ಚನ್ನಮ್ಮನ ಕಿತ್ತೂರು: ಕೇಂದ್ರ ಸರ್ಕಾರದ ಯೋಜನೆಗಳಗಾದ ಅಪಘಾತ ಜೀವ ವಿಮೆಯಾದ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ(PMJJBY) ಹಾಗೂ ಪ್ರಧಾನಮಂತ್ರಿ ಸುಕ್ಷಾ ಬಿಮಾ ಯೋಜನೆ (PMSBY) ಯಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ತಾ.ಪಂ ಸಹಾಯಕ ನಿರ್ದೇಶಕ(ಗ್ರಾಉ) ಮಹಮ್ಮದ್ ಗೌಸ್ ರಿಸಾಲ್ದಾರ್ ತಿಳಿಸಿದರು.
ತಾಲೂಕು ಪಂಚಾಯತ ಸಭಾಭವನದಲ್ಲಿ ಗುರುವಾರ ನಡೆದ 2ನೇ ಹಂತದ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ(PMJJBY) ಹಾಗೂ ಪ್ರಧಾನಮಂತ್ರಿ ಸುಕ್ಷಾ ಬಿಮಾ ಯೋಜನೆ (PMSBY) ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೊದಲನೇ ಹಂತದಲ್ಲಿ ತಾಲೂಕು ಪಂಚಾಯತ ಹಾಗೂ ರಾಷ್ಟ್ರೀಯ ಎಲ್ಲಾ ಬ್ಯಾಂಕ್ ಗಳ ವತಿಯಿಂದ ಹಮ್ಮಿಕೊಂಡ ಅಭಿಯಾನದಲ್ಲಿ 7795 ಅರ್ಜಿ ಪಡೆದು ಸಂಬಂಧಿಸಿದ ಬ್ಯಾಂಕ್ ಗಳಿಗೆ ಅರ್ಜಿ ತಲುಪಿಸಿದ್ದೇವೆ. ಇಂದು 2 ನೇ ಹಂತದ ಅಭಿಯಾನದಲ್ಲಿ ಸುಮಾರು 3100 ಅರ್ಜಿಗಳನ್ನು ಪಡೆದು ಸಂಬಂಧಿಸಿದ ರಾಷ್ಟ್ರೀಯ ಬ್ಯಾಂಕ್ ಅಧಿಕಾರಿಗಳಿಗೆ ತಲುಪಿಸಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಸಹಾಯಕ ನಿದೇರ್ಶಕ(ಪಂರಾ) ಸುರೇಶ ನಾಗೋಜಿ, ಸಹಾಯಕ ಲೆಕ್ಕಾಧಿಕಾರಿ ಈರಣ್ಣ ಕಮ್ಮಾರ, ಕೆನರಾ ಬ್ಯಾಂಕ್ ನ ಚೀಫ್ ಮ್ಯಾನೆಜೆರ್ ಸಿ. ಅರಂಗರಾಜನ್, ಕೆವಿಜಿ ಬ್ಯಾಂಕ್ಯ ಮ್ಯಾನೆಜರ್ ಮಹೇಂದ್ರ ತಳವಾರ, ಐಇಸಿ ಸಂಯೋಜಕಿ ಎಸ್.ಬಿ.ಜವಳಿ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಸಾಯಕ ಮಿತ್ರರು, ಬಿಎಫ್ಟಿಗಳು, ಹಾಗೂ ಸಾರ್ವಜನಿಕರು ಹಾಜರಿದ್ದರು.
0 Comments