ಕಿತ್ತೂರು ವಿಜಯ ಸುದ್ದಿ.ದುಬೈಯಲ್ಲಿ ನಡೆದ. ಚಾಂಪಿಯನ್ ಟ್ರೋಪಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 4 ವಿಕೆಟ್ ಭರ್ಜರಿ ಜಯ ಸಾಧಿಸಿದ ಭಾರತ


 ದುಬೈಯಲ್ಲಿ ನಡೆದ. ಚಾಂಪಿಯನ್ ಟ್ರೋಪಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 4 ವಿಕೆಟ್ ಭರ್ಜರಿ ಜಯ ಸಾಧಿಸಿದ ಭಾರತ ಕಿತ್ತೂರು ವಿಜಯ ಸುದ್ದಿ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ಟಾಸ್ ಗೆದ್ದ ಕಿವೀಸ್ ಬಳಗ ಮೊದಲು ಬ್ಯಾಟಿಂಗ್ ಮಾಡಿತು. ನ್ಯೂಜಿಲೆಂಡ್ ತಂಡ 7 ವಿಕೆಟ್ ನಷ್ಟಕ್ಕೆ 251 ರನ್ ಕಲೆಹಾಕಿತು. ಈ ಗುರಿಯನ್ನು ಭಾರತ ಇನ್ನು 6 ಎಸೆತಗಳು ಬಾಕಿ ಇರುವಂತೆ ಗೆದ್ದು ಬೀಗಿದೆ.ಮೊದಲು ಬ್ಯಾಟಿಂಗ್‌ ಆರಂಭಿಸಿದ ನ್ಯೂಜಿಲೆಂಡ್ ತಂಡವು 251 ರನ್ ಕಲೆಹಾಕಿ ಭಾರತಕ್ಕೆ 252ರ ಗುರಿಯನ್ನು ಮುಂದಿಟ್ಟಿತು.ರೋಹಿತ್- ಶುಭನ್ ಶತಕದ ಜೊತೆಯಾಟ ಈ ಹಿಂದಿನ ಪಂದ್ಯಗಳಲ್ಲಿ ಉತ್ತಮ ಆರಂಭಪಡೆದರೂ ಅದನ್ನು ದೊಡ್ಡ ಮೊತ್ತವಾಗಿಸುವಲ್ಲಿ ಎಡವಿದ್ದ ರೋಹಿತ್ ಶರ್ಮಾ ಈ ಬಾರಿ ಎಡವಲಿಲ್ಲ. ಪ್ರಥಮ ಇನ್ನಿಂಗ್ಸ್ ಗೆ ಶುಭಮನ್ ಗಿಲ್ ಅವರ ಜೊತೆ ಶತಕದ ಜೊತೆಯಾಟವನ್ನು ಆಡಿದ ಅವರು ವೈಯಕ್ತಿಕವಾಗಿ ಅರ್ಧಶತಕವನ್ನೂ ಪೂರೈಸಿಕೊಂಡರು.50 ಎಸೆತಗಳನ್ನು ಎದುರಿಸಿದ ಶುಭನ್ ಗಿಲ್‌ ಅವರು 31 ರನ್ ಗಳನ್ನು ಗಳಿಸಿದರು. 19ನೇ ಓವರ್ ನ 4ನೇ ಎಸೆತದಲ್ಲಿ ಅರನ್ನು ಫಿಲಿಪ್ಸ್ ಗೆ ಕ್ಯಾಚ್ ಕೊಡಿಸುವ ಮೂಲಕ ಭಾರತದ ಪ್ರಥಮ ವಿಕೆಟ್ ಎಗರಿಸಿದರು.ನಂತರ ಬಂದ ವಿರಾಟ್ ಕೊಹ್ಲಿ ಅವರು ಸಹ ಬಂದ ವೇಗದಲ್ಲೇ ಪೆವಿಲಿಯನ್ ಸೇರಿಕೊಂಡರು. ನಂತರ ರೋಹಿತ್ ಶರ್ಮಾ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕಳೆದುಕೊಂಡರು. 83 ಎಸೆತಗಳಿಂದ ಅವರು 7 ಬೌಂಡರಿ ಮತ್ತು 3 ಸಿಕ್ಸರ್ ಗಳಿದ್ದ 76 ರನ್ ಗಳಿಸಿದರು. ಆ ಬಳಿಕ ಕೆಎಲ್ ರಾಹುಲ್ (34 ನಾಟೌಟ್) ಮತ್ತು ಹಾರ್ದಿಕ್ ರವೀಂದ್ರ ಜಡೇಜಾ(9 ನಾಟೌಟ್) ಗೆಲುವಿನ ದಡ ಸೇರಿಸಿದರು.ಟಾಸ್ ಗೆದ್ದ ಮೊದಲ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡು ಮೊದಲು ಬ್ಯಾಟಿಂಗ್ ಆರಂಭಿಸಿರುವ ಕಿವೀಸ್ ಪಡೆ ಭರ್ಜರಿ ಆರಂಭ ಪಡೆಯಿತು. ಕಿವೀಸ್ ಪರ ಆರಂಭಿಕರಾಗಿ ಕಣಕ್ಕಿಳಿದ ರಚಿನ್ ರವೀಂದ್ರ (37 ರನ್) ಮತ್ತು ವಿಲ್ ಯಂಗ್ (15 ರನ್) ಜೋಡಿ ಮೊದಲ ವಿಕೆಟ್‌ ಗೆ 57 ರನ್ ಗಳ ಭರ್ಜರಿ.ಜೊತೆಯಾಟವಾಡಿತು.ಆದರೆ ಈ ಹಂತದಲ್ಲಿ ದಾಳಿಗಿಳಿದ ಮಿಸ್ಟ್ರಿ ಸ್ಪಿನ್ನ‌ರ್ ವರುಣ್ ಚಕ್ರವರ್ತಿ ವಿಲ್ ಯಂಗ್ ರನ್ನು ಔಟ್ ಮಾಡಿ ಭಾರತಕ್ಕೆ ಮೊದಲ ಮುನ್ನಡೆ ತಂದಿತ್ತರು. ಬಳಿಕ 37 ರನ್.ಗಳಿಸಿ.ಅಪಾಯಕಾರಿಯಾಗುತ್ತಿದ್ದ ರಚಿನ್ ರವೀಂದ್ರ ಕುಲದೀಪ್ ಯಾದವ್ ರ ಮೊದಲ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು. ಬಳಿಕ ಕೇನ್ ವಿಲಿಯಮ್ಸ್ನ್ ಕೂಡ ಕುಲದೀಪ್ ಯಾದವ್ ಗೆ ವಿಕೆಟ್ ಒಪ್ಪಿಸಿದರು.ಈ ಹಂತದಲ್ಲಿ ಕ್ರೀಸ್ ಗೆ ಬಂದ ಡರಿಲ್ ಮೆಚೆಲ್ ಕಿವೀಸ್ ಬ್ಯಾಟಿಂಗ್ ಗೆ ಬಲ ತುಂಬಿದರು. 101 ಎಸೆತಗಳನ್ನು ಎದುರಿಸಿದ ಮಿಚೆಲ್ 3 ಬೌಂಡರಿ ಸಹಿತ 63 ರನ್ ಕಲೆಹಾಕಿದರು. ಅವರಿಗೆ ಟಾಮ್ ಲಾಥಮ್ (14 ರನ್) ಮತ್ತು ಗ್ಲೆನ್ ಫಿಲಿಪ್ಸ್ (34 ರನ್) ಉತ್ತಮ ಸಾಥ್ ನೀಡಿದರು. ಬಳಿಕ ಕ್ರೀಸ್ ಗೆ ಬಂದ ಬ್ರೇಸ್ ವೆಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಕಿವೀಸ್ 250ರ ಗಡಿ ದಾಟುವಂತೆ ನೋಡಿಕೊಂಡರು. ಬ್ರೇಸ್ ವೆಲ್ ಕೇವಲ 40 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 3 ಬೌಂಡರಿ ಸಹಿತ ಅಜೇಯ 53 ರನ್ ಗಳಿಸಿದರು.• ನ್ಯೂಜಿಲೆಂಡ್ ತಂಡ ನಿಗಧಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 251ರನ್ ಕಲೆಹಾಕಿ ಭಾರತಕ್ಕೆ ಗೆಲಲ್ಲು 252ರನ್ ಗಳ ಸವಾಲಿನ ಗುರಿ ನೀಡಿತು.• ಭಾರತ ತಂಡ ನಿಗಧಿತ 50 ಓವರ್‌ಗಳಲ್ಲಿ 254 ರನ್ ಗಳಿಸಿ 4 ವಿಕೆಟ್ ಅಂತರದಲ್ಲಿ ಭಾರತಕ್ಕೆ ಜಯಗಳಿಸಿದೆ. ರೋಹಿತ್ ಶರ್ಮಾ 76, ಶ್ರೇಯಸ್ 48, ಕೆಎಲ್ ರಾಹುಲ್ 34 ಮತ್ತು ಜಡೇಜಾ ಸಹಿತ ಅಜೇಯ 9 ರನ್ ಗಳಿಸಿದರು.Champions Trothy 2025: ಭಾರತ್ ಚಾಂಪಿಯನ್: 25 ವರ್ಷ ಬಳಿಕ ಕಿವೀಸ್ ವಿರುದ್ಧ ಸೇಡು ತೀರಿಸಿಕೊಂಡ ಭಾರತ

Post a Comment

0 Comments