ಕಾದರವಳ್ಳಿಯ ಪೂಜ್ಯ ಶ್ರೀ ಹಜರತ ತನವೀರ್ ಸಾಬ್ ಮುಜಾವರ್ ವಹಿಸಲಿದ್ದಾರೆ. ಮಾಜಿ ಸೈನಿಕರೂ, ಆಯುರ್ವೇದಿಕ್ ವೈದ್ಯರೂ, ಕಿತ್ತೂರ ರಾಣಿ ಚನ್ನಮ್ಮ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರೂ ಆಗಿರುವ ಡಾ.ಎಸ್.ಪಿ.ಹಿರೇಮಠ "ಶರಣರ ವಚನಗಳಲ್ಲಿ ಆರೋಗ್ಯ" ಕುರಿತು ಉಪನ್ಯಾಸ ನೀಡುವರು. ಐರಮ್ಯಾನ್ ಖ್ಯಾತಿ ಪಡೆದ ಬೆಳಗಾವಿಯ ಸಂಜೀವಿನಿ ಆಸ್ಪತ್ರೆಯ ಡಾ.ಸತೀಶ ಆರ್.ಚೌಗಲಾ ಮತ್ತು ಹಿರೆನಂದಿಹಳ್ಳಿಯ ನಿವೃತ್ತ ಸೈನಿಕರಾದ ಶ್ರೀ ನಿಂಗಪ್ಪ ವಿ.ಅಂಗಡಿ ಇವರುಗಳನ್ನು ಗೌರವಿಸಲಾಗುವದು.

ಶ್ರೀ ಈಶ್ವರ ಗಡಿಬಿಡಿ, ಶ್ರೀ ಪ್ರಲ್ದಾದ ಶಿಗ್ಗಾಂವಿ ನೇತೃತ್ವದ ಶ್ರೀ ಗ್ರಾಮ ದೇವಿ ಭಜನಾ ಮಂಡಳ,ರಾಣಿ ಚನ್ನಮ್ಮ ಮತ್ತು ಬೆಳ್ಳಿ ಚುಕ್ಕಿ ಮಹಿಳಾ ವೇದಿಕೆ ಇವರಿಂದ ಸಂಗೀತ ಕಾರ್ಯಕ್ರಮಗಳು ನಡೆಯಲಿದ್ದು ಕಿತ್ತೂರ ನಾಡಿನ ಶರಣ ಶರಣೆಯರು ಭಾಗವಹಿಸಬೇಕೆಂದು ಶ್ರೀ ಕಲ್ಮಠದ ಸಕಲ ಸದ್ಭಕ್ತರ ಪರವಾಗಿ ಡಾ.ಎಸ್.ಬಿ.ದಳವಾಯಿ ಮನವಿ ಮಾಡಿದ್ದಾರೆ.

Post a Comment

0 Comments