ಕಿತ್ತೂರು ವಿಜಯ ಸುದ್ದಿ.ಬೆಳಗಾವಿಯಲ್ಲಿ ಬಸ್ ಕಂಡಕ್ಟರ್ ಮೇಲೆ ಮರಾಠಿ ಹುಡುಗರಿಂದ ಗೂಂಡಾಗಿರಿ: ಮರಾಠಿ ಬರಲ್ಲ ಎಂದಿದ್ದಕ್ಕೆ ಹಿಗ್ಗಾಮುಗ್ಗಾ ಥಳಿತ. ಕಂಡಕ್ಟರ್ ಕಣ್ಣೀರು


 ಕಿತ್ತೂರು ವಿಜಯ ಸುದ್ದಿ .ಬೆಳಗಾವಿ ಕನ್ನಡ ಮಾತಾಡು ಅಂದಿದ್ದಕ್ಕೆ ಕಂಡೆಕ್ಟರ್ ಮೇಲೆ ಹಲ್ಲೆ‌ ನಡೆಸಿದ ಘಟನೆ ಬೆಳಗಾವಿ ತಾಲೂಕಿನ ಸುಳೇಭಾವಿ ಬಾಳೇಕುಂದ್ರಿ ಗ್ರಾಮದ ಮಧ್ಯೆ ನಡೆದಿದೆ.‌ಚಲಿಸುತ್ತಿದ್ದ ಬಸ್ ನಿಲ್ಲಿಸಿ ಬಸ್ ಕಂಡೆಕ್ಟರ್ ಮಹಾದೇವ್ ಮೇಲೆ ಮರಾಠಿ ಪುಂಡರ ಗುಂಪು ಹಲ್ಲೆ‌ ಮಾಡಿದೆ. ಬಸ್ ನಲ್ಲಿದ್ದ ಯುವತಿ ಟಿಕೇಟ್ ಕೊಡು ಎಂದು ಮರಾಠಿಯಲ್ಲಿ ಕೇಳಿದ್ದಾಳೆ. ಯುವತಿಯೊಂದಿಗೆ ಯುವಕನೊಬ್ಬ ಪ್ರಯಾಣ ಮಾಡುತ್ತಿದ್ದರಿಂದ ಯುವತಿ ಎರಡು ಟಿಕೇಟ್ ಕೇಳಿದ್ದಾಳೆ.ಈ ವೇಳೆ ಕಂಡೆಕ್ಟರ್ ಮಹಾದೇವ್ ತನಗೆ ಮರಾಠಿ ಬರೊಲ್ಲ‌ ಕನ್ನಡದಲ್ಲಿ ಮಾತಾಡುವಂತೆ ಹೇಳಿದ್ದಾನೆ. ಕಂಡೆಕ್ಟರ್ ಮರಾಠಿ ಬರಲ್ಲ ಎನ್ನುತ್ತಿದ್ದಂತೆ ಚಲಿಸುತ್ತಿದ್ದ ಬಸ್ ನಿಲ್ಲಿಸಿ ಕಂಡೆಕ್ಟರ್ ಮೇಲೆ ಹಲ್ಲೆ ಮಾಡಲಾಗಿದೆ. ಸಧ್ಯ ಹಲ್ಲೆಗೊಳಗಾದ ಬಸ್ ಕಂಡೆಕ್ಟರ್ ಮಾಳಮಾರುತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.‌ ಕನ್ನಡದ ನೆಲದಲ್ಲಿಯೇ ಕನ್ನಡ ಮಾತಾಡು ಎಂದಿದ್ದಕ್ಕೆ ಹಲ್ಲೆ‌ ಮಾಡಿರೋದನ್ನು ಕನ್ನಡಪರ ಸಂಘಟನೆಗಳು ಖಂಡಿಸಿವೆ. ಇನ್ನು ಮರಾಠಿ ಪುಂಡರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಕನ್ನಡಿಗರು ಒತ್ತಾಯಿಸಿದ್ದಾರೆ.

Post a Comment

0 Comments