ಕಿತ್ತೂರು ವಿಜಯ ಸುದ್ದಿ. ಬೆಳಗಾವಿ ಸಚಿವ ಸತೀಶ್ ಜಾರಕಿಹೊಳಿಗೆ ಗೌರವ ಡಾಕ್ಟರೇಟ್: ಬೆಳಗಾವಿ ಪತ್ರಕರ್ತರಿಂದ ಸನ್ಮಾನ


ಕಿತ್ತೂರು ವಿಜಯ ಸುದ್ದಿ ಬೆಳಗಾವಿ- ಸರಳ ಸಜ್ಜನಿಕೆಯ ರಾಜ್ಯದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ‌ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಇಂದು ಬೆಳಗಾವಿ ಸಮಸ್ತ ಪತ್ರಕರ್ತರ ಬಳದಿಂದ ಸನ್ಮಾನಿಸಲಾಯಿತು.ಇಂದು ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್, ಬೆಳಗಾವಿ ಮುದ್ರಣ ಮಾದ್ಯಮ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಪತ್ರಕರ್ತರು ಸಚಿವರನ್ನ ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಭೇಟಿ ಮಾಡಿ ಸನ್ಮಾನಿಸಿದರು.ಸನ್ಮಾನದ ವೇಳೆ ಹಿರಿಯ ಪತ್ರಕರ್ತರಾದ ನೌಷಾಧ ಬಿಜಾಪುರ,ರಾಜು ಗೌಳಿ, ಶ್ರೀಶೈಲ್ ಮಠದ, ಮಂಜುನಾಥ ಪಾಟೀಲ್, ಶ್ರೀಕಾಂತ ಕುಬಕಡ್ಡಿ, ಚಂದ್ರಕಾಂತ ಸುಗಂಧಿ, ಅನೀಲ ಕಾಜಗಾರ, ಶ್ರೀಧರ ಕೋಟಾರಗಸ್ತಿ, ಮೈಲಾರಿ ಪ‌ಠಾತ್, ಅಡವೆಪ್ಪ ಪಾಟೀಲ್, ಇಮಾಮ್ ಗೂಡುನವರ್, ಸಿದ್ಧನಗೌಡ ಪಾಟೀಲ್, ಸುನೀಲ್ ಪಾಟೀಲ್, ಮುನ್ನಾ ಬಾಗವಾನ ಸೇರಿ ಹಲವು ಪತ್ರಕರ್ತರು ಉಪಸ್ಥಿತರಿದ್ದರು

Post a Comment

0 Comments