ಕಿತ್ತೂರು ವಿಜಯ ಸುದ್ದಿ. ಮಹಾಶಿವರಾತ್ರಿಯಂದು ನಡೆದ ಚುಂಬಕ ಶಕ್ತಿಯ ಬಟ್ಟೆ ಬಯಲು ಕೃತಿ ಬಿಡುಗಡೆ.


 ಕಿತ್ತೂರು ವಿಜಯ ಸುದ್ದಿ.ಮಹಾಶಿವರಾತ್ರಿಯಂದು ಚುಂಬಕ ಶಕ್ತಿಯ "ಬಟ್ಟಬಯಲು" ಕೃತಿ ಬಿಡುಗಡೆ ಚನ್ನಮ್ಮನ ಕಿತ್ತೂರು:-ಕಿತ್ತೂರಿನ ಕಲ್ಕತದ ಶ್ರೀ ಶಂಕರ ಚಂದರಗಿ ಸಭಾ ಭವನದಲ್ಲಿ ರಾಜಗುರು ಸಂಸ್ಥಾನ ಕಲ್ಮಕ ಮತ್ತು ಕಿತ್ತೂರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಗಳ ಸಂಯುಕ್ತ ಆಶ್ರಯದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಡಾ.ಸಿ.ಕೆ.ನಾವಲಗಿಯವರ "ಬಟ್ಟಬಯಲು" ಕೃತಿಯನ್ನು ಬೆಳಗಾವಿಯ ಪ್ರಜಾವಾಣಿ ಪತ್ರಿಕೆಯ ಹಿರಿಯ ವರದಿಗಾರ ಹಾಗೂ ಚಿಂತಕ ಶ್ರೀ ಸಂತೋಷ ಚಿನಗುಡಿ ಬಿಡುಗಡೆಗೊಳಿಸಿ 12 ನೆಯ ಶತಮಾನದ ಶರಣರು ನುಡಿದಂತೆ ಬರೆದು ಬದುಕಿದರು.ಆದರೆ ನಾವಲಗಿ ಅವರು ತಾವು ನಡೆದಂತೆ ಬರೆದಿದ್ದಾರೆ.ಶರಣರ ವಿಚಾರ ಧಾರೆಗಳನ್ನು ವರ್ತಮಾನದ ಚಾಣಿಗೆಯಲ್ಲಿ ಹಾಕಿ ಹೆಚ್ಚು ಮೃದು ಮಾಡಿ ಓದುಗರಿಗೆ ನೀಡಿದ್ದಾರೆ.ಇಲ್ಲಿಯ ಬಯಲು,ಕದಳಿ, ಕಾಯಕ, ದಾಸೋಹ, ಸಂತ ಬಸವಣ್ಣ,ದಂಥ ಶರಣರ ಪರಿಕಲ್ಪನೆಗಳು/ಲೇಖನಗಳು ಚುಂಭಕ ಶಕ್ತಿ ಹೊಂದಿದ್ದು ನಾವಲಗಿಯವರ ಪ್ರಾಯೋಗಿಕ ವಿಮರ್ಶೆಯ ಅರ್ಥಸಿರಿಯನ್ನು ತುಂಬಿಕೊಂಡಿದೆ.ಅಂತೆಯೇ ಶರಣೆಯರ ಒಲವು ನಿಲುವು, ಹರಳಯ್ಯ ಮಧುವರಸ, ವಚನ ಸಾಹಿತ್ಯ ದಂತಹ ಬರಹಗಳು ಕಂಪನ ಹುಟ್ಟಿಸುತ್ತವೆ.ಈ ಕೃತಿಯಲ್ಲಿ ನಾವಲಗಿಯವರು ಶರಣ ಶರಣೆಯರ ಬದುಕು ಬರಹ ಮತ್ತು ಹೋರಾಟದ ನಿಲುವುಗಳನ್ನು ಬೇರೆಯವರಿಗಿಂತ ವಿಭಿನ್ನವಾಗಿ ಚರ್ಚಿಸಿದ್ದು ಗಮನಾರ್ಹವಾಗಿದೆ.

ಸೂರ್ಯಕಾಂತಿ ಹೊಲದಲ್ಲಿ ತೆನೆಯೆತ್ತಿ ನಿಂತ ಜೋಳದ ದಂಟಿನಂತೆ ಇಲ್ಲಿಯ ಅನೇಕ ವಚನಗಳ ವಿಶ್ಲೇಷಣೆ ಆಸಕ್ತಿದಾಯಕವಾಗಿವೆ ಎಂದು ತಿಳಿಸಿದರು.ಮಹಾಶಿವರಾತ್ರಿ ಕುರಿತು ಉಪನ್ಯಾಸ ನೀಡಿದ ಡಾ.ಸಿ.ಕೆ.ನಾವಲಗಿಯವರು ಜನಪದರ ಪ್ರಕಾರ ಬೇಡರ ಕಣ್ಣಪ್ಪನಿಂದ ದಕ್ಷಿಣ ಭಾರತದಲ್ಲಿ ಶಿವರಾತ್ರಿ ಆರಂಭವಾದರೆ ಉತ್ತರ ಭಾರತದಲ್ಲಿ .. ಚಂದ್ರಸೇನ ಮಹಾರಾಜರ ಕಾಲದಲ್ಲಿ ಆರಂಭವಾಯಿತು ಎಂದು ತಿಳಿಸಿದರು.ಆಶೀರ್ವಚನ ನೀಡಿದ ಕಲ್ಮಠದ ಪೂಜ್ಯ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಭಕ್ತಿಯಿಂದ ಪ್ರತಿ ನಿತ್ಯ ಶಿವ ಸ್ಮರಣೆ ಮಾಡಿದರೆ ಶಿವ ಖಂಡಿತ ಮೆಚ್ಚಿ ನಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂದು ತಿಳಿಸಿದರು. ಕಿತ್ತೂರ ನಾಡ ವಿದ್ಯಾವರ್ಧಕ ಸಂಘದ

ಚೇರಮನ್ನರಾದ ಶ್ರೀ ಜಗದೀಶ ವಸ್ತ್ರದ, ಶ್ರೀ ವಿಶ್ವನಾಥ ಬಿಕ್ಕಣ್ಣವರ, ಪ್ರಸಾದ ಸೇವೆ ಗೈದ ಶ್ರೀಮತಿ ಅಕ್ಷತಾ ಚೇತನ ದಳವಾಯಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.ಈಶ್ವರ ಗಡಿಬಿಡಿ ಮತ್ತು ಪ್ರಹ್ಲಾದ ಸಿಗ್ಗಾಂವಿ ನೇತೃತ್ವದ ಗ್ರಾಮ ದೇವಿ ಭಜನಾ ಮಂಡಳದವರು ಶಿವನ ಗೀತೆ ಹಾಡಿದರು. ಮಂಜುನಾಥ ಕಳಸಣ್ಣವರ ಸ್ವಾಗತಿಸಿದರು. ಕಿತ್ತೂರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಸ್.ಬಿ.ದಳವಾಯಿ ಅತಿಥಿಗಳನ್ನು ಪರಿಚಯಿಸಿದರು. ಪ್ರಭಾವತಿ ಲದ್ದಿಮಠ ನಿರೂಪಿಸಿದರು. ವಿದ್ಯಾ ಜವಳಿ ವಂದಿಸಿದರು.ವೈಷ್ಣವಿ ಚನ್ನಂಗಿ ಮತ್ತು ಸಾಂಘವಿ ಶೆಟ್ಟಿ ಇವರ ಭರತ ನಾಟ್ಯ, ಸಂಕಲ್ಪ ನೃತ್ಯಾಲಯ ಮತ್ತು ರಾಜಗುರು ಶಿಕ್ಷಣ ಸಂಸ್ಥೆಯ ಮಕ್ಕಳ ನೃತ್ಯಗಳು, ರಾಣಿ ಚನ್ನಮ್ಮ ಮಹಿಳಾ ವೇದಿಕೆಯ ಸದಸ್ಯರ ಗೀತೆಗಳು ಎಲ್ಲರನ್ನು ರಂಜಿಸಿದವು.

Post a Comment

0 Comments