ಚನ್ನಮ್ಮನ ಕಿತ್ತೂರು, ಕಿತ್ತೂರು ವಿಜಯ ಸುದ್ದಿ
ಇಲ್ಲಿಯ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಶಂಕರ ಚಂದರಗಿ ಸಭಾ ಭವನದಲ್ಲಿ 26 ರಂದು ಸಾಯಂಕಾಲ7-00. ಗಂಟೆಗೆ ರಾಜಗುರು ಸಂಸ್ಥಾನ ಕಲ್ಮಠ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಸಂಂ-ಮುಕ್ತ ಆಶ್ರಯದಲ್ಲಿ ಮಹಾಶಿವರಾತ್ರಿಯ ನಿಮಿತ್ತವಾಗಿ ಕೃತಿ ಬಿಡುಗಡೆ, ಸಂಗೀತ ಕಾರ್ಯಕ್ರಮಗಳು, ಮಕ್ಕಳಿಂದ ನೃತ್ಯ ಮತ್ತು ಉಪನ್ಯಾಸ ಕಾರ್ಯಕ್ರಮಗಳು ಜರುಗಲಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ಡಾ.ಎಸ್.ಬಿ.ದಳವಾಯಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾ-ಜಯೋಗೀಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಲಿರುವ ಈ ಸಮಾರಂಭದ ಅಧ್ಯಕ್ಷತೆಯನ್ನು ನಿಚ್ಚಣಕಿ ಮಡಿವಾಳೇಶ್ವರ ಮಠದ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು ವಹಿಸಲಿದ್ದಾರೆ. ಡಾ.ಸಿ.ಕೆ. ನಾವಲಗಿಯವರು ಬರೆದಿರುವ "ಬಟ್ಟಬಯಲು" ಕೃತಿಯನ್ನು ಸಾಹಿತಿಗಳೂ ಮತ್ತು ಹಿರಿಯ ಪತ್ರಕರ್ತ ಸಂತೋಷ ಚಿನಗುಡಿ ಬಿಡುಗಡೆ ಮಾಡಲಿದ್ದಾರೆ. ವಿಶ್ರಾಂತ ಪ್ರಾಚಾರ್ಯ ಡಾ.ಸಿ.ಕೆ. ನಾವಲಗಿಯವರು ಜಾನಪದದಲ್ಲಿ ಶಿವರಾತ್ರಿ ಕುರಿತು ಉಪನ್ಯಾಸ ನೀಡುವರು.ಈಶ್ವರ ಗಡಿಬಿಡಿ, ಪ್ರಹ್ಲಾದ ಶಿಗ್ಗಾಂವಿ ನೇತೃತ್ವದ ಶ್ರೀ ಗ್ರಾಮ ದೇವಿ ಭಜನಾ ಮಂಡಳ, ರಾಣಿ ಚನ್ನಮ್ಮ ಮತ್ತು ಬೆಳ್ಳಿ ಚುಕ್ಕಿ ಮಹಿಳಾ ವೇದಿಕೆಯ ಸರ್ವ ಸದಸ್ಯರಿಂದ ಸಂಗೀತ, ರಾಜಗುರು ಶಿಕ್ಷಣ ಸಂಸ್ಥೆ ಮತ್ತು ಸಂಕಲ್ಪ ನೃತ್ಯಾಲಯ ಮಕ್ಕಳಿಂದ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ.ಐತಿಹಾಸಿಕ ಕಿತ್ತೂರು ನಾಡಿನ ಸರ್ವ ಶರಣ ಶರಣೆಯರು ಭಾಗವಹಿಸಬೇಕೆಂದು ಶ್ರೀ ಕಲ್ಮಠದ ಸಕಲ್ಪ ಸದ್ಭಕ್ತರ ಪರವಾಗಿ ಡಾ. ಎಸ್.ಬಿ.ದಳವಾಯಿ ಮನವಿ ಮಾಡಿದ್ದಾರೆ.
0 Comments